ಆ್ಯಪ್ನಗರ

ಧಾರವಾಡದಲ್ಲಿ ಶನಿವಾರ ಬಟ್ಟೆ ಅಂಗಡಿಗಳು ಬಂದ್‌

ಧಾರವಾಡ: ದಿನದಿಂದ ದಿನಕ್ಕೆ ಕೊರೊನಾ ಸೋಂಕು ತೀವ್ರಗತಿಯಲ್ಲಿಹಬ್ಬುತ್ತಿರುವುದರಿಂದ ರಾಜ್ಯ ಸರಕಾರ ಪ್ರತಿ ಭಾನುವಾರ ಲಾಕ್‌ಡೌನ್‌ ವಿಧಿಸಿದೆ. ಇದರ ಜತೆಗೆ ಧಾರವಾಡದ ಕ್ಲಾಥ್‌ ಮಚಂರ್‍ಟ್‌ ಅಸೋಸಿಯೇಶನ್‌ದವರು ಶನಿವಾರವೂ ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ್‌ ಮಾಡಿ ಕೊರೊನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.

Vijaya Karnataka 12 Jul 2020, 5:00 am
ಧಾರವಾಡ: ದಿನದಿಂದ ದಿನಕ್ಕೆ ಕೊರೊನಾ ಸೋಂಕು ತೀವ್ರಗತಿಯಲ್ಲಿಹಬ್ಬುತ್ತಿರುವುದರಿಂದ ರಾಜ್ಯ ಸರಕಾರ ಪ್ರತಿ ಭಾನುವಾರ ಲಾಕ್‌ಡೌನ್‌ ವಿಧಿಸಿದೆ. ಇದರ ಜತೆಗೆ ಧಾರವಾಡದ ಕ್ಲಾಥ್‌ ಮಚಂರ್‍ಟ್‌ ಅಸೋಸಿಯೇಶನ್‌ದವರು ಶನಿವಾರವೂ ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ್‌ ಮಾಡಿ ಕೊರೊನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.
Vijaya Karnataka Web saturday clothing stores close in dharwad
ಧಾರವಾಡದಲ್ಲಿ ಶನಿವಾರ ಬಟ್ಟೆ ಅಂಗಡಿಗಳು ಬಂದ್‌

ಧಾರವಾಡ ಜಿಲ್ಲೆಯಲ್ಲಿದಿನೆ ದಿನೇ ಕೊರೊನಾ ಸೋಂಕು ಗಣನೀಯ ಪ್ರಮಾಣದಲ್ಲಿಹೆಚ್ಚಳವಾಗುತ್ತಿದ್ದು, ಇದನ್ನರಿತ ನಗರದ ಜವಳಿ ವ್ಯಾಪಾರಸ್ಥರು ತಮ್ಮ ಅಸೋಸಿಯೇಶನ್‌ ವತಿಯಿಂದ ಶನಿವಾರ ನಗರದಲ್ಲಿನ ಎಲ್ಲಬಟ್ಟೆ ಅಂಗಡಿಗಳನ್ನು ಬಂದ್‌ ಮಾಡುವ ಮೂಲಕ ಕೊರೊನಾ ನಿಗ್ರಹಕ್ಕೆ ಮುಂದಾಗಿದ್ದಾರೆ.

ಇದರಿಂದ ಶನಿವಾರ ಧಾರವಾಡದ ಸುಭಾಸ ರಸ್ತೆ, ಸೂಪರ್‌ ಮಾರ್ಕೆಟ್‌ ಹಾಗೂ ಇತರ ಕಡೆಯಲ್ಲಿಇದ್ದ ಎಲ್ಲಬಟ್ಟೆ ಅಂಗಡಿಗಳು ಬಂದ್‌ ಆಗಿದ್ದವು. ಗೊತ್ತಿಲ್ಲದೆ ಬಟ್ಟೆ ಖರೀದಿಗೆ ಬಂದಿದ್ದ ಗ್ರಾಹಕರು ವಾಪಸ್‌ ಹೋದರು. ಇದರಿಂದಾಗಿ ಮಾರುಕಟ್ಟೆ ಪ್ರದೇಶದಲ್ಲಿಜನರ ಓಡಾಟ ಕಡಿಮೆ ಕಂಡು ಬಂತು. ಆದರೆ, ತರಕಾರಿ ಮಾರುಕಟ್ಟೆಯಲ್ಲಿಮಾತ್ರ ಜನರ ಗುಂಪು ಕಡಿಮೆ ಆಗಿರಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ