ಆ್ಯಪ್ನಗರ

ಸಸ್ಯ, ಪಕ್ಷಿಸಂಕುಲ ಪ್ರೀತಿಸುವ ಪಂಚಯ್ಯ

ಧಾರವಾಡ : ಪ್ರಾಣಿ ಪಕ್ಷಿಗಳಿಲ್ಲದೇ ಕಾಡು ಬೆಳೆಯಲು ಸಾಧ್ಯವಿಲ್ಲ ಎಂಬುದನ್ನು ಅರಿತ ಪರಿಸರ ಪ್ರೇಮಿಯೊಬ್ಬರು ಜಿಲ್ಲೆಯ 5 ಕೆರೆಗಳ ಸುತ್ತಮುತ್ತ ವಿವಿಧ ಹಣ್ಣಿನ ಗಿಡಗಳನ್ನು ಬೆಳೆಸಲು ಮುಂದಾಗುವ ಮೂಲಕ ವಿಶ್ವ ಪರಿಸರ ದಿನಾಚರಣೆ ದಿನದಿಂದಲೇ ಪಕ್ಷಿಗಳ ಉಳಿವಿನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

Vijaya Karnataka 5 Jun 2019, 5:00 am
ಧಾರವಾಡ : ಪ್ರಾಣಿ ಪಕ್ಷಿಗಳಿಲ್ಲದೇ ಕಾಡು ಬೆಳೆಯಲು ಸಾಧ್ಯವಿಲ್ಲ ಎಂಬುದನ್ನು ಅರಿತ ಪರಿಸರ ಪ್ರೇಮಿಯೊಬ್ಬರು ಜಿಲ್ಲೆಯ 5 ಕೆರೆಗಳ ಸುತ್ತಮುತ್ತ ವಿವಿಧ ಹಣ್ಣಿನ ಗಿಡಗಳನ್ನು ಬೆಳೆಸಲು ಮುಂದಾಗುವ ಮೂಲಕ ವಿಶ್ವ ಪರಿಸರ ದಿನಾಚರಣೆ ದಿನದಿಂದಲೇ ಪಕ್ಷಿಗಳ ಉಳಿವಿನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
Vijaya Karnataka Web DRW-04RANGA01A
ಧಾರವಾಡ ಬಳಿಯ ಇಕೋ ವಿಲೇಜನಲ್ಲಿ ನಿರ್ಮಾಣ ಮಾಡಲಾಗಿರುವ ಕಂಠಹಾರ ಕೆರೆ.


ನಿರಂತರ ಕಾಡುನಾಶ ಜತೆಗೆ ಕಾಂಕ್ರಿಟ್‌ ಕಾಡು ಹೆಚ್ಚುತ್ತಿರುವ ಪರಿಣಾಮ ಪಕ್ಷಿಸಂಕುಲದ ಸಂಖ್ಯೆ ಶೇ.48 ಇದ್ದರೆ ಇನ್ನು ಪ್ರಾಣಿಗಳ ಸಂಖ್ಯೆ ಶೇ.60 ಇದೆ. ಹೀಗಾಗಿ ಚಿನ್ನದ ಬೆಳೆಸು ತೋಟದ ಮಾದರಿಯಲ್ಲಿ ಕಾನನದ ಪಕ್ಷಿ-ಪಶುಗಳಿಗಾಗಿ ಮೀಸಲಿಟ್ಟ ಹಣ್ಣಿನ ಮರಗಳ 'ಕಾನು ತೋಟ ಬೆಳೆಸಲು ಪರಿಸರ ಪ್ರೇಮಿ ಪಂಚಯ್ಯ ಹಿರೇಮಠ ತಮ್ಮ ನೇಚರ್‌ ರಿಸರ್ಚ್‌ ಸೆಂಟರ್‌ ,ನೇಚರ್‌ ಫಸ್ಟ್‌ ಇಕೋ ವಿಲೇಜ್‌, ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಯೋಜನೆ ರೂಪಿಸಿದ್ದಾರೆ.

ಧಾರವಾಡದಿಂದ 15 ಕಿ.ಮೀ. ದೂರದಲ್ಲಿನ ಹಳ್ಳಿಗೇರಿಯ ಬಣದೂರ ನಾಕಾ ಕೆರೆ ಸೇರಿದಂತೆ ಕಲಘಟಗಿಯ ದೇವಿಕೊಪ್ಪ ಕೆರೆ, ಮಾದನಬಾವಿ ಕೆರೆ, ಹೊಸಟ್ಟಿ ಕೆರೆಗಳನ್ನು ಅಭಿವೃದ್ಧಿ ಮಾಡುವ ಜತೆಗೆ ಈ ಎಲ್ಲ ಕೆರೆಗಳಲ್ಲಿ 1000 ವಿವಿಧ ತಳಿಯ ಹಣ್ಣಿನಗಿಡಗಳನ್ನು ನೆಟ್ಟು ಸ್ಥಳೀಯ ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಮೂಲಕ ಗಿಡಗಳನ್ನು ರಕ್ಷ ಣೆ ಮಾಡಿ ಪಕ್ಷಿಸಂಕುಲ ಹೆಚ್ಚಿಸಲು ಶ್ರಮಿಸುತ್ತಿದ್ದಾರೆ.

ಬಣದೂರ ಕೆರೆಗೆ ಕಾಡುಕೋಣ-ಎಮ್ಮೆ, ಚುಕ್ಕೆ ಜಿಂಕೆ, ಕರಡಿ, ಚಿರತೆ, ಕಾಡು ಹಂದಿ, ನರಿ, ತೋಳ, ಆನೆ, ಕಪ್ಪು ಮತ್ತು ಕೆಂಪು ಮೂತಿ ಮಂಗ, ನವಿಲು, ಲೆಸ್ಸರ್‌ ಫ್ಲೆಮಿಂಗೋ ಸೇರಿದಂತೆ ನೂರಾರು ನಮೂನೆ ವಲಸೆ ಹಕ್ಕಿ, ಸ್ಥಳೀಯ ಪಕ್ಷಿ ಮತ್ತು ಕಾಡು ಪ್ರಾಣಿಗಳು ದಾಹ ಇಂಗಿಸಿಕೊಳ್ಳಲು ಬರುತ್ತವೆ. ಬಣದೂರ ಕೆರೆ ಅಕ್ಕಪಕ್ಕ ಕಾನನದ ಪಕ್ಷಿ-ಪಶುಗಳಿಗೆ ಮತ್ತು ಕೀಟ ಪ್ರಪಂಚಕ್ಕೆ ಮಾತ್ರ ಮೀಸಲಿಟ್ಟು ಈ ತೋಟ ಬೆಳೆಸುವ ಯೋಜನೆ ರೂಪಿಸಿ 'ದ್ವಿಶತಾಧಿಕ ಫಲ ವೃಕ್ಷಾರೋಪಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ವಿಶೇಷವಾಗಿ ಇಲ್ಲಿ ಮನುಷ್ಯರಿಗೆ ಪ್ರವೇಶವಿಲ್ಲ ಎಂಬ ಸೂಚನಾ ಫಲಕ ಅನಾವರಣಗೊಳಿಸಲಿದ್ದು, ಪ್ರಾಣಿಗಳಿಗೆ ಮೂರು ಕಡೆಯಿಂದ ಕರೆಗೆ ಆಗಮಿಸಲು ದಾರಿ ಬಿಡಲಾಗಿದೆ ಕರೆಯನ್ನು ಈಗಾಲೇ ಜಿಸಿಬಿಗಳಿಂದ ಹೂಳು ತೆಗೆದು ಮಧ್ಯ ಭಾಗದಲ್ಲಿ ಆಲದ ಮರ ನೆಡಲು ಐಲ್ಯಾಂಡ್‌ ಮಾಡಲಾಗಿದೆ. ಈ ಮೂಲಕ ಪ್ರಾಣಿ -ಪಕ್ಷಿಗಳ ಸಂಖ್ಯೆ ಹೆಚ್ಚು ಮಾಡಲು ವಿಶೇಷವಾಗಿ ಯೋಜನೆ ರೂಪಿಸಿದ್ದು ಈ ಕಾರ್ಯ ನಿರಂತರವಾಗಿ ಮಂದುವರಿಯಲಿ ಎನ್ನುವುದು ಪರಿಸರ ಆಸಕ್ತರ ಆಶಯ.

ಕಂಠಹಾರ ಕೆರೆ ನಿರ್ಮಾಣ

ಕೆರೆಯ ಹೂಳೆತ್ತುವ ಕಾರ್ಯ ಇಂದು ಸವಾಲಿನ ಕೆಲಸ ಆಗಿದೆ. ಹೀಗಾಗಿ ಅಂತರ್ಜಲ ಮಟ್ಟ ಹೆಚ್ಚಿಸಲು ಸ್ವಂತ ಖರ್ಚಿನಲ್ಲಿ ಹಳ್ಳಿಗೇರಿಯ ಇಕೋ ವಿಲೇಜನಲ್ಲಿ ಜಲನಿಧಿ ಕಂಠಹಾರ ಕೆರೆ (ಏಳು ಕೆರೆ)ಯನ್ನು ನಿರ್ಮಾಣ ಮಾಡಿರುವ ಪಿ.ವಿ.ಹಿರೇಮಠ ಅವರು ಈ ಮೂಲಕ ಅಂತರ್ಜಲ ಹೆಚ್ಚಿಸುವ ಜತೆಗೆ ಹೂಳು ತುಂಬದಂತೆ ಕೆರೆಗಳನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ