ಆ್ಯಪ್ನಗರ

ಶ್ರೀ ಕೃಷ್ಣ ಜನ್ಮೋತ್ಸವ

ಧಾರವಾಡ: ನಗರದ ಶ್ರೀ ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆಯಲ್ಲಿ ಶನಿವಾರ ಶ್ರೀ ಕೃಷ್ಣ ಜನ್ಮೋತ್ಸವವನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು.

Vijaya Karnataka 26 Aug 2019, 5:00 am
ಧಾರವಾಡ: ನಗರದ ಶ್ರೀ ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆಯಲ್ಲಿ ಶನಿವಾರ ಶ್ರೀ ಕೃಷ್ಣ ಜನ್ಮೋತ್ಸವವನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು.
Vijaya Karnataka Web shri krishna janmotsava
ಶ್ರೀ ಕೃಷ್ಣ ಜನ್ಮೋತ್ಸವ


ಈ ವೇಳೆ ವಸುಧಾ ಇನಾಂದಾರ ಮಾತನಾಡಿ, ಕೃಷ್ಣ ಹೇಗೆ ಬ್ರಹ್ಮಾಂಡಕ್ಕೆ ಜಗದ್ಗುರು ಆತನ ಲೀಲೆಗಳು ರಾಜಕೀಯ ನಡೆ-ನುಡಿಗಳು ಇಂದಿಗೂ ಸಮಾಜಕ್ಕೆ ಉಪಯುಕ್ತವಾಗಿವೆ ಎಂದು ತಿಳಿಸಿದರು.

ಡಾ. ಮಹೇಶಶಾಸ್ತ್ರೀ ಹಂಪಿಹೊಳಿ ಮಾತನಾಡಿ, ಕೃಷ್ಣನ ಚಾರಿತ್ರ್ಯದಿಂದ ಸಾಮಾನ್ಯ ಮನುಷ್ಯರು ಬಹಳ ವಿಷಯಗಳನ್ನು ತಿಳಿದುಕೊಳ್ಳುವದಿದೆ , ಭಗವದ್ಗೀತೆ ಜ್ಞಾನ ಸಂಪಾದೆ ಹೇಗೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಶಂಕರ ಭಜನಾ ಮಂಡಳಿಯವರಿಂದ ಶ್ರೀ ಕೃಷ್ಣ ಭಜನೆ, ಶ್ರೀಧರಶಾಸ್ತ್ರೀ ಇನಾಂದಾರ ಹಾಗೂ ಪೂರ್ಣಾನಂದ ಅವರಿಂದ ಶ್ರೀ ಕೃಷ್ಣ ಪೂಜೆ ಸಾಂಗವಾಗಿ ನೇರವೇರಿತು. ಎಲ್ಲ ವಿಪ್ರರಿಂದ ತೊಟ್ಟಿಲೋತ್ಸವ ಹಾಗೂ ಮಂತ್ರ ಪುಷ್ಪವು ಜರುಗಿತು. ಕೃಷ್ಣ ಬಾಗಲವಾಡಿ, ಆರ್‌.ಎಸ್‌.ಜೋಶಿ, ನಾಗೇಶಶಾಸ್ತ್ರೀ ಜೋಶಿ, ಚಂದ್ರಶೇಖರ, ಜೋಶಿ, ಚಿದಂಬರ ಇನಾಮತಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ