ಆ್ಯಪ್ನಗರ

ಚರಂಡಿ ನೀರಿನೊಂದಿಗೆ ಮನೆಗೆ ನುಗ್ಗಿದ ಮಳೆ ನೀರು

ಹುಬ್ಬಳ್ಳಿ : ಸುರಿದ ಮಳೆಯ ಪರಿಣಾಮ ಇಲ್ಲಿನ ಅಧ್ಯಾಪಕ ನಗರದ ಸಬ್‌ಜೈಲ್‌ ರಸ್ತೆಯಲ್ಲಿನ ಮನೆಗಳಿಗೆ ಚರಂಡಿ ನೀರು ನುಗ್ಗಿದ್ದು, ಒಳಚರಂಡಿಗಳು ಮುಚ್ಚಿರುವುದೇ ಈ ಸಮಸ್ಯೆಗೆ ಕಾರಣ ಎಂದು ಸ್ಥಳೀಯ ನಿವಾಸಿ ಮೋಹನ ಹರಪನಹಳ್ಳಿ ದೂರಿದ್ದಾರೆ.

Vijaya Karnataka 26 Jun 2019, 5:00 am
ಹುಬ್ಬಳ್ಳಿ : ಸುರಿದ ಮಳೆಯ ಪರಿಣಾಮ ಇಲ್ಲಿನ ಅಧ್ಯಾಪಕ ನಗರದ ಸಬ್‌ಜೈಲ್‌ ರಸ್ತೆಯಲ್ಲಿನ ಮನೆಗಳಿಗೆ ಚರಂಡಿ ನೀರು ನುಗ್ಗಿದ್ದು, ಒಳಚರಂಡಿಗಳು ಮುಚ್ಚಿರುವುದೇ ಈ ಸಮಸ್ಯೆಗೆ ಕಾರಣ ಎಂದು ಸ್ಥಳೀಯ ನಿವಾಸಿ ಮೋಹನ ಹರಪನಹಳ್ಳಿ ದೂರಿದ್ದಾರೆ.
Vijaya Karnataka Web HBL-2506-2-3-25 VIJU 6
ಹುಬ್ಬಳ್ಳಿ ಅಧ್ಯಾಪಕ ನಗರದ ಮನೆವೊಂದರಲ್ಲಿ ಚರಂಡಿ ನೀರಿನ ಜತೆಗೆ ಮಳೆ ನೀರು ನುಗ್ಗಿರುವುದು.


ಹಲವು ತಿಂಗಳಿನಿಂದ ಒಳಚರಂಡಿಯನ್ನು ಸ್ವಚ್ಛಗೊಳಿಸಿಲ್ಲ. ಹೀಗಾಗಿ ಸರಾಗವಾಗಿ ನೀರು ಹೋಗಲು ಜಾಗವಿಲ್ಲ. ಏಕಾಏಕಿ ದೊಡ್ಡ ಪ್ರಮಾಣದಲ್ಲಿ ಮಳೆ ಬಿದ್ದ ಪರಿಣಾಮ ನೀರು ಚರಂಡಿಯಲ್ಲಿ ಹೋಗದೇ ಅದರೊಳಗಿನ ಮಲ, ಮೂತ್ರದ ಗಲಿಜಿನೊಂದಿಗೆ ಮನೆಗಳಿಗೆ ನುಗ್ಗಿದೆ. ಸುಮಾರು ಮೂರು ಅಡಿಗಳಷ್ಟು ನೀರು ಮನೆಯ ನೆಲ ಮಹಡಿಯಲ್ಲಿ ನಿಂತಿದೆ ಎಂದು ಅವರು ಹೇಳಿದ್ದಾರೆ.

ಒಳಚರಂಡಿ ವ್ಯವಸ್ಥೆ ಸರಿಪಡಿಸಲು ಪಾಲಿಕೆಗೆ ದೂರು ನೀಡಿ ಮೂರು ದಿನಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮತ್ತೆ ಮಳೆಯಾದರೆ ಇಲ್ಲಿನ ನಿವಾಸಿಗಳ ಸ್ಥಿತಿ ಚಿಂತಾಜನಕವಾಗಲಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಮುಚ್ಚಿರುವ ಒಳಚರಂಡಿಯನ್ನು ಸರಿಪಡಿಸಬೇಕು ಎಂದು ಹರಪನಹಳ್ಳಿ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ