ಆ್ಯಪ್ನಗರ

ಹುಬ್ಬಳ್ಳಿಯಲ್ಲಿ ಕೋವಿಡ್‌ ಸೋಂಕಿಗೆ ಎಎಸ್ಐ ಮೃತ: ರಾಜ್ಯದಲ್ಲಿ 7 ಪೊಲೀಸರು ಬಲಿ!

ನಗರದ ವಿದ್ಯಾನಗರ ಠಾಣೆಯ 55 ವರ್ಷದ ಎಎಸ್ ಐ ಕೋವಿಡ್ ನಿಂದಾಗಿ ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಮಾರಕ ರೋಗಕ್ಕೆ ಕೊರೊನಾ ವಾರಿಯರ್ ಪೊಲೀಸರೊಬ್ಬರು ಬಲಿಯಾಗಿರುವ ಮೊದಲ ಪ್ರಕರಣ ಇದಾಗಿದೆ.

Vijaya Karnataka Web 15 Jul 2020, 12:56 pm
ಹುಬ್ಬಳ್ಳಿ: ನಗರದ ವಿದ್ಯಾನಗರ ಠಾಣೆಯ 55 ವರ್ಷದ ಎಎಸ್ ಐ ಕೋವಿಡ್ ನಿಂದಾಗಿ ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಮಾರಕ ರೋಗಕ್ಕೆ ಕೊರೊನಾ ವಾರಿಯರ್ ಪೊಲೀಸರೊಬ್ಬರು ಬಲಿಯಾಗಿರುವ ಮೊದಲ ಪ್ರಕರಣ ಇದಾಗಿದೆ.
Vijaya Karnataka Web coronavirus police


ಕೊರೊನಾ ಲಕ್ಷಣಗಳಿದ್ದ ಅವರನ್ನು ಜುಲೈ 1ರಿಂದ ಹೋಂ ಕ್ವಾರಂಟೈನ್ ಗೆ ಒಳಪಡಿಸಿ, ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿತ್ತು. ಜುಲೈ 7ರಂದು ಅವರಿಗೆ ಸೋಂಕು ಇರುವುದು ದೃಢಪಟ್ಟಿದ್ದರಿಂದ, ಕೋವಿಡ್ ಆಸ್ಪತ್ರೆ ಕಿಮ್ಸ್ ಗೆ ದಾಖಲಿಸಲಾಗಿತ್ತು.

ಹಾವೇರಿ ಮೂಲದವರಾಗಿದ್ದ ಅವರು, ಕೆಲ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಲಾಕ್‌ಡೌನ್‌ ಜಾರಿ ಇದ್ದರೂ ಅಗತ್ಯ ಬ್ಯಾಂಕ್‌ ಸೇವೆಗಳಿಗೆ ತೊಂದರೆ ಇಲ್ಲ!

ಬೆಂಗಳೂರಿನಲ್ಲಿ ಕೊರೊನಾ ವೈರಸ್‌ ಸೋಂಕಿಗೆ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ಒಬ್ಬರು ಮಂಗಳವಾರ ಮೃತರಾಗಿದ್ದರು. ರಾಜ್ಯದಲ್ಲಿ ಇದುವರೆಗೆ ಕೊರೊನಾ ಸೋಂಕಿನಿಂದ 7 ಮಂದಿ ಪೊಲೀಸರು ಮೃತಪಟ್ಟಂತೆ ಆಗಿದೆ. 600ಕ್ಕೂ ಹೆಚ್ಚು ಪೊಲೀಸರಿಗೆ ಸೋಂಕು ಖಾತರಿಯಾಗಿದೆ. 1000ಕ್ಕೂ ಹೆಚ್ಚು ಪೊಲೀಸರು ಕ್ವರಂಟೈನ್‌ನಲ್ಲಿ ಇದ್ದಾರೆ. ಜನರಿಗೆ ರಕ್ಷಣೆ ಹಾಗೂ ಭದ್ರತೆ ಒದಗಿಸುವ ಪೊಲೀಸ್‌ ಇಲಾಖೆಗೆ ಕೊರೊನಾ ಸೋಂಕು ಆವರಿಸುತ್ತಿರುವುದು ಆಘಾತಕಾರಿ ವಿಷಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ