ಆ್ಯಪ್ನಗರ

ಡ್ರೈವರ್‌, ಕಂಡಕ್ಟರ್‌ಗಳಿಗೂ ಪಾಸಿಟಿವ್‌

ಹುಬ್ಬಳ್ಳಿ : ವಾಕರಸಾ ಸಂಸ್ಥೆಯ ಮೂವರು ಡ್ರೈವರ್‌, ಕಂಡಕ್ಟರ್‌ಗಳಿಗೆ ಕೊರೊನಾ ಪಾಸಿಟಿವ್‌ ಕಾಣಿಸಿಕೊಂಡಿದ್ದು, ಸಂಸ್ಥೆಯ ಇತರ ಸಿಬ್ಬಂದಿಗಳಲ್ಲಿಆತಂಕ ಮನೆ ಮಾಡಿದೆ, ಹೀಧಿಗಾಗಿ ಸಂಸ್ಥೆಯ ಹಲವು ಸಿಬ್ಬಂದಿಗೆ ಒಂದು ವಾರ ಕಾಲ ಕಡ್ಡಾಯ ರಜೆ ನೀಡಲಾಗಿದೆ.

Vijaya Karnataka 7 Jul 2020, 5:00 am
ಹುಬ್ಬಳ್ಳಿ : ವಾಕರಸಾ ಸಂಸ್ಥೆಯ ಮೂವರು ಡ್ರೈವರ್‌, ಕಂಡಕ್ಟರ್‌ಗಳಿಗೆ ಕೊರೊನಾ ಪಾಸಿಟಿವ್‌ ಕಾಣಿಸಿಕೊಂಡಿದ್ದು, ಸಂಸ್ಥೆಯ ಇತರ ಸಿಬ್ಬಂದಿಗಳಲ್ಲಿಆತಂಕ ಮನೆ ಮಾಡಿದೆ, ಹೀಗಾಗಿ ಸಂಸ್ಥೆಯ ಹಲವು ಸಿಬ್ಬಂದಿಗೆ ಒಂದು ವಾರ ಕಾಲ ಕಡ್ಡಾಯ ರಜೆ ನೀಡಲಾಗಿದೆ.
Vijaya Karnataka Web positive for driver and conductor
ಡ್ರೈವರ್‌, ಕಂಡಕ್ಟರ್‌ಗಳಿಗೂ ಪಾಸಿಟಿವ್‌


ಡ್ರೈವರ್‌ ಸಿಬ್ಬಂದಿ(ಪಿ-23246) ಅವರ ಪತ್ನಿ(ಪಿ-23247)ಗೆ ಸೋಂಕು ತಗುಲಿರುವ ಹಿನ್ನೆಲೆಯಲ್ಲಿನಗರದ ಗೋಕುಲ ರಸ್ತೆಯಲ್ಲಿನ ಕಾರ್ಟರ್ಸ್‌ನ ಮನೆಗಳನ್ನು ಸ್ಯಾನಿಟೈಜೇಶನ್‌ ಮಾಡಲಾಗಿದೆ. ಇದಲ್ಲದೇ ಡ್ರೈವರ್‌ ಕಂಡಕ್ಟರ್‌ಗಳು ಬಳಕೆ ಮಾಡಿದ್ದ ಬಸ್‌ಗಳನ್ನು ಸಹ ಸಂಪೂರ್ಣ ಸ್ಯಾನಿಟೈಜೇಶನ್‌ ಮಾಡಲಾಗಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ. ಸೋಂಕು ಕಾಣಿಸಿಕೊಂಡಿರುವ ಸಿಬ್ಬಂದಿ ಜತೆ ಇದ್ದ ಇತರ ಸಹೋದ್ಯೋಗಿಗಳಲ್ಲಿತೀವ್ರ ಆತಂಕ ಮನೆ ಮಾಡಿದೆ. ಡಿಪೋ ಸಿಬ್ಬಂದಿ ಸಹ ಕಳವಕ್ಕೀಡಾಗಿದ್ದಾರೆ.

ಪಿಜಿ ವಿದ್ಯಾರ್ಥಿನಿಗೆ ಸೋಂಕು ?
ಹುಬ್ಬಳ್ಳಿ : ಕಿಮ್ಸ್‌ ಆಸ್ಪತ್ರೆಯಲ್ಲಿವೈದ್ಯಕೀಯ ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿಯೊಬ್ಬರಿಗೆ ಕೊರೊನಾ ಪಾಸಿಟಿವ್‌ ಪತ್ತೆಯಾಗಿರುಧಿವುದು ತಿಧಿಳಿದು ಬಂದಿಧಿದೆ. ಇದರೊಂದಿಗೆ ಕಿಮ್ಸ್‌ ಸಿಬ್ಬಂದಿಯಲ್ಲಿಐವರಿಗೆ ಸೋಂಕು ಕಾಣಿಸಿಕೊಂಡಂತಾಗಿದ್ದು, ವೈದ್ಯರು, ವೈದ್ಯ ವಿದ್ಯಾರ್ಥಿಗಳಲ್ಲಿಆತಂಕ ಶುರುವಾಗಿದೆ. ಆದರೆ, ಇವರಾರ‍ಯರಿಗೂ ಚಿಕಿತ್ಸೆ ಪಡೆಯುವ ಸೋಂಕಿತರಿಂದಾಗಲಿ ಹಾಗೂ ನಾನಾ ಸಾಮಾನ್ಯ ಕಾಯಿಲೆಗೆ ತಪಾಸಣೆ ಬರುವ ರೋಗಿಗಳಿಂದ ಸೋಂಕು ತಗುಲಿಲ್ಲ. ವೈದ್ಯರೊಬ್ಬರಿಗೆ ಪುತ್ರನ ಸಂಪರ್ಕದಿಂದ ಪಾಸಿಟಿವ್‌ ಬಂದಿದ್ದರೆ, ಕೋವಿಡ್‌ ಕೇರ್‌ ಸೆಂಟರ್‌ನಲ್ಲಿಕೆಲಸ ನಿರ್ವಹಿಸುವ ಸ್ಟಾಫ್‌ನರ್ಸ್‌ವೊಬ್ಬರಿಗೆ ಮನೆಯಲ್ಲಿಸೋಂಕಿತ ಮೈದುನನ ಸಂಪರ್ಕದಿಂದ ಸೋಂಕು ಕಾಣಿಸಿಕೊಂಡಿದೆ. ಇವರ ಸಂಪರ್ಕದಿಂದ ಮತ್ತಿಬ್ಬರು ನರ್ಸ್‌ಗಳಿಗೆ ಸೋಂಕು ಹರಡಿದೆ. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಕಡ್ಢಾಯ 10 ದಿನಗಳ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ