ಆ್ಯಪ್ನಗರ

ಕಾವ್ಯ ಗಾಯನ ಕಾರ‍್ಯಕ್ರಮ 8ಕ್ಕೆ

ಧಾರವಾಡ: ನಗರದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್‌ ಭವನದಲ್ಲಿಫೆ.8ರಂದು ಸಂಜೆ 5ಕ್ಕೆ ಅಭಿಜ್ಞಾ ಸಂಗೀತ ಅಕ್ಯಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿಭಕ್ತಿರಸ ತರಂಗಿಣಿ ಅನುಭಾವಿ ಕವಿತ್ರಿಯರ ಕಾವ್ಯಗಾಯನ ಹಾಗೂ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

Vijaya Karnataka Web 6 Feb 2020, 5:00 am
ಧಾರವಾಡ: ನಗರದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್‌ ಭವನದಲ್ಲಿಫೆ.8ರಂದು ಸಂಜೆ 5ಕ್ಕೆ ಅಭಿಜ್ಞಾ ಸಂಗೀತ ಅಕ್ಯಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿಭಕ್ತಿರಸ ತರಂಗಿಣಿ ಅನುಭಾವಿ ಕವಿತ್ರಿಯರ ಕಾವ್ಯಗಾಯನ ಹಾಗೂ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.
Vijaya Karnataka Web poetry vocal program at 8th
ಕಾವ್ಯ ಗಾಯನ ಕಾರ‍್ಯಕ್ರಮ 8ಕ್ಕೆ


ಅಂದು ರಂಗಕರ್ಮಿ ಡಾ. ಶಶಿಧರ ನರೇಂದ್ರ ಭಾರತೀಯ ಭಕ್ತಿ ಪರಂಪರೆಗೆ ಮಹಿಳಾ ಅನುಭಾವಿಗಳ ಕೊಡುಗೆ ಕುರಿತು ಉಪನ್ಯಾಸ ನೀಡಲಿದ್ದಾರೆ. ಗೋಕಾಕನ ಮಹಾನಂದಾ ಗೋಸಾವಿ ವಚನ ಮತ್ತು ಕೀರ್ತನೆಗಳ ಗಾಯನ, ಕಾರವಾರದ ಸಂಕೇತ್‌ ಸಪ್ರೆ ಮರಾಠಿ ಅಭಂಗಗಳ ಗಾಯನ, ಪಾಟ್ನಾದ ಅನೂಪ್‌ಕುಮಾರ ಹಿಂದಿ ಭಜನ್‌ ಗಾಯನ ನಡೆಸಿಕೊಡಲಿದ್ದಾರೆ. ಇವರಿಗೆ ಬಸು ಹಿರೇಮಠ ಸಂವಾದಿನಿ ಹಾಗೂ ಪ್ರಸಾದ ಮಡಿವಾಳರ ತಬಲಾ ಸಾಥ್‌ ನೀಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ಅಧ್ಯಕ್ಷತೆ ವಹಿಸಲಿದ್ದಾರೆ.

ಅಂದಿನ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹಾಗೂ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸುವಂತೆ ಎಂದು ಅಭಿಜ್ಞಾ ಅಕ್ಯಾಡೆಮಿ ಅಧ್ಯಕ್ಷ ಆರತಿ ಪಾಟೀಲ ಹಾಗೂ ಕಾರ್ಯದರ್ಶಿ ಡಾ. ಶಕ್ತಿ ಪಾಟೀಲ ಪ್ರಕಟಣೆಯಲ್ಲಿಕೋರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ