ಆ್ಯಪ್ನಗರ

ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಿ :ಮುರಗೋಡ

ಧಾರವಾಡ : ಅಂಗನವಾಡಿ ಕೇಂದ್ರಗಳನ್ನು 1 ರಿಂದ 4 ವರ್ಷದ ಮಕ್ಕಳ ಆರೈಕೆ ಕೇಂದ್ರಗಳನ್ನಾಗಿ ಮಾಡಬೇಕು. 4ರಿಂದ 6 ವರ್ಷದ ಮಕ್ಕಳಿಗೆ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷ ಣವನ್ನು ಪ್ರಸ್ತಕ ಸಾಲಿನ ಶೈಕ್ಷ ಣಿಕ ವರ್ಷದಿಂದಲೇ ನೀಡಬೇಕು ಎಂದು ಜಿಲ್ಲಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಅಧ್ಯಕ್ಷ ಈರಣ್ಣಾ ಮುರಗೋಡ ಹೇಳಿದರು.

Vijaya Karnataka 23 May 2019, 5:00 am
ಧಾರವಾಡ : ಅಂಗನವಾಡಿ ಕೇಂದ್ರಗಳನ್ನು 1 ರಿಂದ 4 ವರ್ಷದ ಮಕ್ಕಳ ಆರೈಕೆ ಕೇಂದ್ರಗಳನ್ನಾಗಿ ಮಾಡಬೇಕು. 4ರಿಂದ 6 ವರ್ಷದ ಮಕ್ಕಳಿಗೆ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷ ಣವನ್ನು ಪ್ರಸ್ತಕ ಸಾಲಿನ ಶೈಕ್ಷ ಣಿಕ ವರ್ಷದಿಂದಲೇ ನೀಡಬೇಕು ಎಂದು ಜಿಲ್ಲಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಅಧ್ಯಕ್ಷ ಈರಣ್ಣಾ ಮುರಗೋಡ ಹೇಳಿದರು.
Vijaya Karnataka Web pre primary education for children murugoda
ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಿ :ಮುರಗೋಡ

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳ ಆರೋಗ್ಯ, ಪೌಷ್ಟಿಕತೆ ಕುರಿತು ಅರಿವಿನ ಜತೆಗೆ ಸಮಾಜದಲ್ಲಿನ ಭಾವನಾತ್ಮಕ ಸಾಮರ್ಥ್ಯ‌ಗಳಿಗೆ ಒತ್ತು ನೀಡುವ ನೀತಿ ರೂಪಿಸುವುದರ ಜತೆಗೆ ಮಕ್ಕಳ ಅಭಿವೃದ್ಧಿಗೆ ಸಹಾಯಕವಾಗುವ ಪಾತ್ರ ನಿರ್ವಹಿಸಬೇಕು. ಮಕ್ಕಳಿಗೆ ಜೀವನ ಪರ್ಯಂತ ಕಲಿಕೆಗೆ ಭದ್ರ ಅಡಿಪಾಯ ಸಿಗುತ್ತದೆ ಎಂದರು.

ಶಿಶು ಪಾಲನೆಯಲ್ಲಿ ತರಬೇತಿ ಪಡೆದ ಶಿಕ್ಷ ಕಿಯರು ಶಿಶುಪಾಲನಾ ಕೇಂದ್ರದಲ್ಲಿ ಬೇರೆ ಕಾರ್ಯಗಳ ಒತ್ತಡವಿಲ್ಲದೆ ಮಕ್ಕಳ ಜತೆ ಆಟ-ಪಾಠಗಳಲ್ಲಿ ಬೆರೆಯಬೇಕು. ಸಹಾಯಕರು ಸರಕಾರ ನೀಡಿದ ಸಮತೋಲನ ಆಹಾರ ವಿತರಿಸಿ, ಮಕ್ಕಳ ಬೇಕು ಬೇಡಗಳಿಗೆ ಸ್ಪಂದಿಸಲು ಪ್ರತಿ ಶಿಶು ಪಾಲನಾ ಕೇಂದ್ರಕ್ಕೆ ಮೂರು ಸಿಬ್ಬಂದಿ ನೇಮಿಸಬೇಕು ಎಂದರು.

ಶಿಶು ಪಾಲನಾ ಕೇಂದ್ರಗಳ ನಂತರದಲ್ಲಿ ಬರುವ ಮುಂದಿನ ಹಂತವೆಂದರೆ ಪ್ರಾಥಮಿಕ ಶಾಲೆ. ಈ ಹಂತವು ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಿಕ್ಷ ಣದ ಹಂತವನ್ನು ಒಳಗೊಂಡಿರುತ್ತದೆ. ಈ ಹಂತದಲ್ಲಿ ನರ್ಸರಿ ಶಿಕ್ಷ ಕರ ತರಬೇತಿ ಹೊಂದಿದ ಇಬ್ಬರು ಶಿಕ್ಷ ಕರು ಮತ್ತು ಒಬ್ಬರು ಆರೋಗ್ಯ ಕಾರ್ಯಕರ್ತೆ ನೇಮಕವಾಗಬೇಕು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ