ಆ್ಯಪ್ನಗರ

ಮಕ್ಕಳ ವಿಜ್ಞಾನ ಹಬ್ಬದ ಪೂರ್ವ ಸಿದ್ಧತಾ ಸಭೆ

ಧಾರವಾಡ: ವಿದ್ಯಾರ್ಥಿಗಳಲ್ಲಿವೈಚಾರಿಕತೆ ಹೆಚ್ಚಿಸಲು ವಿಜ್ಞಾನವೂ ಮಹತ್ವದ ಪಾತ್ರ ವಹಿಸಲಿದೆ ಎಂದು ಮಕ್ಕಳ ಸಾಹಿತಿ ಶಂಕರ ಹಲಗತ್ತಿ ಹೇಳಿದರು. ಇಲ್ಲಿನ ಗುರುಭವನದಲ್ಲಿಜಿಲ್ಲಾಭಾರತ ಜ್ಞಾನ ವಿಜ್ಞಾನ ಸಮಿತಿ ಆಯೋಜಿಸಿದ 2019ರ ಮಕ್ಕಳ ವಿಜ್ಞಾನ ಹಬ್ಬದ ಪೂರ್ವ ಸಿದ್ಧತಾ ಸಭೆಯಲ್ಲಿಮಾತನಾಡಿದರು.

Vijaya Karnataka 6 Oct 2019, 5:00 am
ಧಾರವಾಡ: ವಿದ್ಯಾರ್ಥಿಗಳಲ್ಲಿವೈಚಾರಿಕತೆ ಹೆಚ್ಚಿಸಲು ವಿಜ್ಞಾನವೂ ಮಹತ್ವದ ಪಾತ್ರ ವಹಿಸಲಿದೆ ಎಂದು ಮಕ್ಕಳ ಸಾಹಿತಿ ಶಂಕರ ಹಲಗತ್ತಿ ಹೇಳಿದರು.
Vijaya Karnataka Web preparatory meeting of childrens science festival
ಮಕ್ಕಳ ವಿಜ್ಞಾನ ಹಬ್ಬದ ಪೂರ್ವ ಸಿದ್ಧತಾ ಸಭೆ

ಇಲ್ಲಿನ ಗುರುಭವನದಲ್ಲಿಜಿಲ್ಲಾಭಾರತ ಜ್ಞಾನ ವಿಜ್ಞಾನ ಸಮಿತಿ ಆಯೋಜಿಸಿದ 2019ರ ಮಕ್ಕಳ ವಿಜ್ಞಾನ ಹಬ್ಬದ ಪೂರ್ವ ಸಿದ್ಧತಾ ಸಭೆಯಲ್ಲಿಮಾತನಾಡಿದರು.
ಸರಳ ಪ್ರಯೋಗ, ನಿತ್ಯಜೀವನದಲ್ಲಿವಿಜ್ಞಾನ, ಆಟಿಕೆಗಳ ಮೂಲಕ ಹಾಡು, ಒಗಟು ಮೂಲಕ ವಿಜ್ಞಾನ ಕಲಿಸುವ ಯೋಜನೆಯೇ ಮಕ್ಕಳ ವಿಜ್ಞಾನ ಹಬ್ಬದ ಉದ್ದೇಶ. ಇದು ವಿದ್ಯಾರ್ಥಿಗಳಲ್ಲಿಚಿಕಿತ್ಸಕ ಪ್ರವೃತ್ತಿ ಹೆಚ್ಚಿಸಿ ಚೈತನ್ಯಶೀಲರನ್ನಾಗಿ ಮಾಡುತ್ತದೆ ಎಂದರು.

ಪತ್ರಕರ್ತ ಎಫ್‌.ಸಿ.ಚೇಗರಡ್ಡಿ ಮಾತನಾಡಿ, ಮಕ್ಕಳ ವಿಜ್ಞಾನ ಹಬ್ಬ ವಿದ್ಯಾರ್ಥಿಗಳಲ್ಲಿಬೇಸರ ಹಾಗೂ ಜಡತ್ವ ನೀಗಿಸಿ ಮಕ್ಕಳಲ್ಲಿತಾರ್ಕಿಕ ಶಕ್ತಿ ಹೆಚ್ಚಿಸಲಿದೆ. ಜಿಲ್ಲೆಯಲ್ಲಿ12 ಕ್ಲಸ್ಟರ್‌ ಹಬ್ಬಕ್ಕಾಗಿ ಆಯ್ಕೆ ಮಾಡಿದ್ದು, ಜಿಲ್ಲಾಮಟ್ಟದ ಸಮಾವೇಶ ಧಾರವಾಡದಲ್ಲಿಏರ್ಪಡಿಸಲಾಗುವುದು. ಸಂಪನ್ಮೂಲ ವ್ಯಕ್ತಿಗಳು ಮಕ್ಕಳ ಸಂದೇಹಗಳಿಗೆ ಪ್ರಾಯೋಗಿಕವಾಗಿ ಉತ್ತರಿಸುವರು ಎಂದು ತಿಳಿಸಿದರು.

ಜಿಲ್ಲಾಭಾರತ ಜ್ಞಾನ ವಿಜ್ಞಾನ ಸಮಿತಿಯ ಅಧ್ಯಕ್ಷ ಗುರು ತಿಗಡಿ ಪ್ರಾಸ್ತಾವಿಕ ಮಾತನಾಡಿ, ಕ್ಲಸ್ಟರ್‌, ತಾಲೂಕು ಹಾಗೂ ಜಿಲ್ಲಾಮಟ್ಟದ ವಿಜ್ಞಾನ ಹಬ್ಬಕ್ಕೆ ಇಲಾಖೆ ಪರ ಸಹಕಾರ ನೀಡಲಾಗುವುದು ಎಂದರು.

ಡಾ.ಲಿಂಗರಾಜ ರಾಮಾಪೂರ, ಭಾರತಿ ಸಾಧನಿ, ಸುಮಿತ್ರಾ ಹಿರೇಮಠ, ಎಚ್‌.ಎಫ್‌.ಸಮುದ್ರಿ, ಡಿ.ವಿ.ಸಜ್ಜನ, ಸಿದ್ಧಾರೂಢ ಹೂಗಾರ, ಶಿವಾನಂದ ಭಜಂತ್ರಿ ಇದ್ದರು. ವೀರಣ್ಣ ಒಡ್ಡೀನ ಸ್ವಾಗತಿಸಿದರು. ಎಲ್‌.ಐ.ಲಕ್ಕಮ್ಮನವರ ನಿರೂಪಿಸಿದರು. ಚಂದ್ರು ತಿಗಡಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ