ಆ್ಯಪ್ನಗರ

ಅರಿವೇ ಪ್ರಮಾಣು ಅಪರೂಪದ ಗ್ರಂಥ

ಧಾರವಾಡ: ಸಮಕಾಲೀನ ಸಕಲ ಶರಣರ ಬದುಕನ್ನು ಒಳಗೊಂಡ ಮಹಾಂತಪ್ಪ ನಂದೂರ ಅರಿವೇ ಪ್ರಮಾಣು ಕಾವ್ಯಕೃತಿಯು ಒಂದು ರೂಪಕ ಕಥನವಾಗಿ ಹೊರಹೊಮ್ಮಿದೆ ಎಂದು ಡಾ.ವೈ.ಎಂ. ಯಾಕೊಳ್ಳಿ ಹೇಳಿದರು.

Vijaya Karnataka 29 Sep 2019, 5:00 am
ಧಾರವಾಡ: ಸಮಕಾಲೀನ ಸಕಲ ಶರಣರ ಬದುಕನ್ನು ಒಳಗೊಂಡ ಮಹಾಂತಪ್ಪ ನಂದೂರ ಅರಿವೇ ಪ್ರಮಾಣು ಕಾವ್ಯಕೃತಿಯು ಒಂದು ರೂಪಕ ಕಥನವಾಗಿ ಹೊರಹೊಮ್ಮಿದೆ ಎಂದು ಡಾ.ವೈ.ಎಂ. ಯಾಕೊಳ್ಳಿ ಹೇಳಿದರು.
Vijaya Karnataka Web rare scripture
ಅರಿವೇ ಪ್ರಮಾಣು ಅಪರೂಪದ ಗ್ರಂಥ


ನಗರದ ಸಾಧನಕೇರಿಯ ಚೈತ್ರದ ಸಭಾಗೃಹದಲ್ಲಿಸಾಹಿತ್ಯಿಕ ಸಂಘಟನೆ ಅನ್ವೇಷಣಕೂಟದ ಆಶ್ರಯದಲ್ಲಿಹಮ್ಮಿಕೊಂಡಿದ್ದ ಪುಸ್ತಕಾವಲೋಕನ ಕಾರ್ಯಕ್ರಮದಲ್ಲಿಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.

ಬೇರೆ ಬೇರೆ ಸಂದರ್ಭಗಳಲ್ಲಿಬಳಸಿದ ಭಾಷಾವೈವಿಧ್ಯತೆಯ ಸ್ವರೂಪ ಸೌಂದರ‍್ಯ ಪಡೆದಪದ್ಯಗಂಧೀ ಗದ್ಯರೂಪದ ನಂದೂರರ ಈ ಕೃತಿ ಮರೆತು ಹೋಗುವ ಒಂದು ಯುಗವನ್ನು ಈಗ ಮತ್ತೆ ನೆನಪಿಸುವಂಥ ಒಂದು ಅಪರೂಪದ ಗ್ರಂಥವಾಗಿದೆ ಎಂದರು.

ಅಧ್ಯP್ಷÜತೆ ವಹಿಸಿದ್ದ ಡಾ.ಶಾಂತಾ ಇಮ್ರಾಪುರ ಮಾತನಾಡಿ, ಒಬ್ಬ ಕವಿಯಿಂದ ಒಂದು ಸಾರ್ಥಕ ಕೃತಿ ಬರಬೇಕೆಂದರೆ ಆ ಕವಿಗೆ ದಾರ್ಶನಿಕ ಮನಸ್ಸಿರಬೇಕು ಎಂದರು.

ಇದೇ ವೇಳೆ ಲೇಖಕ ಮಹಾಂತಪ್ಪ ನಂದೂರ ಪ್ರಸ್ತುತ ಗ್ರಂಥದ ರಚನೆಯ ಹಿಂದಿನ ಪ್ರೇರಣೆ ಮತ್ತು ಹುಡುಕಾಟ ಸ್ಮರಿಸಿಕೊಂಡರು. ನರಸಿಂಹ ಪರಾಂಜಪೆ, ವೆಂಕಟೇಶದೇಸಾಯಿ, ಚೆನ್ನಪ್ಪ ಅಂಗಡಿ, ಪ್ರೊ. ಎ.ಜಿ.ಸಬರದ, ಪ್ರೊ. ಸಿ.ಆರ್‌.ಜೋಶಿ, ಪ್ರೊ. ಬಿ.ಎಸ್‌.ಶಿರೋಳ, ರಾಮಚಂದ್ರ ಧೋಂಗಡೆ, ಬಸೂ ಬೇವಿನಗಿಡದ, ರಮೇಶ ಇಟ್ನಾಳ, ಎಚ್‌.ಎಂ. ಪಾಟೀಲ, ಎಸ್‌.ಜಿ. ಭಾಗವತ, ಎಸ್‌. ಗುರುನಾಥ, ಎಸ್‌.ಎಚ್‌. ಕೆರೂರ, ಕೆ.ಎನ್‌. ಹಬ್ಬು, ಎಂ.ಎಲ್‌.ವಿಜಾಪುರ, ಬಿ.ಜಿ. ಹೊಂಬಳ, ಎಸ್‌.ಬಿ.ದ್ವಾರಪಾಲಕ, ಎಸ್‌.ಎಂ.ದೇಶಪಾಂಡೆ ರಾಜೀವ ಪಾಟೀಲಕುಲಕರ್ಣಿ, ಕೆ.ವಿ.ಹಾವನೂರ, ಎಸ್‌.ಎಸ್‌.ಬಂಗಾರಿಮಠ, ಡಾ.ಮಂದಾಕಿನಿ ಪುರೋಹಿತ, ವಿನುತಾ ಹಂಚಿನಮನಿ, ಸರಸ್ವತಿ ಭೋಸಲೆ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ