ಆ್ಯಪ್ನಗರ

ದಾಖಲೆಗಾಗಿ ಸ್ತುತಿ ಇನ್‌ಲೈನ್‌ ಸ್ಕೇಟಿಂಗ್‌ ಇಂದು

ಹುಬ್ಬಳ್ಳಿ : ಇನ್‌ಲೈನ್‌ ಸ್ಕೇಟಿಂಗ್‌ಲ್ಲಿ ಮೂರು ಹುಲಾಹೂಪ್‌ (ಸೊಂಟದಲ್ಲಿ ತಿರುಗಿಸುವ ರಿಂಗ್‌)ಗಳನ್ನು ದೀರ್ಘಾವಧಿ ತಿರುಗಿಸುವ ಮೂಲಕ ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ ರಚಿಸಲು ಇಲ್ಲಿನ ಶಿರೂರ ಪಾರ್ಕ್‌ನ 9 ವರ್ಷದ ಬಾಲಕಿ ಸ್ತುತಿ ಕುಲಕರ್ಣಿ ಸಜ್ಜಾಗಿದ್ದು, ಜೂ.23ರಂದು ಬೆಳಗ್ಗೆ 9.30ಕ್ಕೆ ಇಲ್ಲಿನ ಗೋಕುಲ ರಸ್ತೆಯ ಡೆಕತ್ಲಾನ್‌ ಬಳಿ ಸ್ಕೇಟಿಂಗ್‌ ಆಯೋಜಿಸಲಾಗಿದೆ.

Vijaya Karnataka 23 Jun 2019, 5:00 am
ಹುಬ್ಬಳ್ಳಿ : ಇನ್‌ಲೈನ್‌ ಸ್ಕೇಟಿಂಗ್‌ಲ್ಲಿ ಮೂರು ಹುಲಾಹೂಪ್‌ (ಸೊಂಟದಲ್ಲಿ ತಿರುಗಿಸುವ ರಿಂಗ್‌)ಗಳನ್ನು ದೀರ್ಘಾವಧಿ ತಿರುಗಿಸುವ ಮೂಲಕ ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ ರಚಿಸಲು ಇಲ್ಲಿನ ಶಿರೂರ ಪಾರ್ಕ್‌ನ 9 ವರ್ಷದ ಬಾಲಕಿ ಸ್ತುತಿ ಕುಲಕರ್ಣಿ ಸಜ್ಜಾಗಿದ್ದು, ಜೂ.23ರಂದು ಬೆಳಗ್ಗೆ 9.30ಕ್ಕೆ ಇಲ್ಲಿನ ಗೋಕುಲ ರಸ್ತೆಯ ಡೆಕತ್ಲಾನ್‌ ಬಳಿ ಸ್ಕೇಟಿಂಗ್‌ ಆಯೋಜಿಸಲಾಗಿದೆ.
Vijaya Karnataka Web praise inline skating today for the record
ದಾಖಲೆಗಾಗಿ ಸ್ತುತಿ ಇನ್‌ಲೈನ್‌ ಸ್ಕೇಟಿಂಗ್‌ ಇಂದು

ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ರಶ್ಮಿ ಕುಲಕರ್ಣಿ, ಇನ್‌ಲೈನ್‌ ಸ್ಕೇಟಿಂಗ್‌ನಲ್ಲಿ ಕನಿಷ್ಠ 4 ನಿಮಿಷಗಳ ಕಾಲ ಸ್ತುತಿ ಹುಲಾಹೂಪ್‌ ತಿರುಗಿಸಲಿದ್ದು, ಅದನ್ನು ಚಿತ್ರೀಕರಣ ಮಾಡಿ, ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌, ಗೋಲ್ಡನ್‌ ಬುಕ್‌ ಆಫ್‌ ವಲ್ಡ…ರ್‍ ರೆಕಾರ್ಡ್‌ಗೆ ಕಳಿಸಿಕೊಡಲಿದ್ದೇವೆ. ದಾಖಲೆ ನಿರ್ಮಾಣವಾದಲ್ಲಿ 2ತಿಂಗಳಲ್ಲಿ ಅಲ್ಲಿಂದ ರೆಕಾರ್ಡ್‌ ನಿರ್ಮಾಣದ ಕುರಿತ ಪ್ರಮಾಣ ಪತ್ರ ಬರಲಿದೆ. ಕ್ಲಾಸ್‌ ಒನ್‌ ಅಧಿಕಾರಿಗಳಾದ ನಿರ್ಮಲಾ ಸಿ.ಸಿ., ಡಾ.ಎಂ.ಜಿ. ಗಿರಿಯಪ್ಪಗೌಡರ ಆಗಮಿಸಿ ದಾಖಲೆಯನ್ನು ಪ್ರಮಾಣೀಕರಿಸಲಿದ್ದಾರೆ ಎಂದರು. ಕೋಚ್‌ ಅಕ್ಷಯ ಸೂರ್ಯವಂಶಿ, ಕಿಶೋರ್‌ ಕುಲಕರ್ಣಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ