ಆ್ಯಪ್ನಗರ

ನವಲಗುಂದ ಪುರಸಭೆ: ಶೇ.76 ಮತದಾನ

ನವಲಗುಂದ : ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳ ಅಬ್ಬರದ ಪ್ರಚಾರದ ಮಧ್ಯೆಯೂ ಬುಧವಾರ ಶೇ.76 ಮತದಾನ ಆಯಿತು.

Vijaya Karnataka 30 May 2019, 5:00 am
ನವಲಗುಂದ : ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳ ಅಬ್ಬರದ ಪ್ರಚಾರದ ಮಧ್ಯೆಯೂ ಬುಧವಾರ ಶೇ.76 ಮತದಾನ ಆಯಿತು.
Vijaya Karnataka Web DRW-29-NVL-1A
ನವಲಗುಂದ ಮಹೆಬೂಬ ನಗರ (ಕಳ್ಳಿಮಠ) ಓಣಿಯಲ್ಲಿ 6ನೇ ವಾರ್ಡ್‌ನ ಮತಗಟ್ಟೆಯಲ್ಲಿ ಮತ ಚಲಾವಣೆಗೆ ಸರದಿಯಲ್ಲಿ ನಿಂತಿರುವುದು.


23 ವಾರ್ಡ್‌ಗಳಲ್ಲಿ ಬಹುತೇಕ ಶಾಂತಿಯುತವಾಗಿ ಮತದಾನ ನಡೆದರೆ, 1ನೇ ವಾರ್ಡ್‌ನಲ್ಲಿ ನಕಲಿ ಮತದಾನವಾಗಿದೆ ಎಂಬ ಆರೋಪ, ಪ್ರತ್ಯಾರೋಪದ ಮಧ್ಯೆ ಅರ್ಧ ಗಂಟೆ ಮತದಾನ ವಿಳಂಬವಾಯಿತು. ತಾಪಂನಲ್ಲಿ ಸ್ಥಾಪಿಸಲಾದ 5ನೇ ವಾರ್ಡ್‌ನ ಮತಗಟ್ಟೆ ಹತ್ತಿರ ಮತದಾರರ ಮನವೊಲಿಸುವ ಕಸರತ್ತು ನಡೆಸುತ್ತಿರುವ ವೇಳೆ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ನಡುವೆ ಮಾತಿನ ಚಕಮಕಿ ನಡೆದ ಘಟನೆ ಹೊರತುಪಡಿಸಿ ಎಲ್ಲಿಯೂ ಅಹಿತಕರ ಘಟನೆ ನಡೆದಿಲ್ಲ.

ಒಟ್ಟು 23 ವಾರ್ಡ್‌ಗಳಿಗೆ ಮತದಾನ ನಡೆದಿದ್ದು, ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆ ವರೆಗೆ ಬಿರುಸಿನ ಮತದಾನ ನಡೆದರೆ ಮಧ್ಯಾಹ 12 ಗಂಟೆಯಿಂದ 4 ಗಂಟೆ ವರೆಗೆ ಮಂದಗತಿಯಲ್ಲಿ ನಡೆಯಿತು. ಸಂಜೆ 4 ಗಂಟೆಯಿಂದ 5 ಗಂಟೆ ವರೆಗೆ ಬಿರುಸಿನ ಮತದಾನ ನಡೆಯಿತು.

ಮಾಜಿ ಸಚಿವ ಕೆ.ಎನ್‌.ಗಡ್ಡಿ ತಾಪಂನಲ್ಲಿ ಸ್ಥಾಪಿಸಲಾದ 5ನೇ ಮತಗಟ್ಟೆಯಲ್ಲಿ ಹಕ್ಕನ್ನು ಚಲಾಯಿಸಿದರು. ಕಾಂಗ್ರೆಸ್‌ ಯುವ ಘಟಕದ ಅಧ್ಯಕ್ಷ ವಿನೋದ ಅಸೂಟಿ ಸಿದ್ದಾಪೂರ ಓಣಿ ಸರಕಾರಿ ಶಾಲೆಯಲ್ಲಿನ 16ನೇ ವಾರ್ಡ್‌ನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮವಾಗಿ ಡಿವೈಎಸ್ಪಿ ರಾಮನಗೌಡ ಹಟ್ಟಿ ನೇತೃತ್ವದಲ್ಲಿ ಪಿಐ ರಂಗನಾಥ ಹಾಗೂ ಎಸ್‌ಐ ಜಯಪಾಲ ಪಾಟೀಲ್‌ ಸೂಕ್ತ ಪೊಲೀಸ್‌ ಭದ್ರತೆ ಒದಗಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ