ಆ್ಯಪ್ನಗರ

ಶಾಲಾ ಸಂಸತ್‌, ವನಮಹೋತ್ಸವ

ಹುಬ್ಬಳ್ಳಿ : ಡಿವಿಇ ಅಕ್ಯಾಡೆಮಿಯ ಚೇತನ ಪಬ್ಲಿಕ್‌ ಸ್ಕೂಲಿನಲ್ಲಿ ಶನಿವಾರ ಶಾಲಾ ಸಂಸತ್‌ ಚುನಾವಣೆ ನಡೆಯಿತು. ಕ್ಷೇತ್ರ ಶಿಕ್ಷ ಣಾಧಿಕಾರಿ ಶ್ರೀಶೈಲ ಕರಿಕಟ್ಟಿ ಮಾತನಾಡಿ, ಶಾಲಾ ಸಂಸತ್‌ನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿಗಳು ಈ ವಯಸ್ಸಿನಲ್ಲಿಯೇ ನಾಯಕತ್ವ ಗುಣ

Vijaya Karnataka 21 Jul 2019, 5:00 am
ಹುಬ್ಬಳ್ಳಿ : ಡಿವಿಇ ಅಕ್ಯಾಡೆಮಿಯ ಚೇತನ ಪಬ್ಲಿಕ್‌ ಸ್ಕೂಲಿನಲ್ಲಿ ಶನಿವಾರ ಶಾಲಾ ಸಂಸತ್‌ ಚುನಾವಣೆ ನಡೆಯಿತು. ಕ್ಷೇತ್ರ ಶಿಕ್ಷ ಣಾಧಿಕಾರಿ ಶ್ರೀಶೈಲ ಕರಿಕಟ್ಟಿ ಮಾತನಾಡಿ, ಶಾಲಾ ಸಂಸತ್‌ನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿಗಳು ಈ ವಯಸ್ಸಿನಲ್ಲಿಯೇ ನಾಯಕತ್ವ ಗುಣ ಅಳವಡಿಸಿಕೊಳ್ಳಬೇಕು ಎಂದರು.
Vijaya Karnataka Web school mp vanamotsawa
ಶಾಲಾ ಸಂಸತ್‌, ವನಮಹೋತ್ಸವ


ಪ್ರಾಚಾರ್ಯ ಎಂ.ಎಂ.ಕರೇಗೌಡರ ಹಾಗೂ ವೇದಿಕೆಯ ಮೇಲಿನ ಗಣ್ಯರು ಸಂಸತ್ತಿನ ಎಲ್ಲ ಸದಸ್ಯರಿಗೆ ಬ್ಯಾಡ್ಜ್‌ ಪ್ರದಾನ ಮಾಡಿದರು.

ಅಧ್ಯಕ್ಷ ನಂದನ ದ್ಯಾವಪ್ಪನವರ, ಉಪಾಧ್ಯಕ್ಷೆ ಅಪೇಕ್ಷಾ ಹಜಾರೆ ಮಾತನಾಡಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮಹಮ್ಮದ ಖಾನ್‌ ಸ್ವಾಗತಿಸಿದರು. ತುಷಾರ ಕತ್ತಿಶೆಟ್ಟರ ವಂದಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಸಸಿನೆಟ್ಟು ವನಮಹೋತ್ಸವ ಆಚರಿಸಲಾಯಿತು. ಹತ್ತನೇ ತರಗತಿ ವಿದ್ಯಾರ್ಥಿನಿ ಸಹನಾ ಪಾಟೀಲ ವನಮಹೋತ್ಸವದ ಕುರಿತು ಭಾಷಣ ಮಾಡಿದಳು. ಕಶಿಶ್‌ ದಯಾ ಹಾಗೂ ರೋಹಿತ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ