ಆ್ಯಪ್ನಗರ

ಮನಗೆದ್ದ ರಾಕಿ ಬಾಯ್‌ ಹಾಡು...

ಧಾರವಾಡ : ದೇಶಾದ್ಯಂತ ಹವಾ ಮಾಡಿರುವ ಕೆಜಿಎಫ್‌ ಚಿತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಕೆಜಿಎಫ್‌ ಚಿತ್ರ ಈಗಾಗಲೇ ಸ್ಯಾಂಡಲ್‌ ವುಡ್‌ನ್ನು ಪ್ರಪಂಚವೇ ತಿರುಗಿ ನೋಡುವ ಹಾಗೆ ತನ್ನದೇ ಚಾಪು ಮೂಡಿಸಿದೆ. ಪ್ರಾಶಾಂತ ನೀಲ್‌ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದ ರಾಕಿ ಬಾಯ್‌ ಹಾಡು ಎಲ್ಲರ ಮನ ಮುಟ್ಟಿದೆ.

Vijaya Karnataka 28 Dec 2018, 5:00 am
Vijaya Karnataka Web rocky boy song in mind
ಮನಗೆದ್ದ ರಾಕಿ ಬಾಯ್‌ ಹಾಡು...

ಧಾರವಾಡ : ದೇಶಾದ್ಯಂತ ಹವಾ ಮಾಡಿರುವ ಕೆಜಿಎಫ್‌ ಚಿತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಕೆಜಿಎಫ್‌ ಚಿತ್ರ ಈಗಾಗಲೇ ಸ್ಯಾಂಡಲ್‌ ವುಡ್‌ನ್ನು ಪ್ರಪಂಚವೇ ತಿರುಗಿ ನೋಡುವ ಹಾಗೆ ತನ್ನದೇ ಚಾಪು ಮೂಡಿಸಿದೆ. ಪ್ರಾಶಾಂತ ನೀಲ್‌ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದ ರಾಕಿ ಬಾಯ್‌ ಹಾಡು ಎಲ್ಲರ ಮನ ಮುಟ್ಟಿದೆ.

ಕೆಜಿಎಫ್‌ ಚಿತ್ರದ ಸಲಾಮ್‌ ರಾಕಿ ಬಾಯ್‌ ಹಾಡಿಗೆ ಧಾರವಾಡದಲ್ಲಿ ವಿಭಿನ್ನವಾಗಿ ಡ್ಯಾನ್ಸ್‌ ಮಾಡುವ ಮೂಲಕ ನಾಟ್ಯ ಪರ್ವ ಆರ್ಟ್‌ ಆಂಡ್ಯ ಕಲ್ಚರಲ್‌ ಅಕ್ಯಾಡೆಮಿ ತಮ್ಮದೆ ಆದ ಶೈಲಿಯಲ್ಲಿ ಎಲ್ಲರ ಮನಗೆದ್ದಿದ್ದಾರೆ. ಡ್ಯಾನ್ಸ್‌ ಅಕ್ಯಾಡೆಮಿ ಮುಖ್ಯಸ್ಥ ಅನಿಲ್‌ಕುಮಾರ ಹಂಚಿನಾಳ ಅವರು ತಮ್ಮ ಕ್ಲಾಸ್‌ನ ಚಿಕ್ಕ ಚಿಕ್ಕ ಮಕ್ಕಳನ್ನು ಸೇರಿಸಿಕೊಂಡು ಕೆಜಿಎಫ್‌ನ ರೀತಿಯಲ್ಲಿ ಸೆಟ್‌ ನಿರ್ಮಾಣ ಮಾಡಿ ಸಲಾಮ್‌ ರಾಕಿ ಬಾಯ್‌ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋ ಸಾಕಷ್ಟು ವೈರಲ್‌ ಆಗಿ ತಮ್ಮದೆ ಹವಾ ಮಾಡಿದ್ದಾರೆ.

ಧಾರವಾಡ ನಗರದ ಮದಿಹಾಳದ ಎಂ.ಆರ್‌ ನಗರದಲ್ಲಿ ತಮ್ಮ ಡ್ಯಾನ್ಸ ಕ್ಲಾಸ್‌ನ ಒಂದು ಪುಟ್ಟ ಜಾಗದಲ್ಲಿ ಅಳಿದುಳಿದ ವಸ್ತುಗಳನ್ನ ಸೇರಿಸಿ ಕೆಜಿಎಫ್‌ ರೀತಿಯಲ್ಲಿ ಸೆಟ್‌ ನಿರ್ಮಾಣ ಮಾಡಿ ಎಲ್ಲರನ್ನು ಹುಬ್ಬೆರಿಸುವಂತೆ ಮಾಡಿದ್ದಾರೆ. ಹತ್ತರಿಂದ ಹದಿನೈದು ಮಕ್ಕಳನ್ನು ಈ ನೃತ್ಯದಲ್ಲಿ ಬಳಸಿಕೊಂಡ ಎಲ್ಲರ ಗಮನ ಸೇಳೆದಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ