ಆ್ಯಪ್ನಗರ

ಗುಂಡಿಯಲ್ಲಿ ಭಾವಚಿತ್ರ ಇಟ್ಟು ಪ್ರತಿಭಟನೆ

ಹುಬ್ಬಳ್ಳಿ: ನಗರದ ವಿದ್ಯಾವನ ಕಾಲೊನಿಗೆ ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಸ್ಥಳೀಯ ನಿವಾಸಿಗಳು ವಿದ್ಯಾವನ ನಿವಾಸಿ ಹಿತವರ್ಧಕ ಸಂಘದ ನೇತೃತ್ವದಲ್ಲಿಭಾನುವಾರ ರಸ್ತೆಯ ತಗ್ಗು-ಗುಂಡಿಯಲ್ಲಿಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌, ಅಲ್ಲಿನ ಮಾಜಿ ಕಾರ್ಪೋರೇಟರ್‌ ಮಹೇಶ

Vijaya Karnataka 28 Sep 2020, 5:00 am
ಹುಬ್ಬಳ್ಳಿ: ನಗರದ ವಿದ್ಯಾವನ ಕಾಲೊನಿಗೆ ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಸ್ಥಳೀಯ ನಿವಾಸಿಗಳು ವಿದ್ಯಾವನ ನಿವಾಸಿ ಹಿತವರ್ಧಕ ಸಂಘದ ನೇತೃತ್ವದಲ್ಲಿಭಾನುವಾರ ರಸ್ತೆಯ ತಗ್ಗು-ಗುಂಡಿಯಲ್ಲಿಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌, ಅಲ್ಲಿನ ಮಾಜಿ ಕಾರ್ಪೋರೇಟರ್‌ ಮಹೇಶ ಬುರ್ಲಿ ಹಾಗೂ ಪಾಲಿಕೆ ಅಧಿಕಾರಿಗಳ ಭಾವಚಿತ್ರ ಇಟ್ಟು ರಂಗೋಲಿ ಬಿಡಿಸಿ ವಿನೂತನ ರೀತಿ ಪ್ರತಿಭಟನೆ ಮಾಡಿದರು.
Vijaya Karnataka Web 27 SANTOSH-ROAD_21
ಹುಬ್ಬಳ್ಳಿ ವಿದ್ಯಾವನ ಕಾಲೊನಿಗೆ ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ನಿವಾಸಿಗಳು ರಸ್ತೆ ತಗ್ಗು-ಗುಂಡಿಯಲ್ಲಿಜನಪ್ರತಿನಿಧಿಗಳ ಭಾವಚಿತ್ರ ಇಟ್ಟು, ರಂಗೋಲಿ ಬಿಡಿಸಿ ವಿನೂತನ ರೀತಿ ನಡೆಸಿದರು.


ತ್ಯಾಜ್ಯ ವಿಲೇವಾರಿ, ಚರಂಡಿ ಶುಚಿಗೊಳಿಸುವುದು, ಉತ್ತಮ ರಸ್ತೆ ನಿರ್ಮಾಣ ಹಾಗೂ ಒಳ ರಸ್ತೆಗಳ ದುರಸ್ತಿ ಸೇರಿದಂತೆ ಅನೇಕ ಮೂಲ ಸೌಕರ್ಯಗಳಿಂದ ವಿದ್ಯಾವನ ಕಾಲೊನಿ ವಂಚಿತವಾಗಿದೆ. ಪಾಲಿಕೆ ಹಾಗೂ ವಿಧಾನಸಭೆ ಚುನಾವಣೆ ಸಮಯದಲ್ಲಿಮಾತ್ರ ಜನಪ್ರತಿನಿಧಿಗಳು ಇಲ್ಲಿಭೇಟಿ ನೀಡಿ ಅಭಿವೃದ್ಧಿ ಭರವಸೆ ನೀಡಿದ್ದಾರೆ. ನೂರಾರು ಕುಟುಂಬಗಳು ವಾಸಿಸುತ್ತಿರುವ ಹಾಗೂ 20ಕ್ಕೂ ಅಧಿಕ ವರ್ಷ ಹಳೆಯ ವಿದ್ಯಾವನ ಕಾಲೊನಿಗೆ ಈವರೆಗೂ ಮೂಲಸೌಕರ್ಯ ಒದಗಿಸಿಲ್ಲಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಅವಳಿ ನಗರದ ರಸ್ತೆಗಳಲ್ಲಿಬಿದ್ದಿರುವ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಂಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿಲ್ಲ. ಇದರಿಂದಾಗಿ ಅವಳಿ ನಗರದ ಪ್ರಮುಖ ಹಾಗೂ ವಿವಿಧ ನಗರ, ಬಡಾವಣೆಗಳ ರಸ್ತೆಗಳಲ್ಲಿನ ಗುಂಡಿಗಳು ಸಾಕಷ್ಟು ಅಪಾಯಕಾರಿಯಾಗಿವೆ. ಹಗಲು ಹೊತ್ತಿನಲ್ಲಿಯೇ ಈ ಗುಂಡಿಗಳಿರುವ ರಸ್ತೆಯ ಸಂಚಾರ ಸಂಚಕಾರ ತರುವಂತದ್ದು. ಇನ್ನು ರಾತ್ರಿ ವೇಳೆ ಸಂಚರಿಸುವುದು ಹೇಗೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಅವಳಿ ನಗರದ ಪ್ರಮುಖ ಹಾಗೂ ಉಪ ರಸ್ತೆಗಳಲ್ಲಿಎಲ್ಲೆಂದರಲ್ಲಿಗುಂಡಿ ಬಿದ್ದಿವೆ. ಮಳೆಯ ನೀರು ಗುಂಡಿಗಳಲ್ಲಿತುಂಬಿಕೊಂಡು ವಾಹನ ಸವಾರರು, ಪಾದಚಾರಿಗಳು ಗುಂಡಿಗಳಲ್ಲಿಬಿದ್ದು ಗಾಯಗೊಳ್ಳುವ ಪ್ರಕರಣಗಳು ಹೆಚ್ಚಾಗಿವೆ. ಇಷ್ಟೆಲ್ಲಾ ಅನಾಹುತಗಳು ಸಂಭವಿಸುತ್ತಿದ್ದರೂ ಪಾಲಿಕೆ ಅಧಿಕಾರಿಗಳಾಗಲಿ ಅಥವಾ ಉಸ್ತುವಾರಿ ಸಚಿವರಾಗಲಿ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಆ ಕಾರಣಕ್ಕೆ ವಿದ್ಯಾವನ ನಿವಾಸಿಗಳೆಲ್ಲರೂ ಒಟ್ಟಾಗಿ ರಸ್ತೆಯಲ್ಲಿನ ಗುಂಡಿಗಳಲ್ಲಿಜಿಲ್ಲಾ ಉಸ್ತುವಾರಿ ಸಚಿವರ ಭಾವಚಿತ್ರ ಇಟ್ಟು ಪ್ರತಿಭಟನೆ ನಡೆಸಿದ್ದೇವೆ ಎಂದು ನಿವಾಸಿಗಳು ವಿಕಕ್ಕೆ ತಿಳಿಸಿದರು.

ಸ್ಮಾರ್ಟ್‌ಸಿಟಿ, ಬಿಆರ್‌ಟಿಎಸ್‌ ಸೇರಿದಂತೆ ಅನೇಕ ಯೋಜನೆಗಳಡಿ ಅವಳಿ ನಗರದ ರಸ್ತೆಗಳು ಸುಧಾರಣೆಯಾಗುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳುತ್ತಲೇ ಇದ್ದಾರೆ. ಆದರೆ, ಅವಳಿ ನಗರದಲ್ಲಿನ ರಸ್ತೆಗಳಲ್ಲಿನ ಗುಂಡಿಗಳಿಗೆ ಈ ವರೆಗೂ ಮುಕ್ತಿ ದೊರೆತಿಲ್ಲ. ಸಂಪೂರ್ಣ ಹದಗೆಟ್ಟಿರುವ ರಸ್ತೆಗಳನ್ನು ಕೂಡಲೇ ಸರಿಪಡಿಸಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿಅವಳಿ ನಗರದ ಜನತೆ ಒಟ್ಟಾಗಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಸಂತೋಷ ಪವಾರ, ರಾಘವ್‌ ಶೆಟ್ಟಿ, ಶ್ರೀನಾಥ ಶಾನಭಾಗ, ವಿನೋದ ಕಾಟವೆ, ವಿನಯ ಜಾಧವ, ಪ್ರೀತಮ್‌ ಶೆಟ್ಟಿ, ಪ್ರಶಾಂತ ಚಿತಾರೆ, ಪ್ರಕಾಶ ಕೌಜಗೇರಿ, ಅರುಣ, ಲಕ್ಷ್ಮೇ ಮಹೇಂದ್ರಕರ ಸೇರಿದಂತೆ ಹಲವರು ಪ್ರತಿಭಟನೆ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ