ಆ್ಯಪ್ನಗರ

ಥೇಟರ್‌ ಓಪನ್‌ ಮೊದಲ ದಿನ ಸಿಕ್ಕಾಪಟ್ಟೆ ರೆಸ್ಪಾನ್ಸ್‌

ಹುಬ್ಬಳ್ಳಿ: ಕೋವಿಡ್‌-19 ಹಿನ್ನೆಲೆಯಲ್ಲಿಬಂದ್‌ ಆಗಿದ್ದ ಅವಳಿನಗರದ ಚಿತ್ರಮಂದಿರಗಳು ಬರೊಬ್ಬರಿ ಎಂಟು ತಿಂಗಳ ನಂತರ ಓಪನ್‌ ಆಗಿವೆ. ಅದರಂತೆ ವಾಣಿಜ್ಯನಗರಿಯ ಸುಧಾ ಚಿತ್ರಮಂದಿರದಲ್ಲಿಶುಕ್ರವಾರ 1978 ಆ್ಯಕ್ಟ್ ಚಿತ್ರ ರಿಲೀಸ್‌ ಆಗಿದ್ದು, ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. ಅದೇ ರೀತಿ ಧಾರವಾಡದ ಸಂಗಮ ಥೇಟರ್‌ನಲ್ಲಿಇದೇ ಚಿತ್ರ ಬಿಡುಗಡೆಯಾಗಿದ್ದು ಶುಕ್ರವಾರ ಪ್ರದರ್ಶನ ಕಂಡಿತು.

Vijaya Karnataka 21 Nov 2020, 5:00 am
ಹುಬ್ಬಳ್ಳಿ: ಕೋವಿಡ್‌-19 ಹಿನ್ನೆಲೆಯಲ್ಲಿಬಂದ್‌ ಆಗಿದ್ದ ಅವಳಿನಗರದ ಚಿತ್ರಮಂದಿರಗಳು ಬರೊಬ್ಬರಿ ಎಂಟು ತಿಂಗಳ ನಂತರ ಓಪನ್‌ ಆಗಿವೆ. ಅದರಂತೆ ವಾಣಿಜ್ಯನಗರಿಯ ಸುಧಾ ಚಿತ್ರಮಂದಿರದಲ್ಲಿಶುಕ್ರವಾರ 1978 ಆ್ಯಕ್ಟ್ ಚಿತ್ರ ರಿಲೀಸ್‌ ಆಗಿದ್ದು, ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. ಅದೇ ರೀತಿ ಧಾರವಾಡದ ಸಂಗಮ ಥೇಟರ್‌ನಲ್ಲಿಇದೇ ಚಿತ್ರ ಬಿಡುಗಡೆಯಾಗಿದ್ದು ಶುಕ್ರವಾರ ಪ್ರದರ್ಶನ ಕಂಡಿತು.
Vijaya Karnataka Web response to the first day of the theater open
ಥೇಟರ್‌ ಓಪನ್‌ ಮೊದಲ ದಿನ ಸಿಕ್ಕಾಪಟ್ಟೆ ರೆಸ್ಪಾನ್ಸ್‌

ಇಲ್ಲಿಯ ಕೊಯಿನ್‌ ರಸ್ತೆಯಲ್ಲಿರುವ ಸುಧಾ ಚಿತ್ರಮಂದಿರದಲ್ಲಿ ಶುಕ್ರವಾರ ಮೂರು ಪ್ರದರ್ಶನ ನಡೆದಿದ್ದು, ನಿರೀಕ್ಷೆಗೂ ಮೀರಿದ ಪ್ರೇಕ್ಷಕರ ದಂಡು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿತ್ತು. ಚಿತ್ರ ಮಂದಿರಕ್ಕೆ ಬರುವವರಿಗೆ ಸುಧಾ ಟಾಕೀಸ್‌ನಲ್ಲಿಸ್ಯಾನಿಟೈಸರ್‌, ಮಾಸ್ಕ್‌ ವಿತರಣೆ ಸಹ ಮಾಡಲಾಗಿತ್ತು. ಚಿತ್ರಮಂದಿರಕ್ಕೆ ಪ್ರವೇಶಿಸುವ ಪ್ರೇಕ್ಷಕರನ್ನು ಥರ್ಮಲ್‌ ಸ್ಕ್ರೀನಿಂಗ್‌ ಸಹ ಮಾಡಲಾಗುತ್ತಿತ್ತು. ಅಷ್ಟೇ ಅಲ್ಲದೇ ಪ್ರವೇಶಕ್ಕೂ ಪೂರ್ವದಲ್ಲಿಇಡೀ ಚಿತ್ರಮಂದಿರವನ್ನು ಸ್ಯಾನಿಟೈಜೇಶನ್‌ ಮಾಡಲಾಗಿತ್ತು. ಪ್ರದರ್ಶನ ಸಂದರ್ಭದಲ್ಲಿಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು. ಮುಗಿದ ನಂತರ ಮತ್ತೆ ಸ್ಯಾನಿಟೈಜೇಷನ್‌ ಮಾಡಿ ಎರಡನೇ ಪ್ರದರ್ಶನ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು. ಚಿತ್ರಮಂದಿರದ ಕ್ಯಾಂಟೀನ್‌ನಲ್ಲಿಪ್ಯಾಕ್‌ ಮಾಡಲಾಗಿದ್ದ ಆಹಾರ ಮಾರಾಟ ಮಾಡುವ ಮೂಲಕ ಪ್ರೇಕ್ಷಕರ ಆರೋಗ್ಯದ ಕಾಳಜಿಯನ್ನು ತೆಗೆದುಕೊಂಡಿದ್ದು ವಿಶೇಷವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ