ಆ್ಯಪ್ನಗರ

ಮಳೆ: ಮೂರು ಗಿಡ, ಒಂದು ದೇವಸ್ಥಾನ ಮೇಲ್ಭಾಗ ಕುಸಿತ

ಹುಬ್ಬಳ್ಳಿ : ಹು-ಧಾ ಮಹಾನಗರದಲ್ಲಿ ಶನಿವಾರ ರಾತ್ರಿವರೆಗೂ ನಿರಂತರವಾಗಿ ಸುರಿದ ಮಳೆಯಿಂದ ನಗರದ ಮೂರು ಕಡೆ ಮರಗಳು ಧರೆಗುರಳಿದ್ದರೆ, ರಸ್ತೆಗಳು ಜಲಾವೃತಗೊಂಡು ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ಇದಲ್ಲದೆ ತಾಲೂಕಿನ ನೂಲ್ವಿ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನ ಮೇಲ್ಭಾಗ ಕುಸಿದು ಬಿದ್ದಿದೆ.

Vijaya Karnataka 4 Aug 2019, 5:00 am
ಹುಬ್ಬಳ್ಳಿ : ಹು-ಧಾ ಮಹಾನಗರದಲ್ಲಿ ಶನಿವಾರ ರಾತ್ರಿವರೆಗೂ ನಿರಂತರವಾಗಿ ಸುರಿದ ಮಳೆಯಿಂದ ನಗರದ ಮೂರು ಕಡೆ ಮರಗಳು ಧರೆಗುರಳಿದ್ದರೆ, ರಸ್ತೆಗಳು ಜಲಾವೃತಗೊಂಡು ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ಇದಲ್ಲದೆ ತಾಲೂಕಿನ ನೂಲ್ವಿ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನ ಮೇಲ್ಭಾಗ ಕುಸಿದು ಬಿದ್ದಿದೆ.
Vijaya Karnataka Web rain three plants a temple top collapsed
ಮಳೆ: ಮೂರು ಗಿಡ, ಒಂದು ದೇವಸ್ಥಾನ ಮೇಲ್ಭಾಗ ಕುಸಿತ


ನಿರಂತರ ಮಳೆಗೆ ಇಲ್ಲಿಯ ಪ್ರಶಾಂತನಗರದ ಆರ್‌.ಎನ್‌. ಶೆಟ್ಟಿ ಫ್ಯಾಕ್ಟರಿ ಬಳಿ 1 ಮರ, ವಿಶ್ವೇಶ್ವರನಗರದಲ್ಲಿ 1 ಮರ, ಕಲ್ಮೇಶ್ವರನಗರದಲ್ಲಿ 1 ಮರ ಧರೆಗುರಳಿದ ಬಗ್ಗೆ ವರದಿಯಾಗಿದೆ. ಇದರಿಂದ ಸ್ಥಳೀಯರು ತೀವ್ರ ಕಿರಿಕಿರಿ ಅನುಭವಿಸಿದರು. ಶುಕ್ರವಾರ ರಾತ್ರಿಯಿಂದ ಜಿಟಿಜಿಟಿಯಾಗಿ ನಿರಂತರವಾಗಿ ಸುರಿದ ಮಳೆ, ಶನಿವಾರ ಮಧ್ಯಾಹ್ನದ ಹೊತ್ತಿಗೆ ಧಾರಾಕಾರವಾಗಿ ಸುರಿಯಿತು. ಇದರ ಪರಿಣಾಮದಿಂದ ನಗರದ ಬಹುತೇಕ ರಸ್ತೆಗಳು ಜಲಾವೃತಗೊಂಡಿದ್ದವು.

ನಗರದ ಕಾರ್ತಿಕ್‌ ಬಾರಕೇರ ಎಂಬುವರು ತಮ್ಮ ಟ್ವೀಟರ್‌ ಖಾತೆಯಲ್ಲಿ 'ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ(ಗೋಕುಲ್‌ ರೋಡ್‌) ನಮ್ಮ ಹೆಮ್ಮೆಯ ಕರ್ನಾಟಕದ 2ನೇ ದೊಡ್ಡ ಮಹಾನಗರ ಪಾಲಿಕೆ ಮಾಡಿರುವ ಸ್ಮಾರ್ಟ್‌ಸಿಟಿ ಯೋಜನೆ ಹೇಗಿದೆ ನೋಡಿ ಮಲಪ್ರಭಾ ನದಿ ಹರಿದಂತಿದೆ' ಎಂದು ಬರೆದು ಗೋಕುಲ್‌ ರಸ್ತೆಯಲ್ಲಿ ಹರಿಯುತ್ತಿರುವ ಮಳೆ ನೀರು ಫೋಟೋ ಸಮೇತ ಪೋಸ್ಟ್‌ ಮಾಡಿದ್ದಾರೆ. ಅಲ್ಲದೆ, ಮಾಜಿ ಸಿಎಂ ಜಗದೀಶ ಶೆಟ್ಟರ್‌, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಶಾಸಕ ಅರವಿಂದ ಬೆಲ್ಲದ ಅವರಿಗೆ ಸೇರಿದಂತೆ ಇತರೆ ಖಾತೆಗಳಿಗೆ ಟ್ಯಾಗ್‌ ಮಾಡಿದ್ದಾರೆ. ಇದಕ್ಕೆ ಅನೇಕರು ಕಾಮೆಂಟ್‌ ಮಾಡಿ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ನಗರದಾದ್ಯಂತ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿದ್ದ ಬೈಕ್‌ ಸವಾರರು ಹಾಗೂ ಪಾದಚಾರಿಗಳು ರಸ್ತೆಯ ಅಕ್ಕ-ಪಕ್ಕದ ಅಂಗಡಿಗಳಲ್ಲಿ ಆಶ್ರಯ ಪಡೆದರು. ಇನ್ನು ತಗ್ಗು ಪ್ರದೇಶದಲ್ಲಿರುವ ಮಂಟೂರು ರಸ್ತೆ ಕೆಲ ಪ್ರದೇಶ ಹಾಗೂ ಹಳೇ ಹುಬ್ಬಳ್ಳಿಯ ಕೆಲ ಭಾಗಗಳಲ್ಲಿನ ನಿವಾಸಿಗಳು ಪರದಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ