ಆ್ಯಪ್ನಗರ

ಹಾಳಾದ ರಸ್ತೆಯಲ್ಲಿ ಗುಂಡಿ ಮುಚ್ಚಿ ಪ್ರತಿಭಟನೆ

ಹುಬ್ಬಳ್ಳಿ: ಹಾಳಾದ ರಸ್ತೆಯ ದುರಸ್ತಿ ನಿರ್ಲಕ್ಷ ವಹಿಸಿದ ಪಾಲಿಕೆ ಕ್ರಮ ಖಂಡಿಸಿ ಕರ್ನಾಟಕ ಕ್ಷತ್ರೀಯ ಒಕ್ಕೂಟದ ಕಾರ್ಯಕರ್ತರು ರಸ್ತೆಯ ಗುಂಡಿಗಳನ್ನು ಮುಚ್ಚುವ ಮೂಲಕ ಸೋಮವಾರ ಪ್ರತಿಭಟನೆ ನಡೆಸಿದರು.

Vijaya Karnataka 12 Sep 2019, 5:00 am
ಹುಬ್ಬಳ್ಳಿ: ಹಾಳಾದ ರಸ್ತೆಯ ದುರಸ್ತಿ ನಿರ್ಲಕ್ಷ ವಹಿಸಿದ ಪಾಲಿಕೆ ಕ್ರಮ ಖಂಡಿಸಿ ಕರ್ನಾಟಕ ಕ್ಷತ್ರೀಯ ಒಕ್ಕೂಟದ ಕಾರ್ಯಕರ್ತರು ರಸ್ತೆಯ ಗುಂಡಿಗಳನ್ನು ಮುಚ್ಚುವ ಮೂಲಕ ಸೋಮವಾರ ಪ್ರತಿಭಟನೆ ನಡೆಸಿದರು.
Vijaya Karnataka Web 10VIJAY-7091650

ಹುಬ್ಬಳ್ಳಿ ಮ್ಯಾದಾರ ಓಣಿಯಲ್ಲಿಹಾಳಾದ ರಸ್ತೆಯ ತಗ್ಗು ಗುಂಡಿಗಳನ್ನು ಕರ್ನಾಟಕ ಕ್ಷತ್ರೀಯ ಒಕ್ಕೂಟದ ಕಾರ್ಯಕರ್ತರು ಶ್ರಮದಾನ ಮೂಲಕ ಮಂಗಳವಾರ ಮುಚ್ಚಿದರು.


ಮ್ಯಾದಾರ ಓಣಿಯಲ್ಲಿರುವ ಗುಂಡಿಗಳನ್ನು ಮುಚ್ಚುವಂತೆ ಪಾಲಿಕೆಗೆ ಅನೇಕ ಬಾರಿ ಮನವಿ ಸಲ್ಲಿಸಲಾಗಿತ್ತು. ಆದರೆ ಪಾಲಿಕೆಯಿಂದ ಯಾವುದೇ ಕ್ರಮಕೈಗೊಂಡಿರಲಿಲ್ಲ. ಅದರಿಂದ ಬೇಸತ್ತ ಕ್ಷತ್ರಿಯ ಒಕ್ಕೂಟದ ಕಾರ್ಯಕರ್ತರು ತಾವೇ ಸಲಿಕೆ ಹಿಡಿದು ತಗ್ಗು ಬಿದ್ದ ರಸ್ತೆಗೆ ಮಣ್ಣು ಹಾಕುವ ಮೂಲಕ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.

ಕ್ಷತ್ರಿಯ ಒಕ್ಕೂಟದ ಮುಖಂಡ ಪ್ರಕಾಶ ಬುರಬುರೇ ಹಾಗೂ ಲಕ್ಷ್ಮಣ ಗಂಡಗಾಳೇಕರ ಮಾತನಾಡಿ, ಮಹಾನಗರ ಪಾಲಿಕೆಗೆ ಮ್ಯಾದಾರ ಓಣಿಯ ರಸ್ತೆಯ ದುರಸ್ತಿಗೆ ಕ್ರಮಕೈಗೊಳ್ಳದಿರುವುದು ಖಂಡನೀಯ. ಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿರಸ್ತೆಯ ಗುಂಡಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಲು ನಾವೇ ಸ್ವತಃ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿದ್ದೇವೆ. ಈಗಲಾದರೂ ಪಾಲಿಕೆ ಅಧಿಕಾರಿಗಳು ಎಚ್ಚೆತ್ತು ್ತಕೊಂಡು ರಸ್ತೆ ದುರಸ್ತಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಹನುಮಂತಸಾ ನಿರಂಜನ, ನಾರಾಯಣ ವೈದ್ಯ, ಆನಂದ ಬದ್ಧಿ, ಮಹೇಂದ್ರ ಬಸವಾ, ರಮೇಶ ಮಗಜಿಕೊಂಡಿ, ಅರ್ಜುನ ಜಮಾದಾರ, ಶ್ರೀನಿವಾಸ ದಲಬಂಜನ, ಶಂಕರ ಶಿದ್ಲಿಂಗ, ರಾಜು ಠಾಕೂರ, ಅಶೋಕ ಕಾಪ್ಸೆ, ಡಿ.ಕೆ.ಚವ್ಹಾಣ, ಸಂದೀಪ ಬೋಚಗೆರಿ, ರಾಮಚಂದ್ರ ಯಾಧವ, ದಯಾನಂದ ಚವ್ಹಾಣ, ಬಸವರಾಜ ಶಿಂಧೆ, ನಿಖಿಲ ಖೋಡೆ, ಮಿಥುನ ಡಿ. ಚವ್ಹಾಣ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ