ಆ್ಯಪ್ನಗರ

ಮತ್ತೆ ಬಂತು ರೌಡಿ ನಿಗ್ರಹ ಪಡೆ

​ ಹುಬ್ಬಳ್ಳಿ : ಹದಗೆಟ್ಟ ಕಾನೂನು ಸುವ್ಯವಸ್ಥೆ ಸರಿ ದಾರಿಗೆ ತರಲು ಹಾಗೂ ದುಷ್ಕೃತ್ಯಗಳಿಗೆ ಕಡಿವಾಣ ಹಾಕಲು ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮಿಷ್ನರೇಟ್‌ ವ್ಯಾಪ್ತಿಯಲ್ಲಿರೌಡಿ ನಿಗ್ರಹ ಪಡೆ ರಚನೆಗೊಂಡಿದೆ.

Vijaya Karnataka 15 Oct 2019, 5:00 am
ಕಲ್ಮೇಶ ಪಟ್ಟಣದವರ
Vijaya Karnataka Web rowdy suppressed the force again
ಮತ್ತೆ ಬಂತು ರೌಡಿ ನಿಗ್ರಹ ಪಡೆ

ಹುಬ್ಬಳ್ಳಿ : ಹದಗೆಟ್ಟ ಕಾನೂನು ಸುವ್ಯವಸ್ಥೆ ಸರಿ ದಾರಿಗೆ ತರಲು ಹಾಗೂ ದುಷ್ಕೃತ್ಯಗಳಿಗೆ ಕಡಿವಾಣ ಹಾಕಲು ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮಿಷ್ನರೇಟ್‌ ವ್ಯಾಪ್ತಿಯಲ್ಲಿರೌಡಿ ನಿಗ್ರಹ ಪಡೆ ರಚನೆಗೊಂಡಿದೆ.

ಹೌದು, ಗೃಹ ಸಚಿವ ಬಸವರಾಜ ಬೊಮ್ಮಾಯಿ ನಿರ್ದೇಶನದಂತೆ ಹು-ಧಾ ಕಮಿಷ್ನರೇಟ್‌ ಘಟಕದಲ್ಲಿರೌಡಿ ನಿಗ್ರಹ ಪಡೆ ತಲೆ ಎತ್ತಿದೆ. ಇದು ಅವಳಿನಗರದ ರೌಡಿಗಳ ಚಲನವಲನದ ಮೇಲೆ ಹದ್ದಿನ ಕಣ್ಣು ಇಟ್ಟು ಅವರ ಚಟುವಟಿಕೆಗಳ ನಿಯಂತ್ರಣ ಮಾಡುವಲ್ಲಿವಿಶೇಷ ಗಮನ ಹರಿಸಲಿದೆ.

ಈ ಪಡೆಯಲ್ಲಿಪೊಲೀಸ್‌ ಅಧಿಕಾರಿಗಳು ಸೇರಿದಂತೆ 20ಕ್ಕೂ ಹೆಚ್ಚು ಸಿಬ್ಬಂದಿ ನಾಲ್ಕು ತಂಡಗಳಲ್ಲಿಕಾರ್ಯ ನಿರ್ವಹಿಸಲಿದ್ದಾರೆ. ಪ್ರತಿ ತಂಡಕ್ಕೆ ಒಬ್ಬ ಇನ್‌ಸ್ಪೆಕ್ಟರ್‌ ನೇಮಕ ಮಾಡಿದ್ದು, ತಂಡದಲ್ಲಿಐದಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ನಿಯೋಜಿಸಿದೆ. ಈ ನಾಲ್ಕು ತಂಡದ ಪೈಕಿ ಒಂದು ತಂಡ ಹು-ಧಾ ಮಹಾನಗರದಲ್ಲಿಎಲ್ಲವ್ಯಾಪ್ತಿಯಲ್ಲಿಅಪರಾಧ ಕೃತ್ಯ, ಮೀಟರ್‌ ಬಡ್ಡಿ, ಭೂ-ವಿವಾದ ಸೇರಿದಂತೆ ಇತರೆ ಅಕ್ರಮ ಚಟುವಟಿಕೆಗಳನ್ನು ನಡೆಸುವ ರೌಡಿಗಳ ಮೇಲೆ ನಿಗಾವಹಿಸಲಿದೆ. ಉಳಿದ ಮೂರು ತಂಡಗಳಿಗೆ ಪ್ರತ್ಯೇಕ ಪ್ರದೇಶ ನಿಗದಿಪಡಿಸಿ ಆಯಾ ಪ್ರದೇಶದಲ್ಲಿನಡೆಯುವ ಅಕ್ರಮ ಚಟುವಟಕೆ ಮೇಲೆ ಹದ್ದಿನ ಕಣ್ಣಿಡಲಿದೆ. ಈ ತಂಡಗಳಿಗೆ ಡಿಸಿಪಿ ಡಿ.ಎಲ…. ನಾಗೇಶ್‌ ಅಗತ್ಯ ಮಾರ್ಗದರ್ಶನ ಮಾಡಲಿದ್ದಾರೆ.

ಪಿಐಗಳಾದ ಲಕ್ಷ್ಮೇಕಾಂತ ತಳವಾರ, ಸುರೇಶ ಕುಂಬಾರ, ಮಾರುತಿ ಗುಳ್ಳಾರಿ ಹಾಗೂ ಕಾಡದೇವರಮಠ ಅವರು ನಾಲ್ಕು ತಂಡಗಳನ್ನು ಪ್ರತ್ಯೇಕವಾಗಿ ಮುನ್ನಡೆಸಲಿದ್ದಾರೆ. ಧಾರವಾಡ ಶಹರ ಠಾಣೆ ಪಿಐ ಲಕ್ಷ್ಮೇಕಾಂತ ತಳವಾರ ನೇತೃತ್ವದ ತಂಡ ಕಮಿಷ್ನರೇಟ್‌ ಘಟಕದ ಧಾರವಾಡ ಉಪವಿಭಾಗದಲ್ಲಿ, ಕೇಶ್ವಾಪುರ ಠಾಣೆ ಪಿಐ ಸುರೇಶ ಕುಂಬಾರ ನೇತೃತ್ವದ ತಂಡ ಹುಬ್ಬಳ್ಳಿ ಉತ್ತರ ಉಪವಿಭಾಗ ವ್ಯಾಪ್ತಿಯಲ್ಲಿ, ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆ ಪಿಐ ಮಾರುತಿ ಗುಳ್ಳಾರಿ ನೇತೃತ್ವದ ತಂಡ ಹುಬ್ಬಳ್ಳಿ ದಕ್ಷಿಣ ಉಪವಿಭಾಗ ವ್ಯಾಪ್ತಿಯಲ್ಲಿಮತ್ತು ಸಿಸಿಬಿ ಪಿಐ ಕಾಡದೇವರಮಠ ಅವರು ಅವಳಿನಗರದ ವ್ಯಾಪ್ತಿಯಲ್ಲಿಕಾರ್ಯಾಚರಣೆ ಮಾಡಲಿದ್ದಾರೆ.

ಇಲಾಖೆ ಕೆಲಸದಲ್ಲಿಸಕ್ರಿಯ, ಮಾಹಿತಿ ಹೆಕ್ಕಿ ತೆಗೆಯುವ ಮತ್ತು ಕಪ್ಪು ಚುಕ್ಕೆ ಹೊಂದಿರದ ಸಿಬ್ಬಂದಿಯನ್ನು ತಂಡಕ್ಕೆ ಸೇರ್ಪಡೆ ಮಾಡಲಾಗಿದ್ದು, ಆಯ್ಕೆಗೊಳಿಸಿದ ಸಿಬ್ಬಂದಿ ಪಟ್ಟಿಯನ್ನು ಈಗಾಗಲೇ ಪೊಲೀಸ್‌ ಆಯುಕ್ತರ ಕಚೇರಿಗೆ ಕಳುಹಿಸಲಾಗಿದೆ. ಶೀಘ್ರವೇ ಹು-ಧಾ ಮಹಾನಗರದಲ್ಲಿಕಾರ್ಯಾಚರಣೆ ಆರಂಭ ಮಾಡಲಿದೆ.

ಈ ಹಿಂದೆ ಪೊಲೀಸ್‌ ಆಯುಕ್ತರಾಗಿದ್ದ ಪಾಂಡುರಂಗ ರಾಣೆ ಅವರ ಅವಧಿಯಲ್ಲಿಕಮಿಷ್ನರೇಟ್‌ ಘಟಕದಲ್ಲಿಪಿಐಗಳಾದ ಪುಟ್ಟಸ್ವಾಮಿ ಮತ್ತು ಎಸ್‌.ಆರ್‌. ನಾಯಕ ಅವರ ನೇತೃತ್ವದಲ್ಲಿರೌಡಿ ನಿಗ್ರಹ ಪಡೆ ರಚಿಸಲಾಗಿತ್ತು. ಆ ಸಂದರ್ಭದಲ್ಲಿಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿದ್ದ ಜಿನೇಂದ್ರ ಕಣಗಾಂವಿ ಈ ತಂಡದ ಮೇಲುಸ್ತುವಾರಿ ವಹಿಸಿದ್ದರು. ಆಯುಕ್ತ ಪಾಂಡುರಂಗ ರಾಣೆ ಅವರ ನಿವೃತ್ತಿ ನಂತರ ಆಯುಕ್ತರಾಗಿ ಬಂದ ಎಂ.ಎನ್‌. ನಾಗರಾಜ್‌ ಅವರು ಈ ಪಡೆ ನೇಪಥ್ಯಕ್ಕೆ ಸೇರಿತು. ಆಗ ಡಿಸಿಪಿಯಾಗಿದ್ದ ರೇಣುಕಾ ಸುಕುಮಾರ್‌ ರೌಡಿ ನಿಗ್ರಹಕ್ಕಾಗಿ ಆಗಾಗ ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಿ ಬಿಸಿ ಮುಟ್ಟಿಸುವ ಕೆಲಸ ಮಾಡುವ ಮೂಲಕ ಪಡೆಗೆ ಬಲತುಂಬವ ಪ್ರಯತ್ನ ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ