ಆ್ಯಪ್ನಗರ

ಹುಚ್ಚುನಾಯಿ ಕಡಿತಕ್ಕೆ ಸೂಕ್ತ ಚಿಕಿತ್ಸೆ: ಭರವಸೆ

ಅಣ್ಣಿಗೇರಿ : ಹುಚ್ಚು ನಾಯಿ ಕಡಿತದಿಂದ ಯಾರೂ ಭಯ ಪಡಬೇಕಿಲ್ಲ ಅದಕ್ಕೆ ಚುಚ್ಚುಮದ್ದಿನ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿಗಳು ಸೈದಾಪೂರ ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಚಿಕಿತ್ಸೆ ಭರವಸೆ ನೀಡಿದರು.ಈ ವೇಳೆ ಸ್ಥಳೀಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Vijaya Karnataka 2 Apr 2019, 5:00 am
ಅಣ್ಣಿಗೇರಿ : ಹುಚ್ಚು ನಾಯಿ ಕಡಿತದಿಂದ ಯಾರೂ ಭಯ ಪಡಬೇಕಿಲ್ಲ ಅದಕ್ಕೆ ಚುಚ್ಚುಮದ್ದಿನ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿಗಳು ಸೈದಾಪೂರ ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಚಿಕಿತ್ಸೆ ಭರವಸೆ ನೀಡಿದರು.ಈ ವೇಳೆ ಸ್ಥಳೀಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
Vijaya Karnataka Web proper treatment for madness reduction guaranteed
ಹುಚ್ಚುನಾಯಿ ಕಡಿತಕ್ಕೆ ಸೂಕ್ತ ಚಿಕಿತ್ಸೆ: ಭರವಸೆ


ಒಂದೂವರೆ ತಿಂಗಳ ಹಿಂದೆ ಸೈದಾಪೂರ ಗ್ರಾಮದ ಮೌಲಾಸಾಬ ನದಾಫ್‌ ಎಂಬುವವರ ಎತ್ತಿಗೆ ಹುಚ್ಚು ನಾಯಿ ಕಡಿದಿತ್ತು. ಅಣ್ಣಿಗೇರಿಯ ಪಶು ವೈದ್ಯ ಆಸ್ಪತ್ರೆಯಲ್ಲಿ ಎತ್ತಿಗೆ ಸೂಕ್ತ ಚಿಕಿತ್ಸೆ ಕೊಡಿಸಿದ್ದರು.ಆದರೂ ನಂಜು ಹೆಚ್ಚಾಗಿ ಎತ್ತಿಗೆ ಹುಚ್ಚು ಹಿಡಿದಿತ್ತು. ಎತ್ತು ಗ್ರಾಮದಲ್ಲಿ ಸಿಕ್ಕ ಸಿಕ್ಕವರಿಗೆ ಕಡಿಯಲು, ತಿವಿಯಲು ಮುಂದಾಗುತ್ತಿತ್ತು. ಗೋಡೆಗೆ ಹಾಯ್ದು ತನ್ನ ಕೊಂಬನ್ನು ತಾನೇ ಮುರಿದುಕೊಂಡು ರಕ್ತಸ್ರಾವವಾಗಿತ್ತು. ಅನಿವಾರ್ಯವಾಗಿ ಎತ್ತನ್ನು ಸಾಯಿಸಲೇಬೇಕಾಯಿತು.

ಎತ್ತಿನ ಜೊಲ್ಲು, ರಕ್ತ ಸೋರುವಿಕೆ ಜೊತೆಗೆ ಅದನ್ನು ಮುಟ್ಟಿ ಹೂಳುವಲ್ಲಿ ಸೋಂಕು ತಗುಲಿರುವ ಸಾಧ್ಯತೆ ಇರುವುದರಿಂದ ತಮಗೂ ಹುಚ್ಚು ಹಿಡಿದೀತೆಂಬ ಭೀತಿ ಜನರದ್ದಾಗಿತ್ತು. ಇದಕ್ಕೆ ಪರಿಹಾರಕ್ಕೆಂದು ಅಣ್ಣಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಂಜಕ್ಷ ನ್‌ ಪಡೆಯಲು ಹೋದರೆ ಅಲ್ಲಿಯೂ ಹುಚ್ಚುನಾಯಿ ಕಡಿತದ ಇಂಜಕ್ಷ ನ್‌ಗಳ ಸಂಗ್ರಹ ಇರಲಿಲ್ಲ. ಆಗ ಅನಿವಾರ್ಯವಾಗಿ ಹೊರಗಿನಿಂದ ಔಷಧ ಖರೀದಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಇಂದಿಗೂ ಸುಮಾರು 43 ಜನ ಗ್ರಾಮಸ್ಥರು ಹುಚ್ಚು ನಾಯಿ ಸೋಂಕಿನ ಭೀತಿಯನ್ನು ಎದುರಿಸುತ್ತಿದ್ದು, ಬಡತನ ಹಿನ್ನೆಲೆಯ ಅವರಿಗೆ ದೂರದೂರಿಗೆ ಹೋಗಿ ಚಿಕಿತ್ಸೆ ಪಡೆಯುವುದು ಕಷ್ಟಕರವಾಗುವುದನ್ನು ತಪ್ಪಿಸಲು ಚಿಕಿತ್ಸೆ ಕೋರ್ಸ ಮುಗಿಯುವರೆಗೂ ಗ್ರಾಮದಲ್ಲಿಯೇ ವೈದ್ಯಾಧಿಕಾರಿಗಳು ಭೇಟಿ ನೀಡಿ ಸ್ಥಳದಲ್ಲಿಯೇ ಚಿಕಿತ್ಸೆಯನ್ನು ನೀಡುವಂತೆ ಜಿಲ್ಲಾ ವೈದ್ಯಾಧಿಕಾರಿ ಡಾ.ಆರ್‌.ಎಮ್‌.ದೊಡ್ಡಮನಿ ಸೂಚಿಸಿದ್ದಾರೆ.

ಜಿಲ್ಲೆಯ ಮುಖ್ಯ ಔಷಧ ಸಂಗ್ರಹಗಾರದಲ್ಲಿಯೂ ಹುಚ್ಚು ನಾಯಿ ಕಡಿತದ ಔಷಧಿ ಖಾಲಿಯಾಗಿದೆ. ಮಾರುಕಟ್ಟೆಯಿಂದ ಖರೀದಿಸಲು ಜಿಲ್ಲಾ ವೈದ್ಯಾಧಿಕಾರಿಗಳು ಅನುಮತಿ ನೀಡಿದ್ದಾರೆ. ಹೊರಗಿನಿಂದ ಔಷಧಿಗಳನ್ನು ತರಿಸಿ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಗ್ರಾಮಸ್ಥರು ಯಾವ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ ಎಂದು ನವಲಗುಂದ ತಾಲೂಕು ವೈದ್ಯಾಧಿಕಾರಿ ಕೃಷ್ಣ ಮಸೂತಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ