ಆ್ಯಪ್ನಗರ

ಎಂಬಿ ಪಾಟೀಲರನ್ನು ನಿರ್ಲಕ್ಷ್ಯ ಮಾಡಲು ನಿರ್ಧರಿಸಿದ್ದೇವೆ: ಶಾಮನೂರು ಶಿವಶಂಕರಪ್ಪ

ಎಂಬಿ ಪಾಟೀಲ್‌ನನ್ನು ನಿರ್ಲಕ್ಷ್ಯ ಮಾಡಿ ಬಿಡಬೇಕು ಎಂದು ನಾವೆಲ್ಲ ನಿರ್ಧರಿಸಿದ್ದೇವೆ. ನಾನು ಹಿರಿಯನಾಗಿ ಮಾತನಾಡಿ ಕೆಲವು ಸಲಹೆ ಹೇಳಿದಾಗ ಸುಧಾರಿಸಿಕೊಳ್ಳಬೇಕಿತ್ತು ಎಂದಿದ್ದಾರೆ ಶಾಮನೂರು ಶಿವಶಂಕರಪ್ಪ.

Vijaya Karnataka Web 14 Jan 2019, 7:28 pm
ಧಾರವಾಡ: ಗೃಹ ಸಚಿವ ಎಂ.ಬಿ. ಪಾಟೀಲ್‌ ಮತ್ತು ಶಾಮನೂರ ಶಿವಶಂಕರಪ್ಪ ನಡುವಿನ ವಾಕ್ಸಮರ ಮತ್ತೆ ಮುಂದುವರಿದಿದೆ.
Vijaya Karnataka Web ಶಾಮನೂರು ಶಿವಶಂಕರಪ್ಪ
ಶಾಮನೂರು ಶಿವಶಂಕರಪ್ಪ


ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಮನೂರು ಶಿವಶಂಕರಪ್ಪ, ಗೃಹ ಸಚಿವ ಎಂಬಿ ಪಾಟೀಲ್‌ ವಿರುದ್ಧ ಕಿಡಿಕಾರಿದ್ದಾರೆ.

ಎಂಬಿ ಪಾಟೀಲ್‌ಗೆ ಕೆಲವು ವಿಚಾರಗಳು ಗೊತ್ತೇ ಇಲ್ಲ. ಆತ ಕಿರಿಯವ. ಅದಕ್ಕೆ ಹೀಗೆಲ್ಲ ಮಾತನಾಡುತ್ತಾನೆ ಎಂದು ಶಿವಶಂಕರಪ್ಪ ತಿಳಿಸಿದ್ದಾರೆ.

ಆತನನ್ನು ನಿರ್ಲಕ್ಷ್ಯ ಮಾಡಿ ಬಿಡಬೇಕು ಎಂದು ನಾವೆಲ್ಲ ನಿರ್ಧರಿಸಿದ್ದೇವೆ. ನಾನು ಹಿರಿಯನಾಗಿ ಮಾತನಾಡಿ ಕೆಲವು ಸಲಹೆ ಹೇಳಿದಾಗ ಸುಧಾರಿಸಿಕೊಳ್ಳಬೇಕಿತ್ತು ಎಂದಿದ್ದಾರೆ.

ಹಿಂದೆ ಅವರೇನಾಗಿದ್ದರು ಎಂದು ಗೊತ್ತಾ? ನಾನು ಮತ್ತು ಪ್ರಭಾಕರ ಕೋರಿ ಸಾಕಷ್ಟು ಸಹಾಯ ಮಾಡಿದ್ದೇನೆ. ಅದನ್ನೆಲ್ಲ ಆತ ಮರೆತು ಬಿಟ್ಟಿದ್ದಾನೆ. ಅದನ್ನು ಮತ್ತೆ ಹೇಳುವ ಗೋಜಿಗೆ ಹೋಗಲ್ಲ ಎಂದು ಹೇಳಿದ್ದಾರೆ.

ನಾನು ಆ ಬಗ್ಗೆ ಮಾತನಾಡಬಾರದು ಅಂತಾ ವಿಷಯ ಕ್ಲೋಸ್ ಮಾಡಿದ್ದೇವೆ. ನನಗೆ ಸಚಿವ ಸ್ಥಾನ ಏನೂ ಬೇಕಾಗಿಲ್ಲ, ಬಿಜೆಪಿಯವರಿಂದ ಏನೂ ಆಗುವುದಿಲ್ಲ. ಸುಮ್ಮನೇ ಅವರು ಹೇಳ್ತಾ ಇರುತಾರಷ್ಟೇ. ನಮ್ಮ ಪಕ್ಷದಿಂದ ಯಾರೂ ಹೋಗೋದಿಲ್ಲ ಎಂದು ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ