ಆ್ಯಪ್ನಗರ

ಸೈನಿಕರ ತ್ಯಾಗ, ಕಾರ‍್ಯಶೈಲಿ ಗೌರವಿಸಿ

ಹುಬ್ಬಳ್ಳಿ: ಟಿಪ್ಪು ಷಹೀದ ಪಾಲಿಟೆಕ್ನಿಕ್‌ನಲ್ಲಿಇತ್ತೀಚೆಗೆ ಹುತಾತ್ಮರ ದಿನ ಆಚರಿಸಲಾಯಿತು. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿಹುತಾತ್ಮರಾದ ಮಹಾನ್‌ ವ್ಯಕ್ತಿಗಳ ಬಲಿದಾನದ ಜ್ಞಾಪಕಾರ್ಥವಾಗಿ ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು.

Vijaya Karnataka 5 Feb 2020, 5:00 am
ಹುಬ್ಬಳ್ಳಿ: ಟಿಪ್ಪು ಷಹೀದ ಪಾಲಿಟೆಕ್ನಿಕ್‌ನಲ್ಲಿಇತ್ತೀಚೆಗೆ ಹುತಾತ್ಮರ ದಿನ ಆಚರಿಸಲಾಯಿತು. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿಹುತಾತ್ಮರಾದ ಮಹಾನ್‌ ವ್ಯಕ್ತಿಗಳ ಬಲಿದಾನದ ಜ್ಞಾಪಕಾರ್ಥವಾಗಿ ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು.
Vijaya Karnataka Web respect the sacrifices and duties of the soldiers
ಸೈನಿಕರ ತ್ಯಾಗ, ಕಾರ‍್ಯಶೈಲಿ ಗೌರವಿಸಿ


ಪ್ರಾಚಾರ್ಯ ಎಂ.ಎಸ್‌. ಮುಲ್ಲಾಮಾತನಾಡಿ, ಭಾರತ ದೇಶದ ಜನರಲ್ಲಿಐಕ್ಯತೆಯನ್ನುಂಟು ಮಾಡಿದ ಮಹಾನ್‌ ಶಕ್ತಿಯೂ ಆಗಿದ್ದ, ಮಹಾತ್ಮಾ ಗಾಂಧೀಜಿಯವರ ಪುಣ್ಯತಿಥಿಯಾದ ಜ.30ನ್ನು ಹುತಾತ್ಮರ ದಿನವೆಂದು ಆಚರಿಸಲಾಗುತ್ತದೆ. ದೇಶಕ್ಕಾಗಿ ಜೀವ ತೆತ್ತ ಹುತಾತ್ಮರನ್ನು ಸ್ಮರಣೆ ಮಾಡಿ ಅವರ ತ್ಯಾಗ ಸೇವೆ ಮತ್ತು ದೇಶ ಪ್ರೇಮವನ್ನು ತಿಳಿಸಿ, ಇತರರಲ್ಲಿದೇಶ ಪ್ರೇಮ ಮತ್ತು ರಾಷ್ಟ್ರ ಭಕ್ತಿಯನ್ನು ಮೂಡಿಸುವ ಸದುದ್ದೇಶ ಈ ಆಚರಣೆಯ ಮೂಲ ಉದ್ದೇಶ ಎಂದು ತಿಳಿಸಿದರು.

ನಮ್ಮ ರಾಷ್ಟ್ರದ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ಹೋರಾಟ ಮಾಡುವ ಮೂಲಕ ದೇಶದ ಜತೆಗೆ ನಮ್ಮೆಲ್ಲರನ್ನು ಕಾಯುವ ಸೈನಿಕರ ಸೇವೆ ಅನನ್ಯ. ಸೈನಿಕರ ತ್ಯಾಗ ಶಿಸ್ತು, ಕಾರ್ಯ ಶೈಲಿಯನ್ನು ಎಲ್ಲರೂ ಗೌರವಿಸಬೇಕು. ವಿದ್ಯಾರ್ಥಿಗಳು ಮೊದಲು ದೇಶ ಸೇವೆಗೆ ಆದ್ಯತೆ ನೀಡಬೇಕೆಂದು ಹೇಳಿದರು.

ಭಗತ್‌ ಸಿಂಗ್‌, ರಾಜಗುರು, ಸುಖದೇವ, ಅಷ್ಪಾಕ ಉಲ್ಲಾಖಾನ್‌, ಸುಭಾಸಚಂದ್ರ ಬೋಸ, ಮಹಾತ್ಮಾ ಗಾಂಧಿ ಹಾಗೂ ಮುಂತಾದ ಮಹಾನ್‌ ವ್ಯಕ್ತಿಗಳು ಸ್ವಾತಂತ್ರ್ಯ ಸಂಗ್ರಾಮವನ್ನು ನಡೆಸಿದ ರೀತಿ ಹಾಗೂ ಹೋರಾಟಗಳ ವಿವರವಾದ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು.

ರವೀಂದ್ರ ಸಿಂಗ್‌ ಅತ್ತಾರ, ಜಿ.ಎಂ. ಪುಡಕಲಕಟ್ಟಿ, ಎಫ್‌.ಎಚ್‌. ಕಿತ್ತೂರ, ಚಂದ್ರಶೇಖರ ತುಪ್ಪದ, ಬಾಳೇಶ ಹೆಗ್ಗಣ್ಣವರ, ಎಂ.ಎಚ್‌. ಧಾರವಾಡ, ಎಎಸ್‌ಎ ಮುಲ್ಲಾ, ಮತ್ತು ಅಧೀಕ್ಷಕರಾದ ಎ.ಎ.ಕಿತ್ತೂರ ಭಾಗವಹಿಸಿದ್ದರು. ಎನ್‌ಎನ್‌ಎಸ್‌ ಅಧಿಕಾರಿ ರವಿ ಎಂ.ಬಿ. ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ