ಆ್ಯಪ್ನಗರ

ವರ್ಷದೊಳಗೆ ಬೆಳಗಾವಿ ರೈಲು ನಿಲ್ದಾಣಕ್ಕೆ ಹೊಸ ಕಟ್ಟಡ

ಹುಬ್ಬಳ್ಳಿ: ಪ್ರಯಾಣಿಕರ ಬಹುನಿರೀಕ್ಷಿತ ಲೋಂಡಾ-ಮೀರಜ್‌ ಜೋಡಿ ರೈಲು ಮಾರ್ಗದ ನಿರ್ಮಾಣ ಕಾಮಗಾರಿಯನ್ನು 2021ರ ಒಳಗೆ ಪೂರ್ಣಗೊಳಿಸಬೇಕು. ಜತೆಗೆ ಒಂದು ವರ್ಷದೊಳಗೆ ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ಹೊಸ ಕಟ್ಟಡ ನಿರ್ಮಿಸಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Vijaya Karnataka 29 Oct 2019, 5:00 am
ಹುಬ್ಬಳ್ಳಿ: ಪ್ರಯಾಣಿಕರ ಬಹುನಿರೀಕ್ಷಿತ ಲೋಂಡಾ-ಮೀರಜ್‌ ಜೋಡಿ ರೈಲು ಮಾರ್ಗದ ನಿರ್ಮಾಣ ಕಾಮಗಾರಿಯನ್ನು 2021ರ ಒಳಗೆ ಪೂರ್ಣಗೊಳಿಸಬೇಕು. ಜತೆಗೆ ಒಂದು ವರ್ಷದೊಳಗೆ ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ಹೊಸ ಕಟ್ಟಡ ನಿರ್ಮಿಸಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
Vijaya Karnataka Web 29 VIJAY 7082209
ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆಯ ಸಭಾಭವನದಲ್ಲಿಅಧಿಕಾರಿಗಳ ಜತೆ ಶನಿವಾರ ನಡೆದ ತುರ್ತು ಸಭೆಯಲ್ಲಿರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿದರು.


ನಗರದ ನೈರುತ್ಯ ರೈಲ್ವೆ ಇಲಾಖೆಯ ಸಭಾಭವನದಲ್ಲಿಅಧಿಕಾರಿಗಳ ಜತೆ ಶನಿವಾರ ನಡೆದ ತುರ್ತು ಸಭೆಯಲ್ಲಿಅವರು ಮಾತನಾಡಿದರು.

ನೈರುತ್ಯ ರೈಲ್ವೆ ವಲಯದಲ್ಲಿಈ ವರ್ಷ ರೂಪಿಸಿರುವ ಯೋಜನೆಗಳನ್ನು ಹಾಗೂ ಪ್ರಮುಖ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿಪೂರ್ಣಗೊಳಿಸಲೇ ಬೇಕು ಎಂದು ತಾಕೀತು ಮಾಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್‌ ಸಿಂಗ್‌ ಮಾತನಾಡಿ, ಲೋಂಡಾ-ಮೀರಜ್‌ ಜೋಡಿ ರೈಲು ಮಾರ್ಗ ನಿಗದಿಯಂತೆ 2022ರ ಜೂನ್‌ನಲ್ಲಿಮುಗಿಯ ಬೇಕಿತ್ತು. ಆದರೆ, 2021ರಲ್ಲಿಯೇ ಮುಗಿಸಲಾಗುವುದು ಎಂದರು.

ದೇಸೂರು-ಸಾಂಬ್ರಾ ನಡುವೆ ಜೋಡಿಮಾರ್ಗ ನಿರ್ಮಾಣ ಕಾರ್ಯವನ್ನು ತ್ವರಿತಗತಿಯಲ್ಲಿಮುಗಿಸಲು ರೈಲು ವಿಕಾಸ ನಿಗಮದ ಸಿಬ್ಬಂದಿ ಯೋಜನೆ ರೂಪಿಸಬೇಕು. ಬೈಯಪ್ಪನಹಳ್ಳಿ ನಿಲ್ದಾಣದಲ್ಲಿಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಬೇಕಿದೆ. ಆದ್ದರಿಂದ 2020ರ ಮಾರ್ಚ್ ವೇಳೆಗೆ ಮೂರನೇ ಟರ್ಮಿನಲ್‌ ಆರಂಭಿಸಬೇಕು ಎಂದು ತಿಳಿಸಿದರು.

ಜೋಡಿ ಮಾರ್ಗ ಕಾರ್ಯಕ್ಕೆ ಸ್ಲೀಪರ್ಗಳ ಕೊರತೆಯಿದೆ ಎಂದು ಸಿಂಗ್‌ ಅವರು ಪ್ರತಿಕ್ರಿಯಿಸಿದರು. ಆಗ ಮಂಡಳಿಯ ಚೇರ್ಮನ್‌ಗೆ ದೂರವಾಣಿ ಕರೆ ಮಾಡಿದ ಸಚಿವರು, ಕೂಡಲೇ ಸ್ಲೀಪರ್‌ಗಳನ್ನು ಕಳುಹಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಪ್ರಸ್ತಾವನೆ ಸಲ್ಲಿಸಲು ಸೂಚನೆ
ಹುಬ್ಬಳ್ಳಿ-ವಾರಾಣಸಿ ನಡುವಿನ ರೈಲು ಸಂಚಾರವನ್ನು ವಾರಕ್ಕೆ ನಾಲ್ಕು ದಿನಕ್ಕೆ ಹೆಚ್ಚಿಸಲು ಸಾಧ್ಯವಿದೆಯೇ ಎನ್ನುವುದನ್ನು ಪರಿಶೀಲಿಸಬೇಕು. ನವದೆಹಲಿಗೆ ತೆರಳುವ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಹುಬ್ಬಳ್ಳಿ ಮತ್ತು ಬೆಳಗಾವಿ ಮಾರ್ಗವಾಗಿ ಸಂಚರಿಸುವಂತೆ ಮಾಡಲು ಕ್ರಮ ಕೈಗೊಳ್ಳುವಂತೆ ಪ್ರಸ್ತಾವನೆæ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ವೇಳೆ ಬದಲಾವಣೆಗೆ ಸೂಚನೆ: ವಿಜಯಪುರ-ಯಶವಂತಪುರ ಮತ್ತು ವಾಸ್ಕೋಡಗಾಮ-ಬೆಳಗಾವಿ ರೈಲುಗಳ ಸಂಚಾರದ ಸಮಯದಲ್ಲಿಬದಲಾವಣೆ ಮಾಡಬೇಕು ಎಂದು ಸಚಿವರು ಹೇಳಿದರು.

ಕೇಂದ್ರ ರೈಲ್ವೆಯು ಯಶವಂತಪುರ-ಪಂಢರಾಪುರ ರೈಲಿನ ಸಂಚಾರವನ್ನು ಮೀರಜ್‌-ಪಂಡರಪುರ ನಡುವೆ ರದ್ದು ಮಾಡಿದೆ. ಇದರಿಂದ ಅಲ್ಲಿಗೆ ಹೋಗುವ ಭಕ್ತಾದಿಗಳಿಗೆ ತೊಂದರೆಯಾಗಿದೆ. ಈ ಕುರಿತು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ