ಆ್ಯಪ್ನಗರ

ಡಿಸಿ ಕಚೇರಿ ಎದುರು ಪ್ರತಿಭಟನೆ

ಧಾರವಾಡ: ಸಂವಿಧಾನವನ್ನು ಡಾ.ಆರ್‌.ಅಂಬೇಡ್ಕರ್‌ ಅವರು ಅಷ್ಟೇ ಬರೆದಿಲ್ಲಎಂದು ಸುತ್ತೋಲೆ ಹೊರಡಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ನಿರ್ದೇಶಕರ ಮೇಲೆ ಕೆಸಿಎಸ್‌ಆರ್‌ ನಿಯಮದನ್ವಯ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಭಾರತರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ ಲಿಡ್ಕರ್‌

Vijaya Karnataka 14 Nov 2019, 5:00 am
ಧಾರವಾಡ: ಸಂವಿಧಾನವನ್ನು ಡಾ.ಆರ್‌.ಅಂಬೇಡ್ಕರ್‌ ಅವರು ಅಷ್ಟೇ ಬರೆದಿಲ್ಲಎಂದು ಸುತ್ತೋಲೆ ಹೊರಡಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ನಿರ್ದೇಶಕರ ಮೇಲೆ ಕೆಸಿಎಸ್‌ಆರ್‌ ನಿಯಮದನ್ವಯ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಭಾರತರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ ಲಿಡ್ಕರ್‌ ಹಿತಾಭಿವೃದ್ಧಿ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಲಾಯಿತು.
Vijaya Karnataka Web protest in front of dc office
ಡಿಸಿ ಕಚೇರಿ ಎದುರು ಪ್ರತಿಭಟನೆ


ಈ ವೇಳೆ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡ ಸಂಘದ ಪದಾಧಿಕಾರಿಗಳು, ಅಂಬೇಡ್ಕರ್‌ ಬಗ್ಗೆ ಈ ರೀತಿ ಸುತ್ತೋಲೆ ಹೊರಡಿಸಿರುವುದು ಖಂಡನೀಯ ಎಂದರು.

ಸಾರ್ವಜನಿಕ ಇಲಾಖೆಯ ಆಯುಕ್ತರು ಈ ತರದ ಗೋಂದಲಗಳಿಂದ ಶಾಲಾ-ಕಾಲೇಜು ಮಕ್ಕಳಿಗೆ ತಪ್ಪು ಸಂದೇಶ ಹೋಗಲಿದೆ. ಹೀಗಾಗಿ ನ.26 ರಂದು ಸಂವಿಧಾನ ಸಮರ್ಪಣೆ ದಿನಾಚರಣೆ ವೇಳೆ ಸಂವಿಧಾನದ ಕುರಿತು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳಿಗೆ ಸ್ಪಷ್ಟ ಸಂದೇಶ ನೀಡಬೇಕು ಎಂದು ಒತ್ತಾಯಿಸಿದರು.

ಸಂವಿಧಾನಿಕ ಕಾನೂನಿಗೆ ಅವಮಾನಗೊಳಿಸಿ ಕಾನೂನಿನ ಸಾರ್ವಭೌಮತ್ವಕ್ಕೆ ಚ್ಯುತಿ ಉಂಟು ಮಾಡುವುದು ಅಪರಾಧ. ಹೀಗಾಗಿ ಸುತ್ತೋಲೆ ಹೊರಡಿಸಿದ ಅಧಿಕಾರಿಗಳ ವಿರುದ್ಧ, ನಿರ್ದೇಶನ ನೀಡಿದ ಸಚಿವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಮೂಲಕ ದೇಶದ ಸಾರ್ವಭೌಮತೆಯನ್ನು ಗೌರವಿಸಬೇಕು ಎಂದು ತಿಳಿಸಿದ್ದಾರೆ.

ಒಂದು ವೇಳೆ ಪ್ರಸಕ್ತ ಪ್ರಕರಣವನ್ನು ನಿರ್ಲಕ್ಷ ಮಾಡಿದರೆ ರಾಜ್ಯಾದ್ಯಂತ ಎಲ್ಲಪ್ರಗತಿಪರ ಚಿಂತಕರು, ಶೋಷಿತ ಸಮುದಾಯಗಳು ಹಾಗೂ ದಲಿತ ಸಂಘಟನೆಗಳು ರಾಜ್ಯದಲ್ಲಿಬಂದ್‌ಗೆ ಕರೆ ಕೊಟ್ಟು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಅಶೋಕ ಭಂಡಾರಿ, ಲಕ್ಷತ್ರ್ಮಣ ಬಕ್ಕಾಯಿ, ಪ್ರಕಾಶ ದೊಡವಾಡ, ನಾರಾಯಣ ಮಾದರ, ಹನುಮಂತ ವಕ್ಕುಂದ, ಶಬ್ಬೀರ ಅತ್ತಾರ, ಗೌರಮ್ಮ ಅರಳಿಮಟ್ಟಿ, ಪರಶುರಾಮ ದೊಡಮನಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ