ಆ್ಯಪ್ನಗರ

ಅಲ್ಲಾ ಭಕ್ಷಗೆ ರಂಗ ಸಾಮ್ರಾಟ-2019 ಪ್ರಶಸ್ತಿ

ಧಾರವಾಡ: ನಗರದ ರಂಗಸಾಮ್ರಾಟ ಅಭಿನಯ ಶಾಲೆ ನೀಡುವ ಪ್ರತಿಷ್ಠಿತ ರಂಗಸಾಮ್ರಾಟ-2019 ಪ್ರಶಸ್ತಿಯನ್ನು ರಂಗ ಕಲಾವಿದ ಅಲ್ಲಾಭಕ್ಷ ಬಿ. ಮಕಾನದಾರ ಅವರಿಗೆ ಪ್ರಶಸ್ತಿ ಪತ್ರ ಹಾಗೂ ಫಲಕವನ್ನು ನೀಡಿ ಗೌರವಿಸಲಾಯಿತು.

Vijaya Karnataka 19 Nov 2019, 5:00 am
ಧಾರವಾಡ: ನಗರದ ರಂಗಸಾಮ್ರಾಟ ಅಭಿನಯ ಶಾಲೆ ನೀಡುವ ಪ್ರತಿಷ್ಠಿತ ರಂಗಸಾಮ್ರಾಟ-2019 ಪ್ರಶಸ್ತಿಯನ್ನು ರಂಗ ಕಲಾವಿದ ಅಲ್ಲಾಭಕ್ಷ ಬಿ. ಮಕಾನದಾರ ಅವರಿಗೆ ಪ್ರಶಸ್ತಿ ಪತ್ರ ಹಾಗೂ ಫಲಕವನ್ನು ನೀಡಿ ಗೌರವಿಸಲಾಯಿತು.
Vijaya Karnataka Web ranga samrata 2019 award for allah bhaksh
ಅಲ್ಲಾ ಭಕ್ಷಗೆ ರಂಗ ಸಾಮ್ರಾಟ-2019 ಪ್ರಶಸ್ತಿ


ನಗರದ ರಂಗ ಸಾಮ್ರಾಟ್‌ ಅಭಿನಯ ಶಾಲೆಯಲ್ಲಿನಡೆದ ಮಕ್ಕಳ ಸಂಭ್ರಮ ಕಾರ್ಯಕ್ರಮದಲ್ಲಿಮಕ್ಕಳ ಸಾಹಿತಿ ಶಂಕರ ಹಲಗತ್ತಿ, ರಂಗಸಾಮ್ರಾಟ್‌ ಅಭಿನಯ ಶಾಲೆಯ ನಿರ್ದೇಶಕ ಸಿಕಂದರ ದಂಡಿನ, ಗುಬ್ಬಚ್ಚಿಗೂಡು ಶಾಲೆಯ ಆಡಳಿತಾಧಿಕಾರಿ ವಿಜಯಲಕ್ಷಿತ್ರ್ಮ ಶುಭಾಂಜಿ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಶಸ್ತಿ ಸ್ವೀಕರಿಸಿದ ಅಲ್ಲಾಭಕ್ಷ ಮಕಾನದಾರ ಮಾತನಾಡಿ, ಪ್ರಶಸ್ತಿ ನೀಡುವುದು ಕಲಾವಿದನಿಗೆ ತಾನು ಮಾಡಿದ ಕೆಲಸಕ್ಕೆ ಗರಿಯನ್ನು ಹಚ್ಚಿದಂತೆ. ಈ ಪ್ರಶಸ್ತಿ ಹೆಚ್ಚಿನ ಕೆಲಸ ಮಾಡುವ ಜವಾಬ್ದಾರಿಯನ್ನು ನೀಡಿದೆ. ಕಲಾವಿದರನ್ನು ಗುರುತಿಸುವ ಕೆಲಸವನ್ನು ಸಂಘ ಸಂಸ್ಥೆಗಳು ಮಾಡಬೇಕು ಎಂದರು.

ಶಂಕರ ಹಲಗತ್ತಿ ಮಾತನಾಡಿ, ಮಕ್ಕಳನ್ನು ಸಮಾಜಮುಖಿಯನ್ನಾಗಿಸಿ ಬೆಳೆಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಭೌತಿಕ ಬೆಳವಣಿಗೆಕಡೆ ಒತ್ತು ನೀಡಬೇಕು. ಅದರಿಂದ ಮಕ್ಕಳ ಮನಸು ವಿಕಸನ ಆಗಲಿದೆ. ಅಂಥ ಕ್ಷೇತ್ರದಲ್ಲಿಗಣನೀಯ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸುವ ಜವಾಬ್ದಾರಿ ರಂಗ ಸಾಮ್ರಾಟ್‌ ಅಭಿನಯ ಶಾಲೆ ಮಾಡುತ್ತಿರುವುದು ಗಮನಾರ್ಹ ಸಂಗತಿ ಎಂದರು.

ಕಾರ್ಯಕ್ರಮದಲ್ಲಿಗುಬ್ಬಚ್ಚಿಗೂಡು ಶಾಲೆಯ ಮುಖ್ಯೋಪಾದ್ಯಾಯಿನಿ ಲಕ್ಷಿತ್ರ್ಮ ಶಿಂಧೆ, ಶೃತಿ ಹುರುಳಿಕೊಪ್ಪ, ಡ್ರಾಮಾ ಜ್ಯೂನಿಯರ್ಸನ ರನ್ನರ ಅಪ್‌ ಆದ ಸುಮಿತ ಸಂಕೋಜಿ, ಪ್ರಜ್ವಲ ಹೂಗಾರ, ಸೃಷ್ಟಿ ಸಲಕಿ, ಮಜಾಭಾರತ ಖ್ಯಾತಿಯ ಬಸವರಾಜ ಗುಡ್ಡಪ್ಪನವರ ಇದ್ದರು.

ಮಂಜುಶ್ರೀ ಮಡೆಸೂರ ಸ್ವಾಗತಿಸಿದರು. ಶಶಿರೇಖಾ ಚಕ್ರಸಾಲಿ ನಿರೂಪಿಸಿದರು. ಚಂದ್ರಶೇಖರ ಕುಂಬಾರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ