ಆ್ಯಪ್ನಗರ

ಸ್ಲಂ ನಿವಾಸಿಗಳಿಂದ ಪ್ರತಿಭಟನೆ ಇಂದು

ಧಾರವಾಡ : ನಾನಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಡಿ.19ರಂದು ಬೆಳಗ್ಗೆ 10.30ಕ್ಕೆ ಸುವರ್ಣ ಸೌಧದ ಮುಂದೆ ಸ್ಲಂ ನಿವಾಸಿಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

Vijaya Karnataka 19 Dec 2018, 5:00 am
ಧಾರವಾಡ : ನಾನಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಡಿ.19ರಂದು ಬೆಳಗ್ಗೆ 10.30ಕ್ಕೆ ಸುವರ್ಣ ಸೌಧದ ಮುಂದೆ ಸ್ಲಂ ನಿವಾಸಿಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
Vijaya Karnataka Web resistance from slum residents today
ಸ್ಲಂ ನಿವಾಸಿಗಳಿಂದ ಪ್ರತಿಭಟನೆ ಇಂದು


ರಾಜ್ಯದಲ್ಲಿ ಸುಮಾರು 5800 ಕೊಳಚೆ ಪ್ರದೇಶಗಳಿದ್ದು, ಸರಕಾರದಿಂದ 2802 ಕೊಳಚೆ ಪ್ರದೇಶಗಳನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. 2011ರ ಜನಗಣತಿಯಂತೆ ನಗರ ಜನಸಂಖ್ಯೆಯಲ್ಲಿ ಶೇ.23ರಷ್ಟು ಜನರು ಕೊಳಗೇರಿಯಲ್ಲಿ ವಾಸವಾಗಿದ್ದು, 70ಲಕ್ಷ ದಷ್ಟು ಜನರು ಇಂದು ರಾಜ್ಯದಲ್ಲಿರುವ ಕೊಳಚೆ ಪ್ರದೇಶದಲ್ಲಿ ಅನೈರ್ಮಲ್ಯಯುತ ವಾತಾವರಣದಲ್ಲಿ ವಾಸ ಮಾಡುತ್ತಿದ್ದಾರೆ. ಕೊಳಗೇರಿ ಅಭಿವೃದ್ಧಿಗೆ ಪ್ರತ್ಯೇಕ ಬಜೆಟ್‌ ನೀಡಬೇಕು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಕಾಯಿದೆ 2018 ಜಾರಿ ಮಾಡಬೇಕು, ರಾಜ್ಯದಲ್ಲಿ ಸಮಗ್ರ ವಸತಿ ಹಕ್ಕು ಕಾಯಿದೆ ಜಾರಿಗೆ ಮುಂದಾಗಬೇಕು ಸೇರಿದಂತೆ ಮುಂತಾದ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಗುವದು ಎಂದು ಸಂಘಟನೆಯ ರಸೂಲ ಎಂ. ನದಾಫ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ