ಆ್ಯಪ್ನಗರ

ನಾಳೆ ಹಿರೇಹೊನ್ನಳ್ಳಿ ಕೆರೆಗೆ ಬಾಗಿನ ಅರ್ಪಣೆ

ಹುಬ್ಬಳ್ಳಿ: ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿ ಗ್ರಾಮದ ನೀರಿನ ಸಮಸ್ಯೆ ಪರಿಹರಿಸಲು ಶ್ರಮಿಸಿದ ವಿಧಾನ ಪರಿಷತ್‌ ಮಾಜಿ ಸದಸ್ಯ ನಾಗರಾಜ ಛಬ್ಬಿ ಅವರಿಗೆ ಸನ್ಮಾನ ಹಾಗೂ ಗ್ರಾಮದ ಕೆರೆ, ಹಳ್ಳಕ್ಕೆ ಬಾಗಿನ ಅರ್ಪಣೆ ಕಾರ್ಯಕ್ರಮ ನ.24 ರಂದು ಸಂಜೆ 5ಕ್ಕೆ ಗ್ರಾಮದ ಸರಕಾರಿ ಗಂಡು ಮಕ್ಕಳ ಶಾಲೆಯ ಆವರಣದಲ್ಲಿಆಯೋಜಿಸಲಾಗಿದೆ ಎಂದು ಸಹದೇವಪ್ಪ ಗಿರಿಮಲ್ಲಪ್ಪ ಹೇಳಿದರು.

Vijaya Karnataka 24 Nov 2019, 5:00 am
ಹುಬ್ಬಳ್ಳಿ: ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿ ಗ್ರಾಮದ ನೀರಿನ ಸಮಸ್ಯೆ ಪರಿಹರಿಸಲು ಶ್ರಮಿಸಿದ ವಿಧಾನ ಪರಿಷತ್‌ ಮಾಜಿ ಸದಸ್ಯ ನಾಗರಾಜ ಛಬ್ಬಿ ಅವರಿಗೆ ಸನ್ಮಾನ ಹಾಗೂ ಗ್ರಾಮದ ಕೆರೆ, ಹಳ್ಳಕ್ಕೆ ಬಾಗಿನ ಅರ್ಪಣೆ ಕಾರ್ಯಕ್ರಮ ನ.24 ರಂದು ಸಂಜೆ 5ಕ್ಕೆ ಗ್ರಾಮದ ಸರಕಾರಿ ಗಂಡು ಮಕ್ಕಳ ಶಾಲೆಯ ಆವರಣದಲ್ಲಿಆಯೋಜಿಸಲಾಗಿದೆ ಎಂದು ಸಹದೇವಪ್ಪ ಗಿರಿಮಲ್ಲಪ್ಪ ಹೇಳಿದರು.
Vijaya Karnataka Web offer to hirehonnihalli lake tomorrow
ನಾಳೆ ಹಿರೇಹೊನ್ನಳ್ಳಿ ಕೆರೆಗೆ ಬಾಗಿನ ಅರ್ಪಣೆ

ಶನಿವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ನಾಗರಾಜ ಛಬ್ಬಿಯವರು 2014-15ನೇ ಸಾಲಿನಲ್ಲಿಹಿರೇಹೊನ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ನೀರಿನ ಸಮಸ್ಯೆ ಬಗೆಹರಿಸಲು 2.10 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದರು. ಅಂತರ್ಜಲ ಮಟ್ಟ ಹೆಚ್ಚಿಸುವ, ಕೆರೆ, ಹಳ್ಳ ತುಂಬಿಸುವ ಮೂಲಕ ಗ್ರಾಮದ ನೀರಿನ ಸಮಸ್ಯೆಯನ್ನು ನಿವಾರಿಸಿದ್ದಾರೆ ಎಂದರು.

ಛಬ್ಬಿಯವರ ಸಹಕಾರದಿಂದ ಹಿರೇಹೊನ್ನಳ್ಳಿಯ ಕೆರೆ ಹಾಗೂ ಹಳ್ಳಗಳು ಭರ್ತಿಯಾಗುವಂತಾಗಿದೆ. ನೀರಿನ ಸಮಸ್ಯೆ ನಿವಾರಿಸಲು ಶ್ರಮಿಸಿದ ಛಬ್ಬಿಯವರಿಗೆ ಗ್ರಾಮಸ್ಥರು ಪಕ್ಷಾತೀತವಾಗಿ ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಜನರು ಹೆಚ್ಚಿನ ಸಂಖ್ಯೆಯಲ್ಲಿಆಗಮಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿಕಿರಣ ಪಾಟೀಲ ಕುಲಕರ್ಣಿ, ಶಿವರುದ್ರಪ್ಪ ಗಬ್ಬೂರು, ಬಸವರಾಜ ಬಡಿಗೇರ, ನಿಂಗಪ್ಪ ಬಿ., ಬಸವಣೆಪ್ಪ ರಾಮನಾಳ, ಕುರುಬರ ಸೇರಿದಂತೆ ಅನೇಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ