ಆ್ಯಪ್ನಗರ

ದಲಿತ ಹೋರಾಟ ಸಮಿತಿ ಸದಸ್ಯರಿಂದ ಪ್ರತಿಭಟನೆ

ಧಾರವಾಡ: ಮುಂಬೈ ದಾದರನ ಹಿಂದೂ ಕಾಲೊನಿಯಲ್ಲಿರುವ ಅಂಬೇಡ್ಕರ್‌ ಅವರ ನಿವಾಸ ರಾಜ್‌ ಗೃಹ ಉದ್ಯಾನದಲ್ಲಿಕೆಲ ಕಿಡಿಗೇಡಿಗಳು ಕಲ್ಲುತೂರಾಡಿ ದಾಂಧಲೆ ನಡೆಸಿರುವುದನ್ನು ಖಂಡಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜೈಭೀಮ್‌ ಅಖಿಲ ಭಾರತ ದಲಿತ ಹೋರಾಟ ಸಮಿತಿ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.

Vijaya Karnataka 14 Jul 2020, 5:00 am
ಧಾರವಾಡ: ಮುಂಬೈ ದಾದರನ ಹಿಂದೂ ಕಾಲೊನಿಯಲ್ಲಿರುವ ಅಂಬೇಡ್ಕರ್‌ ಅವರ ನಿವಾಸ ರಾಜ್‌ ಗೃಹ ಉದ್ಯಾನದಲ್ಲಿಕೆಲ ಕಿಡಿಗೇಡಿಗಳು ಕಲ್ಲುತೂರಾಡಿ ದಾಂಧಲೆ ನಡೆಸಿರುವುದನ್ನು ಖಂಡಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜೈಭೀಮ್‌ ಅಖಿಲ ಭಾರತ ದಲಿತ ಹೋರಾಟ ಸಮಿತಿ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.
Vijaya Karnataka Web 13MALLU2_21
ಧಾರವಾಡ ಜಿಲ್ಲಾಧಿಕಾರಿ ಕಚೇರಿಯ ಎದುರು ಜೈಭೀಮ್‌ ಅಖಿಲ ಭಾರತ ದಲಿತ ಹೋರಾಟ ಸಮಿತಿ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.

ಮುಂಬೈನಲ್ಲಿದಾಂಧಲೆ ನಡೆಸಲು ಅಲ್ಲಿನ ಭದ್ರತಾ ವೈಫಲ್ಯವೇ ಕಾರಣ. ಮಹಾರಾಷ್ಟ್ರ ಸರಕಾರದ ವೈಫಲ್ಯದಿಂದಲೇ ಈ ಘಟನೆ ನಡೆದಿದೆ. ಕೂಡಲೇ ಈ ಕಲ್ಲುತೂರಾಟ ನಡೆಸಿದ ಕಿಡಿಗೇಡಿಗಳನ್ನು ಬಂಧಿಸಿ, ರಾಜ್‌ ಗೃಹವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಣೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಲಕ್ಷತ್ರ್ಮಣ ಬಕ್ಕಾಯಿ, ಚಂದ್ರಕಾಂತ ಸಿದ್ದಾಪೂರ, ಇಸ್ಮಾಯಿಲ್‌ ಸುಂಕದ, ಇತರರು ಪ್ರತಿಭಟನೆಯಲ್ಲಿಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ