ಆ್ಯಪ್ನಗರ

ಛಾಯಾಚಿತ್ರ ಪ್ರದರ್ಶನ

ಧಾರವಾಡ: ನಗರದ ಕಲಾಮಂಡಳ ಸಂಸ್ಥೆಯು ಸೆವೆನ್‌ ಶೆಡ್ಸ್‌ ಸಹಕಾರದೊಂದಿಗೆ ಸರಕಾರಿ ಆರ್ಟ್‌ ಗ್ಯಾಲರಿಯಲ್ಲಿಡಿ.14 ರಿಂದ 17 ರವರೆಗೆ ಛಾಯಾಚಿತ್ರ ಪ್ರದರ್ಶನ ಹಾಗೂ ತರಬೇತಿ ಏರ್ಪಡಿಸಿದೆ ಎಂದು ಕಲಾಮಂಡಳ ಕಾರ್ಯದರ್ಶಿ ಮಧು ದೇಸಾಯಿ ತಿಳಿಸಿದರು.

Vijaya Karnataka 11 Dec 2019, 5:00 am
ಧಾರವಾಡ: ನಗರದ ಕಲಾಮಂಡಳ ಸಂಸ್ಥೆಯು ಸೆವೆನ್‌ ಶೆಡ್ಸ್‌ ಸಹಕಾರದೊಂದಿಗೆ ಸರಕಾರಿ ಆರ್ಟ್‌ ಗ್ಯಾಲರಿಯಲ್ಲಿಡಿ.14 ರಿಂದ 17 ರವರೆಗೆ ಛಾಯಾಚಿತ್ರ ಪ್ರದರ್ಶನ ಹಾಗೂ ತರಬೇತಿ ಏರ್ಪಡಿಸಿದೆ ಎಂದು ಕಲಾಮಂಡಳ ಕಾರ್ಯದರ್ಶಿ ಮಧು ದೇಸಾಯಿ ತಿಳಿಸಿದರು.
Vijaya Karnataka Web photographic exhibition
ಛಾಯಾಚಿತ್ರ ಪ್ರದರ್ಶನ


ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಾಮಂಡಳವು ಕಳೆದ 28 ವರ್ಷಗಳಿಂದ ಧಾರವಾಡವನ್ನು ಕೇಂದ್ರವಾಗಿರಿಸಿಕೊಂಡು ದೇಶ-ವಿದೇಶಗಳಲ್ಲಿಕಲಾ ಪ್ರದರ್ಶನ, ವಿಚಾರ ಸಂಕಿರಣ, ಚಿತ್ರಕಲಾ, ಶಿಲ್ಪಕಲಾ ಶಿಬಿರ ಮತ್ತು ಕಲಾ ಪ್ರದರ್ಶನ ಆಯೋಜಿಸಿ ಸಾರ್ವಜನಿಕರಿಗೆ, ಯುವಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ದೃಶ್ಯಕಲೆಯ ಕ್ಷೇತ್ರದಲ್ಲಿಜಾಗತಿಕ ಮಟ್ಟದಲ್ಲಿನ ಚಿಂತನೆ ಮತ್ತು ಪ್ರಯೋಗ ಪರಿಚಯಿಸುವ ಕಾರ್ಯ ಮಾಡುತ್ತ ಬಂದಿದೆ ಎಂದರು.

ಡಿ.14 ರಂದು ಸಂಜೆ 5ಕ್ಕೆ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಉದ್ಘಾಟಿಸುವರು. ಅತಿಥಿಯಾಗಿ

ಹು-ಧಾ ಸ್ಮಾರ್ಟ್‌ ಸಿಟಿ ಮುಖ್ಯ ಎಂಜನಿಯರ ಎಂ.ನಾರಾಯಣ ಆಗಮಿಸುವರು, ಲೋಕೋಪಯೋಗಿ ಇಲಾಖೆ ನಿವೃತ್ತ ಕಾರ್ಯದರ್ಶಿ ಜಿ.ಸಿ.ತಲ್ಲೂರ ಅಧ್ಯಕ್ಷತೆ ವಹಿಸುವರು ಎಂದರು.

ಡಿ.17ರಂದು ಸಂಜೆ 4.30ಕ್ಕೆ ನಡೆಯುವ ಛಾಯಾಚಿತ್ರ ಪ್ರದರ್ಶನದ ಸಮಾರೋಪದಲ್ಲಿ ಪ್ರೊ. ವಾಸುದೇವ ಪರ್ವತಿ ಆಗಮಿಸಲಿದ್ದು, ಡಾ.ಮದನಮೋಹನ ತಾವರಗೇರಿ ಅಧ್ಯಕ್ಷತೆ ವಹಿಸುವರು ಎಂದರು.

ಛಾಯಾ ಚಿತ್ರ ಕಾರ್ಯಗಾರದಲ್ಲಿಭಾಗವಹಿಸುವ ಆಸಕ್ತರು ಮಾಹಿತಿಗೆ ಮೊ.8762102674,9448053863 ಸಂಪರ್ಕಿಸಬಹುದು.
ಗಾಯತ್ರಿ ದೇಸಾಯಿ,ಅಶೋಕ ಮನಸೂರ, ಅರ್ಜುನ ಕಿಣೇಕರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ