ಆ್ಯಪ್ನಗರ

ಕಲಘಟಗಿ: ಜಿಲೆಟಿನ್‌ ಅಕ್ರಮ ಸಂಗ್ರಹ ಹೊಂದಿದ್ದ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು!

ಕಲಘಟಗಿ ತಾಲೂಕಿನ ಮುತ್ತಗಿ ಗ್ರಾಮದ ಶಿವಚಂದ್ರನ್‌ ಸ್ಟೋನ್‌ ಮತ್ತು ಕ್ರಶರ್‌ ಇಂಡಸ್ಟ್ರಿಯ ಖಡಿ ಮಶಿನ್‌ ಕ್ವಾರಿಯಲ್ಲಿಅಕ್ರಮವಾಗಿ ಇಟ್ಟಿದ್ದ ಜಿಲೆಟಿನ್‌ ಎಂಬ ಸ್ಫೋಟಕ ವಸ್ತು ಸಿಕ್ಕಿದ್ದು, ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Vijaya Karnataka Web 24 Jan 2021, 7:22 am
ಧಾರವಾಡ: ಕಲಘಟಗಿ ತಾಲೂಕಿನ ಮುತ್ತಗಿ ಗ್ರಾಮದ ಶಿವಚಂದ್ರನ್‌ ಸ್ಟೋನ್‌ ಮತ್ತು ಕ್ರಶರ್‌ ಇಂಡಸ್ಟ್ರಿಯ ಖಡಿ ಮಶಿನ್‌ ಕ್ವಾರಿಯಲ್ಲಿಅಕ್ರಮವಾಗಿ ಇಟ್ಟಿದ್ದ ಜಿಲೆಟಿನ್‌ ಎಂಬ ಸ್ಫೋಟಕ ವಸ್ತು ಸಿಕ್ಕಿದ್ದು, ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
Vijaya Karnataka Web arrest
ಸಾಂದರ್ಭಿಕ ಚಿತ್ರ


ಹುಬ್ಬಳ್ಳಿ- ಧಾರವಾಡ ಆಂತರಿಕ ಭದ್ರತಾ ವಿಭಾಗಕ್ಕೆ ಬಂದ ದೂರು ಆಧರಿಸಿ ದಾಳಿ ನಡೆಸಿದ ಆಂತರಿಕ ಭದ್ರತಾ ವಿಭಾಗದ ಇನ್ಸಪೆಕ್ಟರ್‌ ಜಯಶ್ರೀ ಎಸ್‌.ಮಾನೆ ನೇತೃತ್ವದ ಅಧಿಕಾರಿಗಳು ನಿನ್ನೆ(ಜ.23-ಶನಿವಾರ) ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು.

ಹುಣಸೋಡು ಸ್ಫೋಟ: ಶಿವಮೊಗ್ಗ ಸುತ್ತಮುತ್ತ ಕಲ್ಲು ಕ್ವಾರಿಯ ಕರಾಳ ಕಥೆಗಳು...

ಧಾರವಾಡ ಜಯನಗರದ ಪ್ರೇಮಾ ವೀರನಗೌಡ ಪಾಟೀಲ ಎಂಬುವರಿಗೆ ಸೇರಿದ ಈ ಕ್ವಾರಿಯಲ್ಲಿಅಕ್ರಮವಾಗಿ ಜಿಲೆಟಿನ್‌ ಎಂಬ ಸ್ಫೋಟಕ ವಸ್ತುಗಳನ್ನು ಇಟ್ಟಿರುವುದು ದೃಢಪಟ್ಟಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ತನಿಖೆ ನಡೆಸಿದ ಪೊಲೀಸ್‌ ಅಧಿಕಾರಿಗಳು ಪ್ಲಾಸ್ಟಿಕ್‌ ಚೀಲ ಹಾಗೂ ರಟ್ಟಿನ ಬಾಕ್ಸ್‌ಗಳಲ್ಲಿಇಟ್ಟಿದ್ದ 234 ಜಿಲೆಟಿನ್‌ ಕಡ್ಡಿಗಳು, 675 ಇಲೆಕ್ಟ್ರಾನಿಕ್‌ ಡೆಟೋನೇಟರ್‌ಗಳು ಹಾಗೂ ಒಂದು ಮೆಗ್ಗರ್‌ ಮಶಿನ್‌ ವಶಕ್ಕೆ ಪಡೆದಿದ್ದಾರೆ.

ಪ್ರತಿಯೊಂದು ಜೀವಕ್ಕೂ ಬೆಲೆಯಿದೆ, ಘಟನೆ ಬಗ್ಗೆ ತನಿಖೆಯಾಗಬೇಕು; ಬಿವೈ ರಾಘವೇಂದ್ರ

ಆರೋಪಿ ಶಿವಕುಮಾರ ವೀರನಗೌಡ ಪಾಟೀಲ ಎಂಬುವರನ್ನು ಕಲಘಟಗಿ ಪೊಲೀಸರಿಗೆ ಒಪ್ಪಿಸಲಾಗಿದೆ. ಈ ಕುರಿತು ಕಲಘಟಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಆಂತರಿಕ ಭದ್ರತಾ ವಿಭಾಗ, ಉತ್ತರವಲಯದ ಉಸ್ತುವಾರಿ ಡಿವೈಎಸ್‌ಪಿ ಅನಿಲಕುಮಾರ್‌ಎಸ್‌.ಭೂಮರಡ್ಡಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ