ಆ್ಯಪ್ನಗರ

ಡಿಪ್ಲೋಮಾ ಪರೀಕ್ಷೆ ಮುಂದೂಡಲು ಆಗ್ರಹ

ಧಾರವಾಡ: ತಾಂತ್ರಿಕ ಶಿಕ್ಷಣ ಇಲಾಖೆಯು ಜು.15ರಿಂದ ಆಗಸ್ಟ್‌ 5ರವರೆಗೆ ನಡೆಸಲು ಉದ್ದೇಶಿಸಿರುವ ಡಿಪ್ಲೋಮಾ ವಿದ್ಯಾರ್ಥಿಗಳ ಪರೀಕ್ಷೆಗಳನ್ನು ಕೋವಿಡ್‌-19 ತೀವ್ರತೆಯ ಹಿನ್ನೆಲೆಯಲ್ಲಿಮುಂದೂಡುವಂತೆ ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಯೂತ್‌ ಆರ್ಗನೈಸೇಷನ್‌ (ಎಐಡಿವೈಓ) ಧಾರವಾಡ ಜಿಲ್ಲಾಸಮಿತಿಯು ಆಗ್ರಹಿಸಿದೆ.

Vijaya Karnataka 7 Jul 2020, 5:00 am
ಧಾರವಾಡ: ತಾಂತ್ರಿಕ ಶಿಕ್ಷಣ ಇಲಾಖೆಯು ಜು.15ರಿಂದ ಆಗಸ್ಟ್‌ 5ರವರೆಗೆ ನಡೆಸಲು ಉದ್ದೇಶಿಸಿರುವ ಡಿಪ್ಲೋಮಾ ವಿದ್ಯಾರ್ಥಿಗಳ ಪರೀಕ್ಷೆಗಳನ್ನು ಕೋವಿಡ್‌-19 ತೀವ್ರತೆಯ ಹಿನ್ನೆಲೆಯಲ್ಲಿಮುಂದೂಡುವಂತೆ ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಯೂತ್‌ ಆರ್ಗನೈಸೇಷನ್‌ (ಎಐಡಿವೈಓ) ಧಾರವಾಡ ಜಿಲ್ಲಾಸಮಿತಿಯು ಆಗ್ರಹಿಸಿದೆ.
Vijaya Karnataka Web request for diploma exams postponed
ಡಿಪ್ಲೋಮಾ ಪರೀಕ್ಷೆ ಮುಂದೂಡಲು ಆಗ್ರಹ

ರಾಜ್ಯದಲ್ಲಿಕೋವಿಡ್‌-19 ಹರಡುವ ಪ್ರಮಾಣ ತೀವ್ರವಾಗಿದ್ದು, ಜನರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಡಿಪ್ಲೋಮಾ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿಅಂದಾಜು 1 ಲಕ್ಷ 50 ಸಾವಿರ ಡಿಪ್ಲೋಮಾ ವಿದ್ಯಾರ್ಥಿಗಳಿದ್ದಾರೆ. ಅವರು ಹಾಸ್ಟೆಲ್‌, ಪಿಜಿಗಳಲ್ಲಿವಾಸ ಮಾಡುತ್ತಾರೆ. ಇನ್ನು ಹಲವರು ಸರಕಾರಿ ಸಾರಿಗೆಯನ್ನು ಅವಲಂಬಿಸಿದ್ದಾರೆ. ಪೂರ್ಣ ಪ್ರಮಾಣದ ಸಾರಿಗೆ ವ್ಯವಸ್ಥೆಯು ಆರಂಭವಾಗಿಲ್ಲದಿರುವ ಇಂತಹ ಸಂದರ್ಭದಲ್ಲಿಪರೀಕ್ಷೆ ನಡೆಸುವುದು ಸರಿಯಲ್ಲ.

ಕೋವಿಡ್‌ ಹರಡುವ ಬಗೆಗಿನ ಎಲ್ಲಾಗೊಂದಲಗಳು ವಿದ್ಯಾರ್ಥಿ ಮತ್ತು ಪಾಲಕರನ್ನು ಆತಂಕಕ್ಕೆ ತಳ್ಳಿವೆ. ವಿದ್ಯಾರ್ಥಿಗಳು, ಪಾಲಕ ಮತ್ತು ಅಧ್ಯಾಪಕರ ಅಭಿಪ್ರಾಯಗಳನ್ನು ಪರಿಗಣಿಸಿ, ಡಿಪ್ಲೋಮಾ ಪರೀಕ್ಷೆಗಳನ್ನು ಮುಂದೂಡಬೇಕೆಂದು ರಾಜ್ಯ ಸರಕಾರವನ್ನು ಎಐಡಿವೈಒ ಧಾರವಾಡ ಜಿಲ್ಲಾಸಮಿತಿ ಒತ್ತಾಯಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ