ಆ್ಯಪ್ನಗರ

ಸೈಕಲ್‌ ಮೇಲೆ ಪುಸ್ತಕ ಮಾರಾಟ !

ಧಾರವಾಡ : ಪ್ರತಿಯೊಂದು ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಾರಾಟ ಮಳಿಗೆ ತೆರೆಯುವುದು ಸಹಜ. ಆದರೆ, ಎಲೆ ಮರೆಯಕಾಯಿಯಂತೆ ಸಾಹಿತ್ಯ ಕೃಷಿ ಮಾಡುತ್ತಿರುವ ಸರಳ ಸಜ್ಜನ ಕವಿ ಡಾ.ವಿ.ಸಿ.ಐರಸಂಗ ಅವರ ಕವಿತೆಗಳನ್ನು ಅವರ

Vijaya Karnataka 7 Jan 2019, 5:00 am
ಧಾರವಾಡ : ಪ್ರತಿಯೊಂದು ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಾರಾಟ ಮಳಿಗೆ ತೆರೆಯುವುದು ಸಹಜ. ಆದರೆ, ಎಲೆ ಮರೆಯಕಾಯಿಯಂತೆ ಸಾಹಿತ್ಯ ಕೃಷಿ ಮಾಡುತ್ತಿರುವ ಸರಳ ಸಜ್ಜನ ಕವಿ ಡಾ.ವಿ.ಸಿ.ಐರಸಂಗ ಅವರ ಕವಿತೆಗಳನ್ನು ಅವರ ಅಭಿಮಾನಿಯೊಬ್ಬ ಅವರ ಮಾದರಿಯಲ್ಲಿಯೇ ಸೈಕಲ್‌ ಮೇಲೆ ಸಂಚರಿಸುತ್ತ ಪುಸ್ತಕ ಮಾರಾಟ ಮಾಡುತ್ತ ಗಮನಸೆಳೆದರು.
Vijaya Karnataka Web book


ಈ ದೃಶ್ಯ ಸಮ್ಮೇಳನದಲ್ಲಿ ಸಾಹಿತ್ಯಾಭಿಮಾನಿಗಳ ಅಭಿಮಾನ ಹೆಚ್ಚಿಸಿತು. ಕಳೆದ ಒಂದೂವರೆ ವರ್ಷದ ಹಿಂದೆ ಧಾರವಾಡದ ಕಾರ್ಯಕ್ರಮವೊಂದರಲ್ಲಿ ಸೈಕಲ್‌ನಲ್ಲಿ ಪುಸ್ತಕಗಳನ್ನಿಟ್ಟುಕೊಂಡು ಮಾರಾಟ ಮಾಡುವ ಜತೆಗೆ ಕವಿತೆಗಳನ್ನು ಓದುವಂತೆ ಕೋರುತ್ತಿದ್ದ ದೃಶ್ಯ ಪಿಎಚ್‌.ಡಿ ಪದವಿ ಅಧ್ಯಯನ ಮಾಡುತ್ತಿರುವ ಹುಬ್ಬಳ್ಳಿಯ ಶಾಂತಿನಿಕೇತನ ಬಡಾವಣೆಯ ನಿವಾಸಿ ಬಸವರಾಜ ಗೋಕಾವಿ ಗಮನ ಸೆಳೆದಿತ್ತು. ಆ ವೇಳೆ ಕವಿ ಡಾ. ವಿ.ಸಿ. ಐರಸಂಗ ಅವರ ಬಗ್ಗೆ ಕೇಳಿ ತಿಳಿದುಕೊಂಡ ಈ ಯುವಕ ಅವರಿಂದ ಪ್ರೇರಣೆಗೊಂಡು ಅಂದಿನಿಂದಲೇ ಅವರು ರಚಿಸಿದ ಎಲ್ಲ ಕಾವ್ಯಗಳನ್ನು ಓದಿ ತಿಳಿದುಕೊಳ್ಳುವ ಪ್ರಯತ್ನ ಮಾಡುವ ಜತೆಗೆ ಅವರ ಕವಿತೆಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಅಷ್ಟೇ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ.

ಸಮ್ಮೇಳನದಲ್ಲಿ ಐರಸಂಗ ಅವರ ಕವಿತೆಗಳನ್ನು ಸೈಕನಲ್ಲಿಟ್ಟುಕೊಂಡು ಡಾ. ಐರಸಂಗ ಅವರ ''ಸಂಚಾರಿ ಪುಸ್ತಕ ಮೇಳ'' ಎಂಬ ಹಣೆಬರಹ ಅಡಿಯಲ್ಲಿಯೇ 200ಕ್ಕೂ ಅಧಿಕ ಪುಸ್ತಕಗಳನ್ನು ಮಾರಾಟ ಮಾಡಿದರು.ಅನೇಕರು ಡಾ. ಐರಸಂಗ ಅವರ ಅಭಿಮಾನಿಗಳು ಅವರ ಕವಿತೆಗಳ ಬಗ್ಗೆ ಮಾಹಿತಿ ಪಡೆದರು.
ಫೋನ್‌ ಸಂಖ್ಯೆ ಸಂಗ್ರಹ

ಕವಿ ಡಾ.ವಿ.ಸಿ.ಐರಸಂಗ ಅವರು ಪುಸ್ತಕ ಖರೀದಿಸಿ ಓದುಗರಿಗೆ ಧನ್ಯವಾದ ಅರ್ಪಿಸಬೇಕು ಎಂಬ ಅಭಿಪ್ರಾಯವನ್ನು ಬಸವರಾಜ ಗೋಕಾವಿ ಬಳಿ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪುಸ್ತಕ ಖರೀದಿಸಿದ ಅವರ ಅಭಿಮಾನಿಗಳ ಫೋನ್‌ ನಂಬರ್‌ನ್ನು ಸಹ ಬಸವರಾಜ ಅವರು ಸಂಗ್ರಹಿಸಿದರು.

ಬಸವರಾಜ ಈಗಾಗಲೇ ಏಳೆಂಟು ಜನ ಸಾಧಕರ ಕಿರು ಚಿತ್ರ ನಿರ್ಮಿಸಿ ಲೈಫ್‌ ಆಫ್‌ ಸಾಧಕ ಹೆಸರಿನಡಿ ''ಮಿಡಿಯಾ ಮೈಂಡ್‌ 24*7'' ಯುಟ್ಯೂಬ್‌ನಲ್ಲಿ ಅಪಲೋಡ್‌ ಮಾಡುತ್ತಿದ್ದಾರೆ. ಅದರಂತೆ ಈಗಾಗಲೇ ಡಾ.ವಿ.ಸಿ. ಐರಸಂಗ ಅವರ 45 ನಿಮಿಷದ ಕಿರುಚಿತ್ರ ನಿರ್ಮಿಸಿ ಹರಿಬಿಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ