ಆ್ಯಪ್ನಗರ

ಕುಂದಗೋಳ ಉಪಚುನಾವಣೆಯದತ್ತ ದೃಷ್ಟಿ ನೆಟ್ಟ ಶೆಟ್ಟರ್‌

ಹುಬ್ಬಳ್ಳಿ : ಲೋಕಸಭಾ ಚುನಾವಣೆ ಮುಗಿದರೂ ರಿಲ್ಯಾಕ್ಸ್‌ ಮೂಡಿಗೆ ಜಾರದ ಮಾಜಿ ಸಿಎಂ ಹಾಗೂ ಬಳ್ಳಾರಿ ಕ್ಷೇತ್ರದ ಉಸ್ತುವಾರಿ ಜಗದೀಶ ಶೆಟ್ಟರ್‌, ಬುಧವಾರ ಬೆಳಗ್ಗೆಯಿಂದಲೇ ಲೋಕಸಭೆಗೆ ನಡೆದ ಮತದಾನ ಕುರಿತು ಮುಖಂಡರ, ಕಾರ್ಯಕರ್ತರ ಜತೆಗಿನ ಸಮಾಲೋಚನೆ, ಕುಂದಗೋಳ ಉಪ ಚುನಾವಣಾ ಪ್ರಕ್ರಿಯೆ ಕುರಿತು ಮಾತುಕತೆ ನಡೆಸಿದರು.

Vijaya Karnataka 25 Apr 2019, 5:00 am
ಹುಬ್ಬಳ್ಳಿ : ಲೋಕಸಭಾ ಚುನಾವಣೆ ಮುಗಿದರೂ ರಿಲ್ಯಾಕ್ಸ್‌ ಮೂಡಿಗೆ ಜಾರದ ಮಾಜಿ ಸಿಎಂ ಹಾಗೂ ಬಳ್ಳಾರಿ ಕ್ಷೇತ್ರದ ಉಸ್ತುವಾರಿ ಜಗದೀಶ ಶೆಟ್ಟರ್‌, ಬುಧವಾರ ಬೆಳಗ್ಗೆಯಿಂದಲೇ ಲೋಕಸಭೆಗೆ ನಡೆದ ಮತದಾನ ಕುರಿತು ಮುಖಂಡರ, ಕಾರ್ಯಕರ್ತರ ಜತೆಗಿನ ಸಮಾಲೋಚನೆ, ಕುಂದಗೋಳ ಉಪ ಚುನಾವಣಾ ಪ್ರಕ್ರಿಯೆ ಕುರಿತು ಮಾತುಕತೆ ನಡೆಸಿದರು.
Vijaya Karnataka Web DRW-24MANJU3A
ಹುಬ್ಬಳ್ಳಿ ನಿವಾಸದಲ್ಲಿ ಬುಧವಾರ ದಿನ ಪತ್ರಿಕೆ ಓದುತ್ತಿರುವ ಮಾಜಿ ಸಿಎಂ ಜಗದೀಶ ಶೆಟ್ಟರ್‌.


ಲೋಕಸಭೆ ಚುನಾವಣೆ ವೇಳೆ ಬಳ್ಳಾರಿ ಉಸ್ತುವಾರಿ ನೋಡಿಕೊಳ್ಳುವುದರ ಜತೆಗೆ ಸ್ಟಾರ್‌ ಕಾಂಪೇನರ್‌ ಆಗಿ ರಾಜ್ಯದ್ಯಾಂತ ಪ್ರವಾಸ ಮಾಡಿ ಬಂದಿದ್ದರು. ಆದರೂ ಮಂಗಳವಾರ ಮತದಾನ ಮುಗಿದ ನಂತರವೂ ಬುಧವಾರ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ರಾಜಕಾರಣಿಗಳಿಗೆ ರಿಲ್ಯಾಕ್ಸ್‌ ಎನ್ನುವುದು ಇರುವುದಿಲ್ಲ ಎಂಬುದನ್ನು ಸಾಬೀತುಪಡಿಸಿದರು.

ಬುಧವಾರ ಬೆಳಗ್ಗೆ ಎಂದಿನಂತೆ ಎದ್ದು ಪತ್ನಿಯೊಂದಿಗೆ ವಾಯುವಿಹಾರ ನಡೆಸಿದ ಶೆಟ್ಟರ್‌ ಅವರು, ದಿನ ಪತ್ರಿಕೆಗಳನ್ನು ಓದಿ, ಸ್ನಾನ ಮಾಡಿ ಉಪಹಾರ ಸೇವಿಸಿದ ನಂತರ ತಮ್ಮ ನಿವಾಸಕ್ಕೆ ಆಗಮಿಸಿದ ಕಾರ್ಯಕರ್ತರೊಂದಿಗೆ ಮತದಾನ ಕುರಿತು ಮಾಹಿತಿ ಪಡೆದರು. ಅದಾದ ನಂತರ ನಗರದಲ್ಲಿ ನಡೆದ ಎರಡ್ಮೂರು ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಸಂಜೆ 4 ಕ್ಕೆ ಬಿಜೆಪಿ ಜಿಲ್ಲಾ ಗ್ರಾಮೀಣ ಘಟಕದ ಸಭೆಯಲ್ಲಿ ಪಾಲ್ಗೊಂಡು ಕುಂದಗೋಳ ಉಪಚುನಾವಣೆ ಕುರಿತು ಚರ್ಚೆ ನಡೆಸಿದರು. ಅದಾದನಂತರ ಬೆಂಗಳೂರಿನಲ್ಲಿ ಗುರುವಾರ ನಡೆಯಲಿರುವ ಕೋರ್‌ ಕಮೀಟಿ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ವಿಮಾನ ಮೂಲಕ ಬೆಂಗಳೂರಿಗೆ ತೆರಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ