ಆ್ಯಪ್ನಗರ

ಕೈಮಗ್ಗ ನೇಕಾರರನ್ನು ಉಳಿಸಿ ಬೆಳೆಸಿ

ಧಾರವಾಡ : ತಾಲೂಕಿನ ಹೆಬ್ಬಳ್ಳಿಯ ಖಾದಿ ಕೇಂದ್ರದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ತಾಲೂಕ ಹೆಬ್ಬಳ್ಳಿ ಕ್ಷೇತ್ರಿಯ ಸೇವಾಸಂಘ ಸಹಯೋಗದೊಂದಿಗೆ ಹಮ್ಮಿಕೊಂಡ 5ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮ ಜರುಗಿತು.

Vijaya Karnataka 10 Aug 2019, 5:00 am
ಧಾರವಾಡ : ತಾಲೂಕಿನ ಹೆಬ್ಬಳ್ಳಿಯ ಖಾದಿ ಕೇಂದ್ರದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ತಾಲೂಕ ಹೆಬ್ಬಳ್ಳಿ ಕ್ಷೇತ್ರಿಯ ಸೇವಾಸಂಘ ಸಹಯೋಗದೊಂದಿಗೆ ಹಮ್ಮಿಕೊಂಡ 5ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮ ಜರುಗಿತು.
Vijaya Karnataka Web save and grow handloom weavers
ಕೈಮಗ್ಗ ನೇಕಾರರನ್ನು ಉಳಿಸಿ ಬೆಳೆಸಿ


ಉದ್ಘಾಟಿಸಿದ ಹೆಬ್ಬಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಚನ್ನಬಸಪ್ಪ ಬಸಪ್ಪ ಮಟ್ಟಿ ಮಾತನಾಡಿ, ಕೈಮಗ್ಗ ನೇಕಾರರಿಗೆ ಸರಕಾರದ ವಿವಿಧ ಯೋಜನೆಗಳಲ್ಲಿ ದೊರೆಯುವ ಸೌಲಭ್ಯ ಪಡೆದು ಮುಂದೆ ಬರಬೇಕು. ಇಂದಿನ ಮಾರುಕಟ್ಟೆ ಬೇಡಿಕೆಗಳಿಗನುಗುಣವಾಗಿ ಕೈಮಗ್ಗ ಉತ್ಪಾದನೆ ತಯಾರಿಸಬೇಕು. ಕೈಮಗ್ಗ ಬಟ್ಟೆ ಖರೀದಿಸಿ ಕೈಮಗ್ಗ ನೇಕಾರರನ್ನು ಉಳಿಸಿ ಬೆಳೆಸಬೇಕು ಎಂದರು.

ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ವೀರೇಶ ಎಸ್‌. ಢವಳೆ ಮಾತನಾಡಿ, ಕೈಮಗ್ಗ ದಿನಾಚರಣೆ ಹಿನ್ನೆಲೆ ಮಹತ್ವ ಹಾಗೂ ಪ್ರಸ್ತುತ ಬೇಡಿಕೆ ಇರುವ ಕೈಮಗ್ಗ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.

ತಾಪಂ ಸದಸ್ಯ ಎಂ.ಎಂ.ಭಾವಿಕಟ್ಟಿ, ಹೆಬ್ಬಳ್ಳಿ ಗ್ರಾಪಂ ಅಧ್ಯಕ್ಷೆ ರತ್ನವ್ವಾ ಸುಣಗಾರ, ವೀರಪ್ಪ ಬೆಣಚನಮರಡಿ, ಎಂ.ಎಚ್‌. ಅಮ್ರದ ಇದ್ದರು. ಸುರೇಶ ಬನ್ನಿಗಿಡದ ನಿರೂಪಿಸಿದರು. ಜಿ.ಎಂ. ಬ್ಯಾಹಟ್ಟಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ