ಆ್ಯಪ್ನಗರ

ರಕ್ತದಾನಕ್ಕೆ ಮುಂದಾಗಿರಿ : ಜಾಲ್ಡೆ

ಕುಂದಗೋಳ : ದೇಹದಲ್ಲಿನ ರಕ್ತವು ಸರಿಯಾಗಿ ಚಾಲನೆಗೊಳ್ಳಲು ರಕ್ತದಾನ ಅವಶ್ಯವಾಗಿದ್ದು, ಪ್ರತಿಯೊಬ್ಬರೂ ರಕ್ತದಾನ ಮಾಡುವಲ್ಲಿ ಮುಂದಾಗಬೇಕು ಎಂದು ಸ್ರ್ತೀರೋಗ ತಜ್ಞೆ ಡಾ. ದತ್ತಾತ್ರೇಯ ಜಾಲ್ಡೆ ಕರೆ ನೀಡಿದರು.

Vijaya Karnataka 29 Dec 2018, 5:00 am
ಕುಂದಗೋಳ : ದೇಹದಲ್ಲಿನ ರಕ್ತವು ಸರಿಯಾಗಿ ಚಾಲನೆಗೊಳ್ಳಲು ರಕ್ತದಾನ ಅವಶ್ಯವಾಗಿದ್ದು, ಪ್ರತಿಯೊಬ್ಬರೂ ರಕ್ತದಾನ ಮಾಡುವಲ್ಲಿ ಮುಂದಾಗಬೇಕು ಎಂದು ಸ್ರ್ತೀರೋಗ ತಜ್ಞೆ ಡಾ. ದತ್ತಾತ್ರೇಯ ಜಾಲ್ಡೆ ಕರೆ ನೀಡಿದರು.
Vijaya Karnataka Web proceed to donate bloodjalde
ರಕ್ತದಾನಕ್ಕೆ ಮುಂದಾಗಿರಿ : ಜಾಲ್ಡೆ


ಪಟ್ಟಣದ ಡಿಪಿಪಿ ಸೋಸೈಟಿ ಆವರಣದಲ್ಲಿ ಸಿದ್ದಸುರಭಿ ಪ್ರತಿಷ್ಠಾನ ರಕ್ತದಾನ ಶಿಬಿರ ಮತ್ತು ಅಟಲ್‌ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಚಾಲನೆನೀಡಿ ಮಾತನಾಡಿದರು.

ಅಟಲ್‌ಜೀ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ರಾಷ್ಟ್ರದ ಬೆಳೆವಣಿಗೆಗಾಗಿ ಅನೇಕ ಯೋಜನೆಗಳನ್ನು, ನೆರೆರಾಷ್ಟ್ರಗಳೊಂದಿಗೆ ಬಾಂಧವ್ಯ ಬೆಸೆಯಲು ಮುಖ್ಯೊಪ್ಪಂದಗಳನ್ನು ಹಾಗೂ ದೇಶದಲ್ಲಿನ ಸರ್ವರಾಜ್ಯಗಳ ಅಭಿವೃದ್ಧಿಗಾಗಿ ತಮ್ಮ ಜೀವ ಸವೆಸಿದವರು. ಆದರೆ ನಮ್ಮ ದೇಶದ ಜನರು ತಮ್ಮ ಅಭಿವೃದ್ಧಿಯನ್ನು ತಾವೇ ಸಹಿಸದಾಗಿ ಲೋಕಸಭಾ ಚುನಾವಣೆಯಲ್ಲಿ ಅವರನ್ನು ಸೋಲಿಸಿ ನಮ್ಮ ಕಾಲ ಮೇಲೆ ನಾವೇ ಕಲ್ಲುಹಾಕಿಕೊಂಡಂತಾದದ್ದು ದುರದೃಷ್ಟಕರ ಎಂದು ವಿಷಾಧಿಸಿದರು.

ರಕ್ತದಾನಿ ರಾಘವೇಂದ್ರ ರೇಣುಕೆ ಅವರನ್ನು ಸನ್ಮಾನಿಸಲಾಯಿತು. ಪ್ರತಿಷ್ಠಾನ ಸಮಿತಿಯ ಅನೇಕ ಸದಸ್ಯರು, ರಕ್ತದಾನಿಗಳು ಹಾಗೂ ಪಟ್ಟಣದ ಸಾರ್ವಜನಿಕರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ