ಆ್ಯಪ್ನಗರ

ಚಿನ್ನ, ಬೆಳ್ಳಿ ಕೆಲಸಗಾರರಿಗೂ ಪ್ಯಾಕೇಜ್‌ ನೀಡಿ

ಧಾರವಾಡ: ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದಲ್ಲಿನ ಚಿನ್ನ, ಬೆಳ್ಳಿ ಕೆಲಸಗಾರರಿಗೂ ಪರಿಹಾರದ ಪ್ಯಾಕೇಜ್‌ ಘೋಷಣೆ ಮಾಡುವಂತೆ ಒತ್ತಾಯಿಸಿ ಧಾರವಾಡ ಚಿನ್ನ, ಬೆಳ್ಳಿ ಕೆಲಸಗಾರರ ಸಂಘ ಆಗ್ರಹಿಸಿದೆ.

Vijaya Karnataka 9 May 2020, 5:00 am
ಧಾರವಾಡ: ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದಲ್ಲಿನ ಚಿನ್ನ, ಬೆಳ್ಳಿ ಕೆಲಸಗಾರರಿಗೂ ಪರಿಹಾರದ ಪ್ಯಾಕೇಜ್‌ ಘೋಷಣೆ ಮಾಡುವಂತೆ ಒತ್ತಾಯಿಸಿ ಧಾರವಾಡ ಚಿನ್ನ, ಬೆಳ್ಳಿ ಕೆಲಸಗಾರರ ಸಂಘ ಆಗ್ರಹಿಸಿದೆ.
Vijaya Karnataka Web package for gold and silver workers
ಚಿನ್ನ, ಬೆಳ್ಳಿ ಕೆಲಸಗಾರರಿಗೂ ಪ್ಯಾಕೇಜ್‌ ನೀಡಿ


ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಬರೆದಿರುವ ಸಂಘಟನೆ, ಮಡಿವಾಳ, ಆಟೋ ಚಾಲಕರಿಗೆ ಹಾಗೂ ಇತರರಿಗೆ ಪರಿಹಾರ ಘೋಷಣೆ ಮಾಡಿದ್ದು ಸ್ವಾಗತಾರ್ಹ. ಆದರೆ, ತೀವ್ರ ಸಂಕಷ್ಟದಲ್ಲಿರುವ ಚಿನ್ನ, ಬೆಳ್ಳಿ ಕೆಲಸಗಾರರಿಗೂ ಈ ವೇಳೆ ಪರಿಹಾರ ನೀಡಿದ್ದರೆ ಅನುಕೂಲವಾಗುತ್ತಿತ್ತು. 45 ದಿನಗಳಿಂದ ಚಿನ್ನ, ಬೆಳ್ಳಿ ಕೆಲಸಗಾರ ಸ್ಥಿತಿ ಶೋಚನೀಯವಾಗಿದೆ. ಜೀವನ ನಿರ್ವಹಣೆ ಕಷ್ಟವಾಗಿದೆ. ಹೊರ ರಾಜ್ಯಗಳಿಂದ ಬರುವ ರೆಡಿಮೇಡ್‌ ಆಭರಣಗಳಿಂದಾಗಿ, ಬಂಡವಾಳ ಶಾಹಿಗಳಿಂದಾಗಿ ಸ್ಥಳೀಯ ಸಾಂಪ್ರದಾಯಿಕ ಕೆಲಸಗಾರರಿಗೆ ಕೆಲಸ ಕಡಿಮೆ ಆಗುತ್ತಿದೆ. ಬಹುತೇಕ ಕೆಲಸಗಾರರು ಬಾಡಿಗೆ ಮನೆಗಳಲ್ಲಿವಾಸವಿದ್ದು, ಲಾಕ್‌ಡೌನ್‌ನಿಂದ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ರಾಜ್ಯ ಸರಕಾರ ಚಿನ್ನ, ಬೆಳ್ಳಿ ಕೆಲಸಗಾರರಿಗೂ ಪರಿಹಾರದ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ