ಆ್ಯಪ್ನಗರ

ಪ್ಲಂಬರ್‌ ಡೇ: ಕಲಾತಂಡಗಳ ಬೃಹತ್‌ ಮೆರವಣಿಗೆ

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಜಿಲ್ಲಾ ಲೈಸನ್ಸ್‌ ಪ್ಲಂಬರ್‌ ಸಂಘದ ನೇತೃತ್ವದಲ್ಲಿ ಪ್ಲಂಬರ್‌ ಡೇ ಅಂಗವಾಗಿ ನಗರದಲ್ಲಿ ಸೋಮವಾರ ಬೃಹತ್‌ ಮರವಣಿಗೆ ನಡೆಯಿತು. ಪ್ಲಂಬರ್‌ ಸಂಘವನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಮೆರವಣಿಗೆಗೆ ಸಂಘದ ಅಧ್ಯಕ್ಷ ನಾಗರಾಜ ಕಲಘಟಗಿ ಚಾಲನೆ ನೀಡಿದರು.

Vijaya Karnataka 12 Mar 2019, 5:00 am
ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಜಿಲ್ಲಾ ಲೈಸನ್ಸ್‌ ಪ್ಲಂಬರ್‌ ಸಂಘದ ನೇತೃತ್ವದಲ್ಲಿ ಪ್ಲಂಬರ್‌ ಡೇ ಅಂಗವಾಗಿ ನಗರದಲ್ಲಿ ಸೋಮವಾರ ಬೃಹತ್‌ ಮರವಣಿಗೆ ನಡೆಯಿತು. ಪ್ಲಂಬರ್‌ ಸಂಘವನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಮೆರವಣಿಗೆಗೆ ಸಂಘದ ಅಧ್ಯಕ್ಷ ನಾಗರಾಜ ಕಲಘಟಗಿ ಚಾಲನೆ ನೀಡಿದರು.
Vijaya Karnataka Web DRW-11MANJU2
ಹುಬ್ಬಳ್ಳಿ ಕೋರ್ಟ್‌ ವೃತ್ತದಲ್ಲಿ ಹುಬ್ಬಳ್ಳಿ-ಧಾರವಾಡ ಜಿಲ್ಲಾ ಲೈಸನ್ಸ್‌ ಪ್ಲಂಬರ್‌ ಸಂಘದ ನೇತೃತ್ವದಲ್ಲಿ ಪ್ಲಂಬರ್‌ ಡೇ ಅಂಗವಾಗಿ ಸೋಮವಾರ ಬೃಹತ್‌ ಮರವಣಿಗೆ ಜರುಗಿತು.


ನಗರದ ಕೋರ್ಟ್‌ ವೃತ್ತದಿಂದ ಆರಂಭವಾದ ಮೆರವಣಿಗೆ ಅಂಬೇಡ್ಕರ್‌ ವೃತ್ತಕ್ಕೆ ಆಗಮಿಸಿ, ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಲ್ಯಾಮಿಂಗ್ಟನ್‌ ರಸ್ತೆಯ ಮೂಲಕ ಹಾಯ್ದು ಸಂಗೊಳ್ಳಿ ರಾಯಣ್ಣ, ಕಿತ್ತೂರ ರಾಣಿ ಚೆನ್ನಮ್ಮ, ಬಸವವನದ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಅಲ್ಲಿನ ಪುತ್ಥಳಿಗೆ ಸಂಘದ ಪದಾಧಿಕಾರಿಗಳು ಮಾಲಾರ್ಪಣೆ ಮಾಡಿದರು.

ಮೆರವಣಿಗೆಯಲ್ಲಿ ಕುದುರೆ ಕುಣಿತ, ಗೊಂಬೆ ಕುಣಿತ, ಮಹಿಳಾ ಡೊಳ್ಳು ಕುಣಿತ, ನಗಾರಿ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು. ಮೆರಣಿಗೆಯ ಉದ್ದಕ್ಕೂ ಸಾರ್ವಜನಿಕರಿಗೆ ಉಚಿತ ಬಾಳೆಹಣ್ಣು, ನೀರಿನ ಪಾಕೇಟ್‌ ಹಾಗೂ ಉಪಹಾರ ವಿತರಿಸಲಾಯಿತು. ಮಕಬೂಲಸಾಬ್‌ ಗೂಟವಾಲೆ, ನಬೀಬಸಾಬ್‌ ನದಾಫ್‌, ಎನ್‌.ಎಂ.ಜಮಾದಾರ, ರಾಜೇಂದ್ರ ಮಹಿಪತಿ, ಗುಡದಯ್ಯ ತೇಜಪ್ಪನವರ, ತೌಷಿಪ್‌ ಇರಕಲ್ಲ, ರಾಘವೇಂದ್ರ ಕಾತನ, ಸಾಧೀಕ ಹುಲಗೂರ, ಹನುಮಂತ ಮಣ್ಣವಡ್ಡರ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಒಂದು ತಾಸು ಕಾಯಿಸಿದ ಪೊಲೀಸರು...

ಹು-ಧಾ ಜಿಲ್ಲಾ ಲೈಸನ್ಸ್‌ ಪ್ಲಂಬರ್‌ ಸಂಘವು ಹಮ್ಮಿಕೊಂಡಿದ್ದ ಮೆರವಣಿಗೆ ಪೊಲೀಸರು ಸಮಯಕ್ಕೆ ಸರಿಯಾಗಿ ಬಾರದ ಕಾರಣಕ್ಕೆ ಒಂದು ಗಂಟೆ ತಡವಾಗಿ ಹೊರಡುವಂತಾಯಿತು. ನಿಗಧಿಯಂತೆ ಬೆಳಗ್ಗೆ 11ಕ್ಕೆ ಸಕಲ ಕಲಾ ತಂಡದೊಂದಿಗೆ ನಗರದ ಕೋರ್ಟ್‌ ವೃತ್ತಕ್ಕೆ ಸಂಘದ ಪದಾಧಿಕಾರಿಗಳು ಹಾಗೂ ಪ್ಲಂಬರ್‌ಗಳು ಆಗಮಿಸಿದ್ದರು. ಮೆರವಣಿಗೆ ಮಾಡುವ ಬಗ್ಗೆ ಪೊಲೀಸ ಇಲಾಖೆ ಪರವಾನಿಗೆಯನ್ನೂ ನೀಡಿದ್ದರು. ಆದರೆ ಸಕಾಲಕ್ಕೆ ಪೊಲೀಸರು ಆಗಮಿಸಿ ಭದ್ರತೆ ನೀಡದ ಕಾರಣಕ್ಕೆ ಒಂದು ಗಂಟೆ ತಡವಾಗಿ(12ಕ್ಕೆ) ಮೆರವಣಿಗೆ ನಡೆಯಿತು. ಈ ವೇಳೆ ಕಲಾ ತಂಡಗಳು ಹಾಗೂ ಸಂಘದ ಸದಸ್ಯರು ಬಿಸಿಲಿನಲ್ಲಿ ನಿಲ್ಲಬೇಕಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ