ಆ್ಯಪ್ನಗರ

ಸಾಲ ಮನ್ನಾ ಲಾಭ ಪಡೆಯಲು ಸೂಚನೆ

ಅಳ್ನಾವರ: ಸರಕಾರ ಜಾರಿಗೆ ತಂದಿರುವ ಸಾಲಮನ್ನಾ ಯೋಜನೆಯ ಪ್ರಯೋಜನ ಪಡೆಯಲು ಜೂ.30 ಕೊನೆಯ ದಿನವಾಗಿದ್ದು, ಅದಕ್ಕೂ ಮೊದಲು ಅಗತ್ಯ ದಾಖಲೆಗಳೊಂದಿಗೆ ಅಸಲು ಮತ್ತು ಬಡ್ಡಿಯನ್ನು ತುಂಬಿ ಸಹಕರಿಸಬೇಕೆಂದು ಧಾರವಾಡ ತಾಲೂಕ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ನಿಂಗಪ್ಪ ಬೇಕ್ವಾಡಕರ ತಿಳಿಸಿದ್ದಾರೆ.

Vijaya Karnataka 27 Jun 2020, 5:00 am
ಅಳ್ನಾವರ: ಸರಕಾರ ಜಾರಿಗೆ ತಂದಿರುವ ಸಾಲಮನ್ನಾ ಯೋಜನೆಯ ಪ್ರಯೋಜನ ಪಡೆಯಲು ಜೂ.30 ಕೊನೆಯ ದಿನವಾಗಿದ್ದು, ಅದಕ್ಕೂ ಮೊದಲು ಅಗತ್ಯ ದಾಖಲೆಗಳೊಂದಿಗೆ ಅಸಲು ಮತ್ತು ಬಡ್ಡಿಯನ್ನು ತುಂಬಿ ಸಹಕರಿಸಬೇಕೆಂದು ಧಾರವಾಡ ತಾಲೂಕ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ನಿಂಗಪ್ಪ ಬೇಕ್ವಾಡಕರ ತಿಳಿಸಿದ್ದಾರೆ.
Vijaya Karnataka Web notice to take advantage of the loan waiver
ಸಾಲ ಮನ್ನಾ ಲಾಭ ಪಡೆಯಲು ಸೂಚನೆ

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬ್ಯಾಂಕ್‌ ಧಾರವಾಡದ ಲೈನ್‌ ಬಝಾರ್‌ ಕೆಂಪಗೇರಿಯಲ್ಲಿದೆ. ಈ ಬ್ಯಾಂಕನ್ನು ಹೊರತುಪಡಿಸಿ ಕೆಂಪಗೇರಿ ವಲಯ ಸೀಲ್‌ಡೌನ್‌ ಆಗಿದೆ. ಸರಕಾರದ ಆದೇಶದಂತೆ, ಕಟಬಾಕಿ ಅಸಲು ಪಾವತಿಸಿದರೆ ಸಂಪೂರ್ಣ ಬಡ್ಡಿ ಮನ್ನಾ ದೊರೆಯಲಿದೆ. ಕೆಂಪಗೇರಿ ವಲಯ ಸೀಲ್‌ಡೌನ್‌ ಇದ್ದರೂ, ಬ್ಯಾಂಕು ಸಮಯಕ್ಕೆ ಸರಿಯಾಗಿ ತೆರೆದಿರುತ್ತದೆ ಮತ್ತು ನಿತ್ಯದ ವ್ಯವಹಾರ ಜರುಗುತ್ತದೆ. ರೈತ ಸದಸ್ಯರು ಮಾಸ್ಕ್‌ ಧರಿಸಿಕೊಂಡು ಬ್ಯಾಂಕಿಗೆ ಬಂದು ವ್ಯವಹಾರ ಮಾಡಬಹುದು ಎಂದು ಬೇಕ್ವಾಡಕರ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ