ಆ್ಯಪ್ನಗರ

ಮೂಜಗು ಜತೆ ಶಾ ಕುಶಲೋಪರಿ

ಹುಬ್ಬಳ್ಳಿ : ಇಲ್ಲಿಯ ಮೂರುಸಾವಿರಮಠಕ್ಕೆ ಗುರುವಾರ ಭೇಟಿ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕರ್ತೃ ಗದ್ದುಗೆಗೆ ತೆರಳಿ ಆಶೀರ್ವಾದ ಪಡೆದರು. ಅಲ್ಲದೇ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಯೊಂದಿಗೆ ಅರ್ಧ ಗಂಟೆ ಕುಶಲೋಪರಿ ನಡೆಸಿದರು.

Vijaya Karnataka 13 Apr 2018, 5:00 am
ಹುಬ್ಬಳ್ಳಿ : ಇಲ್ಲಿಯ ಮೂರುಸಾವಿರಮಠಕ್ಕೆ ಗುರುವಾರ ಭೇಟಿ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕರ್ತೃ ಗದ್ದುಗೆಗೆ ತೆರಳಿ ಆಶೀರ್ವಾದ ಪಡೆದರು. ಅಲ್ಲದೇ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಯೊಂದಿಗೆ ಅರ್ಧ ಗಂಟೆ ಕುಶಲೋಪರಿ ನಡೆಸಿದರು.
Vijaya Karnataka Web shaw greetings with the nose
ಮೂಜಗು ಜತೆ ಶಾ ಕುಶಲೋಪರಿ


ಇದೇ ವೇಳೆ ಮಠದ ವತಿಯಿಂದ ಅಮಿತ್‌ ಶಾ ಅವರನ್ನು ಸನ್ಮಾನಿಸಲಾಯಿತು. ನಂತರ ಅಮಿತ್‌ ಶಾ ಮೂರು ಸಾವಿರಮಠದ ಸ್ವಾಮೀಜಿಯನ್ನು ಸನ್ಮಾನಿಸಿದರು. ಹಾವೇರಿ ಹುಕ್ಕೇರಿಮಠದ ಶಿವಬಸವ ಸ್ವಾಮೀಜಿ, ಮೂರು ಸಾವಿರಮಠದ ಸ್ವಾಮೀಜಿ ಮೂಲಕ ಶಾ ಭಾವಚಿತ್ರದ ರಬ್ಬರ ಸ್ಟಾಂಪ್‌ ಪೆನ್‌ನ್ನು ಅಮಿತ ಶಾಗೆ ನೀಡಿ ಗೌರವಿಸಿದರು.

ಬಿಜೆಪಿ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌, ಸಂಸದ ಪ್ರಹ್ಲಾದ ಜೋಶಿ, ಪ್ರದೀಪ ಶೆಟ್ಟರ್‌, ಶಂಕರಪಾಟೀಲ ಮುನೇನಕೊಪ್ಪ, ಅರವಿಂದ ಬೆಲ್ಲದ, ಜಯತೀರ್ಥ ಕಟ್ಟಿ, ಮಹೇಶ ಟೆಂಗಿನಕಾಯಿ ಸೇರಿದಂತೆ ಇತರರು ಇದ್ದರು.

ಹಿಂದೆ ಬಿದ್ದ ಬಿಎಸ್‌ವೈ

ಚುನಾವಣಾ ಚಾಣಕ್ಯನನ್ನು ಬೆನ್ನತ್ತಲು ಆಗದ ಬಿಎಸ್‌ವೈ ಮೆಲ್ಲಗೆ ಹೆಜ್ಜೆ ಹಾಕುತ್ತಾ ಮಠ ಸೇರಿದರು. ಬಹುತೇಕ ಬಿಜೆಪಿ ಮುಖಂಡರು ಅಮಿತ್‌ ಶಾ ಅವರ ಬೆನ್ನತ್ತಿ ಓಡಾಡುತ್ತಿದ್ದರು. ಆದರೆ, ಇವರ ಬೆನ್ನತ್ತಿ ಓಡಾಡುವಲ್ಲಿ ಬಿ.ಎಸ್‌. ಯಡಿಯೂರಪ್ಪ ಆಗದೆ ಹಿಂದೆ ಬಿದ್ದಿದ್ದರು. ನಂತರ ಅಮಿತ್‌ ಶಾ ಅವರನ್ನು ಕರೆದುಕೊಂಡು ಮುಂದೆ ಹೋಗುತ್ತಿದ್ದ ದೃಶ್ಯ ಕಂಡು ಬಂದಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ