ಆ್ಯಪ್ನಗರ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ

ಅಳ್ನಾವರ: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸಿ ಇಲ್ಲಿನ ಅಂಜುಮನ್‌ ಏ ಇಸ್ಲಾಂ ಸಂಸ್ಥೆ ನಡೆಸುತ್ತಿರುವ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

Vijaya Karnataka 18 Feb 2020, 5:00 am
ಅಳ್ನಾವರ: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸಿ ಇಲ್ಲಿನ ಅಂಜುಮನ್‌ ಏ ಇಸ್ಲಾಂ ಸಂಸ್ಥೆ ನಡೆಸುತ್ತಿರುವ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
Vijaya Karnataka Web protest against the citizenship amendment act
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ

ಪಟ್ಟಣ ಪಂಚಾಯಿತಿ ಕಾರ್ಯಾಲಯದ ಎದುರು ಬೆಳಿಗ್ಗೆಯಿಂದ ಸಂಜೆಯವರೆಗೆ ಧರಣಿ ಕುಳಿತ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿ ತಕ್ಷಣ ಇಂತಹ ಮಸೂದೆಯನ್ನು ರದ್ದು ಪಡಿಸಬೇಕು. ಈ ಕಾಯ್ದೆ ಜಾತ್ಯಾತೀತ ನಿಲುವಿಗೆ ವಿರುದ್ಧವಾಗಿದೆ ಎಂದರು.

ನೂರಾನಿ ಮಸಜಿದ್‌, ರೆಹಮತ್‌ ಮಸಜಿದ್‌, ಇರ್ಶಾದ್‌ ಮಸಜಿದ್‌, ಚೋಟಿ ಮಸಜಿದ್‌, ಆಶ್ರಯ ಕಾಲೋನಿಯ ಮಸಜಿದ್‌ ಏ ರಸೀದ್‌ ಹಾಗೂ ಅಂಬೊಳ್ಳಿ, ಅರವಟಗಿ, ಹೊನ್ನಾಪೂರ ಗ್ರಾಮಗಳ ಮಸೀದಿಗಳ ಮುತವಲ್ಲಿಗಳು, ಪದಾಧಿಕಾರಿಗಳು ಭಾಗವಹಿಸಿದ್ದರು. ಕಾಯ್ದೆ ರದ್ದು ಪಡಿಸಲು ಆಗ್ರಹಿಸಿ ರಾಷ್ಟ್ರಪತಿಗಳಿಗೆ ನೀಡಿದ ಮನವಿಯನ್ನು ಉಪ ತಹಸೀಲ್ದಾರ್‌ ಶಿವಾನಂದ ಹೆಬ್ಬಳ್ಳಿ ಸ್ವೀಕರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ