ಆ್ಯಪ್ನಗರ

ಬಸ್‌ ನಿಲ್ದಾಣದ ಮಳಿಗೆ ಬಾಡಿಗೆ ಕಡಿಮೆ ಮಾಡಿ

ಹುಬ್ಬಳ್ಳಿ: ಲಾಕ್‌ಡೌನ್‌ದಿಂದ ಹುಬ್ಬಳ್ಳಿ ಹಳೇ ಬಸ್‌ ನಿಲ್ದಾಣದಲ್ಲಿನ 31 ಮಳಿಗೆಗಳ ವ್ಯಾಪಾರಸ್ಥರು ವ್ಯಾಪಾರವಿಲ್ಲದೇ ತೀವ್ರ ಸಂಕಷ್ಟಕ್ಕೀಡಾಗಿದ್ದು, ಬಸ್‌ ನಿಲ್ದಾಣ ಸ್ಥಳಾಂತರದಿಂದ ವ್ಯಾಪಾರ- ವಹಿವಾಟು ಇಲ್ಲದೇ ಪರದಾಡುತ್ತಿದ್ದಾರೆ. ಅಲ್ಲಿನ ಮಳಿಗೆದಾರರ ಬಾಡಿಗೆ ಕಡಿಮೆ ಮಾಡಬೇಕೆಂದು ಶಾಸಕ ಪ್ರಸಾದ ಅಬ್ಬಯ್ಯ ಸರಕಾರಕ್ಕೆ ಒತ್ತಾಯಿಸಿದ್ದಾರೆ.

Vijaya Karnataka 24 May 2020, 5:00 am
ಹುಬ್ಬಳ್ಳಿ: ಲಾಕ್‌ಡೌನ್‌ದಿಂದ ಹುಬ್ಬಳ್ಳಿ ಹಳೇ ಬಸ್‌ ನಿಲ್ದಾಣದಲ್ಲಿನ 31 ಮಳಿಗೆಗಳ ವ್ಯಾಪಾರಸ್ಥರು ವ್ಯಾಪಾರವಿಲ್ಲದೇ ತೀವ್ರ ಸಂಕಷ್ಟಕ್ಕೀಡಾಗಿದ್ದು, ಬಸ್‌ ನಿಲ್ದಾಣ ಸ್ಥಳಾಂತರದಿಂದ ವ್ಯಾಪಾರ- ವಹಿವಾಟು ಇಲ್ಲದೇ ಪರದಾಡುತ್ತಿದ್ದಾರೆ. ಅಲ್ಲಿನ ಮಳಿಗೆದಾರರ ಬಾಡಿಗೆ ಕಡಿಮೆ ಮಾಡಬೇಕೆಂದು ಶಾಸಕ ಪ್ರಸಾದ ಅಬ್ಬಯ್ಯ ಸರಕಾರಕ್ಕೆ ಒತ್ತಾಯಿಸಿದ್ದಾರೆ.
Vijaya Karnataka Web reduce bus station shop rentals
ಬಸ್‌ ನಿಲ್ದಾಣದ ಮಳಿಗೆ ಬಾಡಿಗೆ ಕಡಿಮೆ ಮಾಡಿ


ಬಸ್‌ ನಿಲ್ದಾಣದಲ್ಲಿಮಳಿಗೆ ಪಡೆದವರು ಮಧ್ಯಮ ಹಾಗೂ ಕೆಳವರ್ಗದವರಿದ್ದು, ಮಳಿಗೆ ಆರಂಭಿಸಲು ಬ್ಯಾಂಕ್‌ ಹಾಗೂ ಇತರೆ ಮೂಲಗಳಿಂದ ಸಾಲ ಪಡೆದವರಿದ್ದಾರೆ. ಇಲ್ಲಿನ ಮಳಿಗೆಗಳ ಮಾಸಿಕ ಬಾಡಿಗೆ 60 ಸಾವಿರದಿಂದ 1.5 ಲಕ್ಷ ರೂ. ಇದ್ದು, ಪ್ರತಿದಿನ ಸುಮಾರು 2ರಿಂದ 6 ಸಾವಿರ ರೂ.ವರೆಗೆ ಬಾಡಿಗೆ ನೀಡಬೇಕಾಗಿದೆ.

ಇತ್ತೀಚೆಗೆ ಲಾಕ್‌ಡೌನ್‌ ಸಡಿಲಿಕೆಯಿಂದ ಬಸ್‌ ಸಂಚಾರ ಆರಂಭವಾಗಿದ್ದರೂ ಜನ ಸಂಚಾರ ಇಲ್ಲದೇ ವ್ಯಾಪಾರ- ವಹಿವಾಟು ಇಲ್ಲದಂತಾಗಿದೆ. ಇದರಿಂದ ಮಳಿಗೆದಾರರು ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದು, ಬಸ್‌ ನಿಲ್ದಾಣ ಸ್ಥಳಾಂತರದಿಂದ ವ್ಯಾಪಾರವಿಲ್ಲದೇ ಮಳಿಗೆಗಳ ಬಾಡಿಗೆ ನೀಡಲೂ ವ್ಯಾಪಾರಸ್ಥರು ಪರದಾಡುವಂತಾಗಿದೆ. ಲಾಕ್‌ಡೌನ್‌ ಘೋಷಣೆಯಾದಾಗಿನಿಂದ ಮಳಿಗೆ ತೆರೆಯದ ಕಾರಣ ತಿಂಡಿ-ತಿನಿಸುಗಳು ಸಂಪೂರ್ಣ ಹಾಳಾಗಿ ನಷ್ಟ ಅನುಭವಿಸುವಂತಾಗಿದೆ.

ಬಸ್‌ ನಿಲ್ದಾಣ ಸ್ಥಳಾಂತರ ಹಿನ್ನೆಲೆಯಲ್ಲಿವ್ಯಾಪಾರ ಕಡಿಮೆಯಾಗಿದ್ದರಿಂದ 2007ರಲ್ಲಿಗದಗ ಹೊಸ ಬಸ್‌ ನಿಲ್ದಾಣದಲ್ಲಿನ ಮಳಿಗೆ ಬಾಡಿಗೆ ಕಡಿಮೆ ಮಾಡಲಾಗಿದೆ. ವಿಜಯಪುರದ ಹೊಸ ಬಸ್‌ ನಿಲ್ದಾಣದಲ್ಲಿನ ಮಳಿಗೆಗಳ ಬಾಡಿಗೆ ಕಡಿಮೆ ಮಾಡುವ ಕುರಿತು ಅಲ್ಲಿನ ಶಾಸಕರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಎಲ್ಲಕಾರಣಗಳಿಂದ ಹುಬ್ಬಳ್ಳಿಯ ಹಳೇ ಬಸ್‌ ನಿಲ್ದಾಣದಲ್ಲಿನ ಮಳಿಗೆಗಳ ಬಾಡಿಗೆಯನ್ನು ಕಡಿಮೆ ಮಾಡಿ ಸಂಕಷ್ಟದಲ್ಲಿರುವ ಹಳೆ ಬಸ್‌ ನಿಲ್ದಾಣದ 31 ಮಳಿಗೆದಾರರ ನೆರವಿಗೆ ಸರಕಾರ ಧಾವಿಸಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ