ಆ್ಯಪ್ನಗರ

ರಮೇಶ ಟಿಕೆಟ್‌ ಕೇಳಿದ್ರೆ ವರಿಷ್ಠರು ಕೊಡ್ತಾರೆ: ಸಚಿವ ಜಾರಕಿಹೊಳಿ

ಧಾರವಾಡ : ಮಾಜಿ ಸಚಿವ ರಮೇಶ ಜಾರಕಿಹೊಳಿ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್‌ನ್ನು ಕೇಳಿದರೆ ವರಿಷ್ಠರು ಕೊಟ್ಟೇ ಕೊಡುತ್ತಾರೆ. ಅದನ್ನು ವರಿಷ್ಠರಾದವರು ತಿರ್ಮಾನಿಸಿ ಕ್ರಮ ಕೈಗೊಳ್ಳುತ್ತಾರೆ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.

Vijaya Karnataka 18 Feb 2019, 5:43 pm
ಧಾರವಾಡ : ಮಾಜಿ ಸಚಿವ ರಮೇಶ ಜಾರಕಿಹೊಳಿ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್‌ನ್ನು ಕೇಳಿದರೆ ವರಿಷ್ಠರು ಕೊಟ್ಟೇ ಕೊಡುತ್ತಾರೆ. ಅದನ್ನು ವರಿಷ್ಠರಾದವರು ತಿರ್ಮಾನಿಸಿ ಕ್ರಮ ಕೈಗೊಳ್ಳುತ್ತಾರೆ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.
Vijaya Karnataka Web ramesh asked for tickets high cammond accept jarkiholi
ರಮೇಶ ಟಿಕೆಟ್‌ ಕೇಳಿದ್ರೆ ವರಿಷ್ಠರು ಕೊಡ್ತಾರೆ: ಸಚಿವ ಜಾರಕಿಹೊಳಿ


ತಾಲೂಕಿನ ಗುಂಗರಗಟ್ಟಿಯ ಕರ್ನಾಟಕ ರಾಜ್ಯ ಅರಣ್ಯ ಅಕಾಡೆಮಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, '' ರಮೇಶ ಜಾರಕಿಹೊಳಿ ನನ್ನ ಜತೆಗೆ ಮಾತುಕತೆ ಮಾಡಿಲ್ಲ. ಅವರು ಸಿದ್ದರಾಮಯ್ಯ ಹಾಗೂ ನಮ್ಮ ವರಿಷ್ಠರ ಜತೆಗೆ ಮಾತುಕತೆ ನಡೆÜಸಿದ್ದಾರೆ. ರಮೇಶ ಅವರಿಂದ ನಾನು ಸಚಿವ ಸ್ಥಾನ ಕಸಿದುಕೊಂಡಿಲ್ಲ. ನನಗೆ ಸಚಿವ ಸ್ಥಾನವನ್ನು ನಮ್ಮ ಪಕ್ಷ ಹಾಗೂ ಸರಕಾರ ನೀಡಿದೆ'' ಎಂದು ಸ್ಪಷ್ಟಪಡಿಸಿದರು.

''ಕಾಂಗ್ರೆಸ್‌ ಪಕ್ಷ ದಲ್ಲಿ ಯಾವುದೇ ರೀತಿ ಅಸಮಾಧಾನವಿಲ್ಲ. ಇದನ್ನು ಮೊದಲಿನಿಂದಲೂ ಹೇಳಿಕೊಂಡು ಬರುತ್ತಿದ್ದೇನೆ. ಈಗಲೂ ಅದನ್ನೇ ಹೇಳುತ್ತೇನೆ'' ಎಂದು ತಿಳಿಸಿದರು.

ಕಠಿಣ ಕ್ರಮ:

''ದೇಶದ್ರೋಹ ಕೆಲಸವನ್ನು ಯಾರೇ ಮಾಡಿದರೂ ಅವರ ವಿರುದ್ಧ ಸರಕಾರ ಕಠಿಣ ಕ್ರಮಕೈಗೊಳ್ಳಲಿದೆ. ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯನ್ನು ದೇಶವೇ ಉಗ್ರವಾಗಿ ಖಂಡಿಸುತ್ತಿದ್ದು, ದೇಶದ ಎಲ್ಲ ಜನರು ಸೈನಿಕರ ಪರವಾಗಿದ್ದೇವೆ. ಮೋದಿ ಅವರು ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳಬೇಕು. ದೇಶದಲ್ಲಿ ಇಂಥ ಘಟನೆಗಳು ಮುಂದೆ ಆಗದಂತೆ ಎಚ್ಚರಿಕೆ ವಹಿಸಬೇಕು. ರಾಜ್ಯದಲ್ಲಿ ಈಗಾಗಲೇ ದೇಶ ವಿರೋಧಿ ಹೇಳಿಕೆಗಳನ್ನು ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ'' ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ