ಆ್ಯಪ್ನಗರ

ಮನ ಶುದ್ಧಿಗೆ ಶಿವನಾಮಸ್ಮರಣೆ ಸುಲಭ ಸಾಧನ

ಹುಬ್ಬಳ್ಳಿ : ಅಶುದ್ಧವಾದ ಮನಸ್ಸನ್ನು ಶುದ್ಧಗೊಳಿಸುವ ಸುಲಭ ಸಾಧನವೆಂದರೆ ಶಿವನಾಮಸ್ಮರಣೆ ಎಂಬ ವಿಚಾರವನ್ನು ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರು ಹೇಳಿದರು.

Vijaya Karnataka 26 Jan 2019, 5:00 am
ಹುಬ್ಬಳ್ಳಿ : ಅಶುದ್ಧವಾದ ಮನಸ್ಸನ್ನು ಶುದ್ಧಗೊಳಿಸುವ ಸುಲಭ ಸಾಧನವೆಂದರೆ ಶಿವನಾಮಸ್ಮರಣೆ ಎಂಬ ವಿಚಾರವನ್ನು ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರು ಹೇಳಿದರು.
Vijaya Karnataka Web HBL-2501-2-3-VARUR-HBL 25
ವರೂರಿನ ಶ್ರೀ ವೀರೇಶ್ವರ ಶಾಂತಾಶ್ರಮದಲ್ಲಿ ಲಿಂ.ವೀರೇಶ್ವರ ಶರಣರ ಶಿವಯೋಗ ಸಮಾಧಿಯ ಶತಮಾನೋತ್ಸವ ನಿಮಿತ್ತ ಹಮ್ಮಿಕೊಂಡ ಇ ಸಿದ್ಧಾಂತ ಶಿಖಾಮಣಿಯ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರು ಆಶೀರ್ವಚನ ನೀಡಿದರು.


ವರೂರಿನ ಶ್ರೀ ವೀರೇಶ್ವರ ಶಾಂತಾಶ್ರಮದಲ್ಲಿ ಲಿಂ.ವೀರೇಶ್ವರ ಶರಣರ ಶಿವಯೋಗ ಸಮಾಧಿಯ ಶತಮಾನೋತ್ಸವ ನಿಮಿತ್ತ ಹಮ್ಮಿಕೊಂಡ ಇ ಸಿದ್ಧಾಂತ ಶಿಖಾಮಣಿಯ ಆಧ್ಯಾತ್ಮಿಕ ಆಶೀರ್ವಚನದಲ್ಲಿ ಪಿಂಡಸ್ಥಲ ವಿಚಾರ ಕುರಿತು ಮಾತನಾಡಿದರು.

ಶಿವನ ಕಡೆಗೆ ಹೊರಟ ಸಾಧಕನ ಮೊದಲು ಹೆಜ್ಜೆಯೇ ಮನಸ್ಸಿನ ಶುದ್ಧಿ. ನಾವು ದಿನಾಲು ಮಾತನಾಡುತ್ತಿರುವ ನಿಶಿದ್ಧರ್ಯದಿಂದಾಗಿ ಮನುಷ್ಯನ ಮನಸ್ಸು ಮಲಿನವಾಗುತ್ತ ಹೋಗುವುದು. ವಸ್ತ್ರವನ್ನು ಶುದ್ಧಗೊಳಿಸಲು ಸಾಬೂನನ್ನು ಬಳಸುತ್ತೇವೆ. ತಲೆಯನ್ನು ಶುದ್ಧಗೊಳಿಸಲು ಶೀಗೆಕಾಯಿಯನ್ನು ಬಳಸುತ್ತೇವೆ. ಆದರೆ ಮನಸ್ಸನ್ನು ಶುದ್ಧಗೊಳಿಸುವ ಭೌತಿಕ ಸಾಮಗ್ರಿ ಯಾವುದೂ ಇಲ್ಲ. ಆದರೆ ಪರಮ ಪಾವನವಾದ ಶಿವನಾಮ ಸ್ಮರಣೆಯನ್ನು ಮಾಡಿದರೆ ಮನಸ್ಸು ಕ್ರಮೇಣ ಶುದ್ಧವಾಗುತ್ತಾ ಒಂದು ದಿನ ಪೂರ್ಣ ಶುದ್ಧಗೊಳ್ಳುವುದು. ಕಾರಣ ಪ್ರತಿಯೊಬ್ಬರೂ ಶಿವನಾಮ ಸ್ಮರಣೆ ಮಾಡುತ್ತಾ ಮನಸ್ಸನ್ನು ಶುದ್ಧಗೊಳಿಸಿಕೊಳ್ಳಬೇಕು ಎಂದರು.

ನೀಲಕಂಠ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಳ್ಳ ಗ್ರಾಮದ ಶಿವಸಿದ್ದರಾಮ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ನವನಗರದ ಕಾಶೀ ಖಾಸಾ ಮಠದ ರಾಜಶೇಖರ ಶಿವಾಚಾರ್ಯರು, ವಿರೂಪಾಕ್ಷಯ್ಯ ಶರಣರು, ಸುತ್ತಲಿನ ಗ್ರಾಮದ ಸಾವಿರಾರು ಭಕ್ತರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ