ಆ್ಯಪ್ನಗರ

ಶಿವಸೇನೆಯವರದ್ದು ಜನಾದೇಶದ ವಿರುದ್ಧ ನಡವಳಿಕೆ: ಜಗದೀಶ್‌ ಶೆಟ್ಟರ್‌

"ಶಿವಸೇನೆಯ ಪರಿಸ್ಥಿತಿಯೂ ಕಾಂಗ್ರೆಸ್ -ಜೆಡಿಎಸ್ ಸಮಿಶ್ರ ಸರಕಾರದ ಪರಿಸ್ಥಿತಿ ಆಗಲಿದೆ. ಅಧಿಕಾರದ ಆಸೆಯ ಸಲುವಾಗಿ ಶಿವಸೇನೆ ಬೇರೆ ಪಕ್ಷದ ಜೊತೆ ಹೋಗುತ್ತಿದೆ. ತಾತ್ಕಾಲಿಕವಾಗಿ ವಿರೋಧಿಗಳ ಜೊತೆ ಕೈ ಜೋಡಿಸಿದ್ರೆ ಕರ್ನಾಟಕದಲ್ಲಿ ಆದ ಪರಸ್ಥಿತಿ ಸೇನೆಗೂ ಆಗಲಿದೆ," - ಜಗದೀಶ್‌ ಶೆಟ್ಟರ್‌.

Vijaya Karnataka Web 12 Nov 2019, 3:54 pm
ಹುಬ್ಬಳ್ಳಿ: ಮಹಾರಾಷ್ಟ್ರದಲ್ಲಿ ಶಿವಸೇನೆಯವರದ್ದು ಜನಾದೇಶದ ವಿರುದ್ಧ ನಡವಳಿಕೆ. ಶಿವಸೇನೆಯವರಿಗೆ ತಾವೇ ಮುಖ್ಯಮಂತ್ರಿ ಆಗಬೇಕೆನ್ನುವ ಹಠ. ಅವರಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂಬುದಾಗಿ ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದರು.
Vijaya Karnataka Web Jagadish Shettar


ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಮಹಾರಾಷ್ಟ್ರದಲ್ಲಿ ಅತಂತ್ರ ಪರಿಸ್ಥಿತಿ‌ ಇದೆ. ಬಿಜೆಪಿ ಮತ್ತು ಶಿವಸೇನೆ ಕೂಡಿ ಚುನಾವಣೆ ಎದುರಿಸಿದ್ದವು. ಆದರೆ ಅಧಿಕಾರ ದಾಹದಿಂದಾಗಿ ಶಿವಸೇನೆ ಬಿಜೆಪಿಗೆ ಬೆಂಬಲ‌ಕೊಡುತ್ತಿಲ್ಲ‌,” ಎಂದರು.

ಮಹಾರಾಷ್ಟ್ರದಲ್ಲಿ ಅನಿವಾರ್ಯ ಕಾರಣದಿಂದಾಗಿ ಸರಕಾರ ರಚನೆಯಾಗುತ್ತಿಲ್ಲ‌. ರಾಜ್ಯಪಾಲರು ಎಲ್ಲಾ ಪಕ್ಷಗಳನ್ನೂ ಸರಕಾರ ರಚನೆಗೆ ಆಹ್ವಾನಿಸಿದ್ದರು. ಸಂವಿಧಾನದ ಪ್ರಕಾರ ಎಲ್ಲಾ ಪ್ರಯತ್ನ ಮಾಡಿದಾಗಲೂ ಸರ್ಕಾರ ರಚನೆಯಾಗಿಲ್ಲ.ಹೀಗಾಗಿ ರಾಷ್ಟ್ರಪತಿ ಆಡಳಿತ ಬರುವುದು ಸಹಜ ಎಂದು ಹೇಳಿದ ಶೆಟ್ಟರ್‌, “ಶಿವಸೇನೆ, ಕಾಂಗ್ರೆಸ್, ಎನ್‌ಸಿಪಿ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು,” ಎಂದು ತಿಳಿಸಿದರು.

ಶಿವಸೇನೆಯ ಪರಿಸ್ಥಿತಿಯೂ ಕಾಂಗ್ರೆಸ್ -ಜೆಡಿಎಸ್ ಸಮಿಶ್ರ ಸರಕಾರದ ಪರಿಸ್ಥಿತಿ ಆಗಲಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ದೊಡ್ಡ ಪಕ್ಷ. ಅಧಿಕಾರದ ಆಸೆಯ ಸಲುವಾಗಿ ಶಿವಸೇನೆ ಬೇರೆ ಪಕ್ಷದ ಜೊತೆ ಹೋಗುತ್ತಿದೆ. ತಾತ್ಕಾಲಿಕವಾಗಿ ವಿರೋಧಿಗಳ ಜೊತೆ ಕೈ ಜೋಡಿಸಿದ್ರೆ ಕರ್ನಾಟಕದಲ್ಲಿ ಆದ ಪರಸ್ಥಿತಿ ಶಿವಸೇನೆಗೂ ಆಗಲಿದೆ ಎಂಬುದಾಗಿ ಅವರು ವಿಶ್ಲೇಷಿಸಿದರು.

ಇದೇ ವೇಳೆ ಅವರು ಸ್ಥಳೀಯ ಸಂಸ್ಥೆ ಚುನಾವಣೆಯು ಉಪಚುನಾವಣೆ ಮೇಲೆ ಪ್ರಭಾವ ಬೀರುವುದಿಲ್ಲ. ಸ್ಥಳೀಯ ಸಂಸ್ಥೆಯ ಚುನಾವಣೆಯೇ ಬೇರೆ, ಉಪಚುನಾವಣೆಯೇ ಬೇರೆ. ಒಂದು ಚುನಾವಣೆ ಮತ್ತೊಂದು ಚುನಾವಣೆ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಮಾಜಿ ಸಚಿವ ಕೆ‌ಜೆ ಜಾರ್ಜ್ ವಿರುದ್ಧ ದೂರು ದಾಖಲಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಕಾನೂನು ಪ್ರಕಾರ ಕ್ರಮ ಆಗುತ್ತದೆ. ಜಾರ್ಜ್ ಇರಲಿ ಇನ್ಯಾರೇ ಇರಲಿ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ,” ಎಂದು ಹೇಳಿದರು.

ನಾಳೆ ಅನರ್ಹ ಶಾಸಕರ ತೀರ್ಪು ಹೊರಬೀಳಲಿದ್ದು, ಇದರ ಮೇಲೆ ರಾಜ್ಯದ ಮುಂದಿನ ರಾಜಕಾರಣ ನಿರ್ಧಾರವಾಗಲಿದೆ. ತೀರ್ಪು ಬರುವವರೆಗೂ ಕಾದು‌ನೋಡಬೇಕಿದೆ ಎಂಬುದಾಗಿ ಶೆಟ್ಟರ್ ಇದೇ ಸಂದರ್ಭದಲ್ಲಿ ವಿವರಿಸಿದರು.

ಬಿಜೆಪಿ ನಾಯಕರ ಸಿದ್ದರಾಮಯ್ಯ ಭೇಟಿ ಬಗ್ಗೆ ತಾವೇನೂ ಪ್ರತಿಕ್ರಿಯಿಸುವುದಿಲ್ಲ ಎಂದ ಅವರು, “ಪಕ್ಷದಲ್ಲಿರುವರಿಗೆ ಒಳ್ಳೆಯ ಅವಕಾಶವಿದೆ. ಆತುರದ ನಿರ್ಧಾರ ತಗೆದುಕೊಳ್ಳುವವರಿಗೆ ಒಳ್ಳೆಯದಾಗುವುದಿಲ್ಲ. ಸಿದ್ದರಾಮಯ್ಯ ಅವರು ಸರ್ಕಾರ ಅತಂತ್ರ ಮಾಡುವ ಕೆಲಸ ಮಾಡುತ್ತಿದ್ದಾರೆ,” ಎಂದು ದೂರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ