ಆ್ಯಪ್ನಗರ

ಶಿವಸೇನೆ ಕೇಸರಿ ಒಕ್ಕೂಟ ಪ್ರತಿಭಟನೆ

ಹುಬ್ಬಳ್ಳಿ : ಕಾಶ್ಮೀರಿ ವಿದ್ಯಾರ್ಥಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣದ ತನಿಖೆಯಲ್ಲಿಪೊಲೀಸರು ನಿರ್ಲಕ್ಷ್ಯ ವಹಿಸಿದ್ದು, ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಶಿವಸೇನೆ ಹಾಗೂ ರಾಷ್ಟ್ರೀಯ ಕೇಸರಿ ಒಕ್ಕೂಟ ಶನಿವಾರ ಪ್ರತಿಭಟನೆ ನಡೆಸಿತು.

Vijaya Karnataka 19 Jun 2020, 5:00 am
ಹುಬ್ಬಳ್ಳಿ : ಕಾಶ್ಮೀರಿ ವಿದ್ಯಾರ್ಥಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣದ ತನಿಖೆಯಲ್ಲಿಪೊಲೀಸರು ನಿರ್ಲಕ್ಷ್ಯ ವಹಿಸಿದ್ದು, ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಶಿವಸೇನೆ ಹಾಗೂ ರಾಷ್ಟ್ರೀಯ ಕೇಸರಿ ಒಕ್ಕೂಟ ಶನಿವಾರ ಪ್ರತಿಭಟನೆ ನಡೆಸಿತು.
Vijaya Karnataka Web shiv sena protesting saffron union
ಶಿವಸೇನೆ ಕೇಸರಿ ಒಕ್ಕೂಟ ಪ್ರತಿಭಟನೆ


ಇಲ್ಲಿಯ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಪಾಕಿಸ್ತಾನ ಪರ ಘೋಷಣೆ ಕೂಗಿದ ಮೂವರು ವಿದ್ಯಾರ್ಥಿಗಳಿಗೆ ಜಾಮೀನು ನೀಡಿರುವುದನ್ನು ಮರು ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.

ದೇಶದ್ರೋಹಿ ಪ್ರಕರಣ ದಾಖಲಾಗಿದ್ದರೂ, ಪೊಲೀಸರು ಸರಿಯಾದ ತನಿಖೆ ಕೈಗೊಂಡಿಲ್ಲ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ಪಾಕಿಸ್ತಾನದ ಪರ ಘೋಷಣೆ ಕೂಗಿ ದೇಶಕ್ಕೆ ದ್ರೋಹ ಮಾಡಿದ್ದು, ಭಾರತೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಕೂಡಲೇ ಜಾಮೀನು ನೀಡಿ ಬಿಡುಗಡೆ ಮಾಡಿರುವವರನ್ನು ಬಂಧಿಸಿ ತಕ್ಕ ಶಿಕ್ಷೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿಕುಮಾರ ಹಜಾರೆ, ವಿನಾಯಕ ಮಾಳದಕರ, ಶಿವುಕುಮಾರ ಅಪ್ಪಾಜಿ, ಶಿವು ಗೋಕಾವಿ, ಸಂಜು ಬುಗಡಿ, ಸಂಜು ಮಾಳಗಿ, ಆನಂದ ದಲಭಂಜನ, ಪುಷ್ಪರಾಜ್‌ ಹಳ್ಳಿ, ಎಲೀಶ ಮಾಳೇಕರ ಸೇರಿದಂತೆ ಇತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ