ಆ್ಯಪ್ನಗರ

Traffic Rules Break: ಹೆಲ್ಮೆಟ್ ಇಲ್ಲದೆ ಅಡ್ಡಾದಿಡ್ಡಿ ಓಡಾಟ; ಹುಬ್ಬಳ್ಳಿಯ ಬೈಕ್ ಸವಾರನಿಗೆ ಬಿತ್ತು 17,500 ರೂ ದಂಡ!

ಮನಸೋ ಇಚ್ಛೆ ಸಂಚಾರಿ ನಿಯಮ ಉಲ್ಲಂಘಿಸಿದ್ದ ವ್ಯಕ್ತಿಗೆ ಹುಬ್ಬಳ್ಳಿಯ ಪೊಲೀಸರು ಶಾಕ್‌ ನೀಡಿದ್ದಾರೆ. 23 ಬಾರಿ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದ್ದರಿಂದ ಭರ್ತಿ 17,500 ರೂ. ದಂಡ ವಿಧಿಸಲಾಗಿದೆ. 2017 ರಿಂದಲೂ ಈತ ನಗರದ ವಿವಿಧೆಡೆ ಹೆಲ್ಮೆಟ್ ಹಾಕದೆ ಸಂಚರಿಸಿದ್ದಾನೆ. ದಂಡದ ದೊಡ್ಡ ಪಟ್ಟಿ ನೋಡುತ್ತಿದ್ದಂತೆ ಶಾಕ್ ಆದ ಬೈಕ್ ಸವಾರ, ಅಷ್ಟೊಂದು ದುಡ್ಡು ನನ್ನ ಬಳಿ ಇಲ್ಲ. ಬೈಕ್ ನ್ನು ನೀವೇ ಇಟ್ಟುಕೊಳ್ಳಿ ಅಂತ ಟ್ರಾಫಿಕ್ ಪೊಲೀಸರಿಗೆ ಕೊಟ್ಟು ಹೋಗಿದ್ದಾನೆ.

Edited byಅವಿನಾಶ ವಗರನಾಳ | Vijaya Karnataka Web 28 Nov 2022, 10:39 am

ಹೈಲೈಟ್ಸ್‌:


  • ಸಂಚಾರಿ ನಿಯಮ ಉಲ್ಲಂಘಿಸಿದ್ದ ವ್ಯಕ್ತಿಗೆ ಹುಬ್ಬಳ್ಳಿ ಪೊಲೀಸರಿಂದ ಶಾಕ್‌!
  • 23 ಸಲ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ಭರ್ತಿ 17,500 ರೂ. ದಂಡ
  • ದುಡ್ಡು ಕಟ್ಟಲೂ ಹಣ ಇಲ್ಲದೇ ಬೈಕ್‌ ಅನ್ನು ಪೊಲೀಸರಿಗೆ ಕೊಟ್ಟ ವ್ಯಕ್ತಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Traffic Fine
ಹುಬ್ಬಳ್ಳಿ: ವಾಹನ ಸವಾರರೇ ಹುಷಾರ್.. ಹೆಲ್ಮೆಟ್ ಹಾಕದೆ ಸಂಚರಿಸಿದೆ ಬೀಳುತ್ತೆ ಸಾವಿರಾರು ರೂಪಾಯಿ ದಂಡ.. ಹುಬ್ಬಳ್ಳಿಯಲ್ಲಿ ಬೈಕ್ ಸವಾರನಿಗೆ ಬಿದ್ದ ದಂಡ ಕೇಳಿದ್ರೆ ನೀವೇ ಬೆಚ್ಚಿ ಬೀಳ್ತೀರಾ! ಹೌದು, ಬರೀ ಹೆಲ್ಮೆಟ್ ಹಾಕದೇ ಅಡ್ಡಾಡ್ತಿದ್ದ ಸವಾರನಿಗೆ ಬಿದ್ದಿದೆ ಬರೋಬ್ಬರಿ 17,500 ರೂಪಾಯಿ ದಂಡ. ಈ ಪರಿ ದಂಡ ಬಿದ್ದಿರೋದಕ್ಕೆ ಬೆಚ್ಚಿ ಬಿದ್ದ ಸವಾರ ತನ್ನ ಬೈಕ್ ನ್ನೇ ಟ್ರಾಫಿಕ್ ಪೊಲೀಸರಿಗೆ ಒಪ್ಪಿಸಿ ಹೊರಟು ಹೋಗಿದ್ದಾನೆ.

ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಆದೇಶದಂತೆ ಟ್ರಾಫಿಕ್ ನಿಯಮ ಉಲ್ಲಂಘಿಸುವವರಿಗೆ ದೊಡ್ಡ ಪ್ರಮಾಣದ ದಂಡ ವಿಧಿಸಲಾಗುತ್ತಿದೆ. ಹೆಲ್ಮೆಟ್ ಹಾಕದಿರೋದು, ಸಿಗ್ನಲ್ ಜಂಪ್, ಓವರ್ ಸ್ಪೀಡ್, ತ್ರಿಬಲ್ ರೈಡಿಂಗ್, ಡ್ರಂಕ್ & ಡ್ರೈವ್ ಹೀಗೆ ದಂಡದ ವಿಧಾನಗಳ ದೊಡ್ಡ ಪಟ್ಟಿಯೇ ಇದೆ. ಬಹಳಷ್ಟು ಜನ ರಸ್ತೆಯಲ್ಲಿ ಸಂಚಾರಿ ಪೊಲೀಸರು ಕಾಣದೇ ಇದ್ದಲ್ಲಿ ತಾವು ಬಚಾವ್ ಆದೆವು ಅಂತ ಹೋಗ್ತಾ ಇರ್ತಾರೆ. ಆದ್ರೆ ಹಾಗೆ ಹೋದ್ರೂ ಸಿಸಿ ಕ್ಯಾಮರಾ ಕಣ್ಗಾವಲಿನಿಂದ ತಪ್ಪಿಸಿಕೊಳ್ಳೋಕೆ ಸಾಧ್ಯವಿಲ್ಲ ಅನ್ನೋದಕ್ಕೆ ವಾಣಿಜ್ಯ ನಗರೀ ಹುಬ್ಬಳ್ಳಿಯಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ.

ಹೀಗೆ, ಹೆಲ್ಮೆಟ್ ಹಾಕದೆ ಪದೇ ಪದೇ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಅಡ್ಡಾಡುತ್ತಿದ್ದವರಿಗೆ ಸಂಚಾರಿ ಪೊಲೀಸರಿಂದ ದೊಡ್ಡ ದಂಡವೇ ಬಿದ್ದಿದೆ. ಇನ್ನು ಪೊಲೀಸರ ಬಲೆಗೆ ಬಿದ್ದು, ದೊಡ್ಡ ದಂಡದ ಲಿಸ್ಟ್ ತೆಗೆದುಕೊಂಡಾತನನ್ನು ಹುಬ್ಬಳ್ಳಿಯ ಮಹ್ಮದ್ ರಫೀಕ್ ಗುಡಗೇರಿ ಎಂದು ಗುರುತಿಸಲಾಗಿದೆ. ಈತ ಒಂದಲ್ಲ, ಎರಡಲ್ಲ, ಬರೋಬ್ಬರಿ 23 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾನೆ. ಅದರ ಪರಿಣಾಮ ಶುಕ್ರವಾರ (ನವೆಂಬರ್‌ 25) ಈತನಿಗೆ 17,500 ಸಾವಿರ ರೂ. ದಂಡ ಪಾವತಿಸುವಂತೆ ಸೂಚಿಸಲಾಗಿದೆ.
ಅಂಚೆ ಕಚೇರಿಯಲ್ಲೇ ಟ್ರಾಫಿಕ್‌ ದಂಡ ಪಾವತಿ, ಚೆನ್ನೈ ಮಾದರಿಯಲ್ಲಿ ರಾಜ್ಯದ 7 ಜಿಲ್ಲೆಗಳಲ್ಲಿ ಜಾರಿ
2017ರಿಂದಲೂ ಸಂಚಾರಿ ನಿಯಮ ಉಲ್ಲಂಘನೆ!
2017 ರಿಂದಲೂ ಈತ ನಗರದ ವಿವಿಧೆಡೆ ಹೆಲ್ಮೆಟ್ ಹಾಕದೆ ಸಂಚರಿಸಿದ್ದಾನೆ. ಆತನ ದುರದೃಷ್ಟವೋ ಏನೋ ಗೊತ್ತಿಲ್ಲ ಶುಕ್ರವಾರ ಹುಬ್ಬಳ್ಳಿ ಉತ್ತರ ಸಂಚಾರಿ ಠಾಣೆ ಪೊಲೀಸರ ಕಣ್ಣಿಗೆ ಬಿದ್ದಿದ್ದಾನೆ. ಈತನ ಬೈಕ್ ನಂಬರ್ ಎಂಟ್ರಿ ಮಾಡುತ್ತಿದ್ದಂತೆಯೇ ದಂಡದ ದೊಡ್ಡ ಪಟ್ಟಿಯೇ ಹೊರಬಿದ್ದಿದೆ. ಎಎಸ್ಐ ರಮಜಾನಭಿ ಅಳಗಡವಾಡಿ ಮತ್ತು ಕಾನಸ್ಟೇಬಲ್ ಸಂತೋಷ ಚವ್ಹಾಣ್ ಬೈಕ್ ಸವಾರನನ್ನು ತಡೆದು ದಂಡದ ಲಿಸ್ಟ್ ಕೊಟ್ಟಿದ್ದಾರೆ.

ಪೆಟ್ರೋಲ್‌ ಏನು ನಿಮ್ಮಪ್ಪ ಕೊಡಿಸ್ತಾನಾ?: ನಿರುದ್ಯೋಗಿಗಳಿಗೆ ಬೈಕ್‌ ವಿತರಣೆ ಯೋಜನೆಗೆ ನೆಟ್ಟಿಗರ ನೇರ ಪ್ರಶ್ನೆ
ದುಡ್ಡು ಕಟ್ಟಲು ಆಗದೇ ಬೈಕ್‌ ಬಿಟ್ಟು ಹೋದ ಯುವಕ
ನಂತರ ದಂಡದ ದೊಡ್ಡ ಪಟ್ಟಿ ನೋಡುತ್ತಿದ್ದಂತೆ ಶಾಕ್ ಆದ ಬೈಕ್ ಸವಾರ, ಅಷ್ಟೊಂದು ದುಡ್ಡು ನನ್ನ ಬಳಿ ಇಲ್ಲ. ಬೈಕ್ ನ್ನು ನೀವೇ ಇಟ್ಟುಕೊಳ್ಳಿ ಅಂತ ಟ್ರಾಫಿಕ್ ಪೊಲೀಸರಿಗೆ ಕೊಟ್ಟು ಹೊರಟು ಹೋಗಿದ್ದಾನೆ. ಸದ್ಯ ದಂಡದ ಬದಲಿಗೆ ಬೈಕ್ ತೆಗೆದುಕೊಂಡು ಬಂದಿರೋ ಪೊಲೀಸರು ಸಂಚಾರಿ ಠಾಣೆಯಲ್ಲಿ ಅದನ್ನು ಭದ್ರವಾಗಿ ಇಟ್ಟಿದ್ದಾರೆ. ಈ ಘಟನೆ ಹುಬ್ಬಳ್ಳಿ-ಧಾರವಾಡದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸುವ ಬೈಕ್ ಸವಾರರನ್ನು ಬೆಚ್ಚಿ ಬೀಳಿಸಿದೆ.
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ