ಆ್ಯಪ್ನಗರ

ಕಾರ್ಯಾಚರಣೆ ಇನ್ನೂ 2 ದಿನ...

ಧಾರವಾಡ : ದುರಂತ ಸಂಭವಿಸಿದ ಬಹುಮಹಡಿ ಕಟ್ಟಡದ ಅವಶೇಷದಡಿ ಮೃತ್ಯುಕೂಪದಲ್ಲಿ ಬಿದ್ದವರು ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗುತ್ತಿದ್ದು, ಇನ್ನೂ ಹಲವರು ಜೀವಂತ ಇರುವ ಸುಳಿವು ಸಿಕ್ಕಿದೆ. ಹೀಗಾಗಿ ಇದೀಗ ರಕ್ಷಣಾ ಕಾರ್ಯಕ್ಕೆ ಮಾನವ ಶಕ್ತಿಯನ್ನೇ ಹೆಚ್ಚಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದ್ದು, ಇದರಿಂದಾಗಿ ಕಾರ್ಯಾಚರಣೆ ಇನ್ನೂ ಒಂದೆರಡು ದಿನ ನಡೆಯುವ ಸಾಧ್ಯತೆಗಳು ಸ್ಪಷ್ಟವಾಗಿವೆ.

Vijaya Karnataka 23 Mar 2019, 5:00 am
ಧಾರವಾಡ : ದುರಂತ ಸಂಭವಿಸಿದ ಬಹುಮಹಡಿ ಕಟ್ಟಡದ ಅವಶೇಷದಡಿ ಮೃತ್ಯುಕೂಪದಲ್ಲಿ ಬಿದ್ದವರು ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗುತ್ತಿದ್ದು, ಇನ್ನೂ ಹಲವರು ಜೀವಂತ ಇರುವ ಸುಳಿವು ಸಿಕ್ಕಿದೆ. ಹೀಗಾಗಿ ಇದೀಗ ರಕ್ಷಣಾ ಕಾರ್ಯಕ್ಕೆ ಮಾನವ ಶಕ್ತಿಯನ್ನೇ ಹೆಚ್ಚಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದ್ದು, ಇದರಿಂದಾಗಿ ಕಾರ್ಯಾಚರಣೆ ಇನ್ನೂ ಒಂದೆರಡು ದಿನ ನಡೆಯುವ ಸಾಧ್ಯತೆಗಳು ಸ್ಪಷ್ಟವಾಗಿವೆ.
Vijaya Karnataka Web DRW-4 TH  DAY  COLLAPSE  BUILDING   2


ಗುರುವಾರ ಬೆಳಗ್ಗೆಯಿಂದ ಸಾಲು ಸಾಲು ಮೃತದೇಹಗಳೇ ಪತ್ತೆ ಆಗಿದ್ದವು. ಆದ್ದರಿಂದ ಇನ್ನೂ ಕಟ್ಟಡದಡಿ ಸಿಲುಕಿದವರು ಬದುಕಿ ಬರುವುದು ಕಷ್ಟ ಎಂತಲೇ ವಿಶ್ಲೇಷಿಸಲಾಗಿತ್ತು. ಹೀಗಾಗಿ ಜೆಸಿಬಿ, ಕ್ರೇನ್‌ ಬಳಸಿ ಕಟ್ಟಡದ ಅವಶೇಷಗಳ ತೆರವು ಕಾರ್ಯ ನಡೆದಿತ್ತು. ಆದರೆ, ಶುಕ್ರವಾರ ಜೀವಂತ ಇರುವವರ ಗುರುತು ಪತ್ತೆ ಆಗುತ್ತಿರುವುದರಿಂದ ಸೂಕ್ಷ್ಮವಾಗಿ ಪರಿಶೀಲಿಸಿದ ನಂತರವೇ ಕಾರ್ಯಾಚರಣೆಗೆ ಯಂತ್ರಗಳನ್ನು ಬಳಸಲು ತೀರ್ಮಾನಿಸಲಾಗಿದೆ ಎಂದು ರಕ್ಷಣಾ ತಂಡದ ಅಧಿಕಾರಿಯೊಬ್ಬರು ವಿಕಕ್ಕೆ ತಿಳಿಸಿದ್ದಾರೆ.

ಕುಮಾರೇಶ್ವರನಗರದ ಐದು ಅಂತಸ್ತಿನ ಕಟ್ಟಡ ಕುಸಿದು ಈಗಾಗಲೇ ನಾಲ್ಕು ದಿನ ಕಳೆದಿದೆ. ಗುರುವಾರ ಬೆಳಗ್ಗೆಯಿಂದ ಮಧ್ಯರಾತ್ರಿ 1ರ ವರೆಗೆ ಪ್ರೇಮಾ ಎಂಬುವವರನ್ನು ಹೊರತುಪಡಿಸಿ ಯಾರನ್ನೂ ರಕ್ಷಿಸಲಾಗಿಲ್ಲ. ಒಂದೇ ದಿನ ಏಳು ಮೃತದೇಹಗಳನ್ನು ತೆಗೆಯಲಾಗಿತ್ತು. ಆದರೆ, ಶುಕ್ರವಾರ ಒಂದು ಮೃತದೇಹ ಮಾತ್ರ ಸಿಕ್ಕಿದ್ದು, ತುಂಬ ಕ್ಲಿಸ್ಟ ಸ್ಥಿತಿಯಲ್ಲಿ ಇದ್ದ ನಾಲ್ವರನ್ನು ರಕ್ಷಿಸಲಾಗಿದೆ. ಹೀಗಾಗಿ ಸಾವು ಗೆದ್ದು ಬರುವವರು ಇನ್ನೂ ಇದ್ದಾರೆ ಎಂಬ ನಿರೀಕ್ಷೆಗಳು ಮೂಡಿವೆ.

ಸಾವು ಗೆದ್ದವರ ಕಳಕಳಿ...

ಶುಕ್ರವಾರಕ್ಕೆ ಬರೋಬ್ಬರಿ ಮೂರು ದಿನ ಕಟ್ಟಡದ ಅವಶೇಷದಡಿ ಕತ್ತಲೆಯ ನರಕದಲ್ಲಿ ಬಿದ್ದ ಸಂಗನಗೌಡ ರಾಮನಗೌಡರ, ದಿಲೀಪ ಕೊಕರೆ, ಸಂಗೀತಾ ಕೊಕರೆ, ಹೊನ್ನಮ್ಮ ಎಂಬುವವರನ್ನು ರಕ್ಷಿಸಲಾಗಿದೆ. ಇಲ್ಲಿ ಮೊದಲು ರಕ್ಷಣೆಯಾದ ಸಂಗನಗೌಡ ದಿಲೀಪ, ಸಂಗೀತಾ ಇರುವುದನ್ನು ಸಿಬ್ಬಂದಿಗೆ ಹೇಳಿದ್ದಾರೆ. ಇನ್ನು ದಿಲೀಪ ಹೊನ್ನಮ್ಮ ಬದುಕಿರುವುದನ್ನು ತಿಳಿಸಿದ್ದಾಳೆ. ತಾವು ಬದುಕಿ ಬಂದ ತಕ್ಷಣವೇ ಸಂಕಷ್ಟದಲ್ಲಿ ಇನ್ನೂ ಇದ್ದಾರೆ ಎಂದು ಇವರೆಲ್ಲ ಹೇಳಿದ ಮಾತು ಹಾಗೂ ಕಳಕಳಿಯನ್ನು ಗೌರವಿಸಿದ ಸಿಬ್ಬಂದಿ ವಿಶೇಷ ಕಾರ್ಯಾಚರಣೆ ನಡೆಸಿ ಒಬ್ಬೊಬ್ಬರನ್ನೇ ರಕ್ಷಿಸಲಾಗಿದೆ. ಈಗ ರಕ್ಷಣೆಯಾದವರು ಹೇಳುವ ಪ್ರಕಾರ ಇನ್ನೂ ಮೂವರು ಕಟ್ಟಡದಡಿ ಜೀವಂತ ಇದ್ದು, ಅವರನ್ನು ಹೊರತರಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ