ಆ್ಯಪ್ನಗರ

ಸಿದ್ದರಾಮಯ್ಯ ಸಿಡಿ ಮಾಡಿಸುವುದ್ರಲ್ಲಿ ಎಕ್ಸಪರ್ಟ್: ಡಿಸಿಎಂ ಲಕ್ಷ್ಮಣ ಸವದಿ

ಸಿಎಂ ಯಡಿಯೂರಪ್ಪ ಆಡಿಯೋ ಸಿಡಿ ಮಾಡಿಸಿರುವುದು ಸಿದ್ದರಾಮಯ್ಯ ಎಂದು ಡಿಸಿಎಂ ಸವದಿ ಆರೋಪಿಸಿದ್ದಾರೆ. ಸಿದ್ದರಾಮಯ್ಯ ಸಿಡಿ ಮಾಡಿಸುವುದ್ರಲ್ಲಿ ಎಕ್ಸಪರ್ಟ್ ಎಂದೂ ಆರೋಪಿಸಿದ್ದಾರೆ. ಆಡಿಯೋಗೂ ಹೈಕಮಾಂಡಿಗೂ ಸಂಬಂಧವಿಲ್ಲ ಎಂದೂ ಹೇಳಿಕೊಂಡಿದ್ದಾರೆ.

Vijaya Karnataka Web 5 Nov 2019, 1:07 pm
ಹುಬ್ಬಳ್ಳಿ: ಸಿದ್ದರಾಮಯ್ಯನವರು ಸಿಡಿ ಮಾಡಿಸುವುದ್ರಲ್ಲಿ ಎಕ್ಸಪರ್ಟ್. ಸಿದ್ದರಾಮಯ್ಯ ಎರಡು ಬಾರಿ ಸಿಡಿ ಮಾಡಿಸಿದ ಉದಾಹರಣೆ ಇದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಆರೋಪಿಸಿದ್ದಾರೆ.
Vijaya Karnataka Web laxman savadi


ಸಿದ್ದರಾಮಯ್ಯಗೆ ನೊಬೆಲ್ ಅವಾರ್ಡ್ ನೀಡಬೇಕಂತೆ! ಯಾಕೆ ಗೊತ್ತಾ?

ಯಡಿಯೂರಪ್ಪ ಮಾತನಾಡಿರುವ ಆಡಿಯೋ ಸಿಡಿ ರಾಷ್ಟ್ರಾದ್ಯಂತ ಸುದ್ದಿ ಮಾಡುತ್ತಿದೆ. ಈ ಬಗ್ಗೆ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ ಸಿಡಿ ಬಿಡುಗಡೆ ಮಾಡಿಸಿರುವುದು ಸಿದ್ರಾಮಯ್ಯ ಎಂದು ಪರೋಕ್ಷವಾಗಿ ಆರೋಪಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಒಂದು ಬಾರಿ ಬಿಎಸ್‌ವೈ ಜೊತೆ ಲಿಂಗಾಯತರಿಲ್ಲ ಅನ್ನೋ ಆಡಿಯೋ ಮಾಡಿಸಿದ್ರು. ಇನ್ನೊಂದು ಧರ್ಮಸ್ಥಳದಲ್ಲಿ ಲೋಕಸಭಾ ಚುನಾವಣೆ ನಂತರ ಮೈತ್ರಿ ಸರ್ಕಾರ ಬೀಳಲಿದೆ ಅನ್ನೋ ಸಿಡಿ ಮಾಡಿಸಿದ್ರು. ಮೊದಲು ಸಿದ್ದರಾಮಯ್ಯನವರು ಸುಳ್ಳು ಹೇಳುವುದು ಬಿಡಲಿ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಿದ್ದರಾಮಯ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಯಡಿಯೂರಪ್ಪ ಮುಗಿಸಲು ಬಿಜೆಪಿಯವರಿಂದಲೇ ಪ್ರಯತ್ನ: ದಿನೇಶ್‌ ಗುಂಡೂರಾವ್‌

ಇನ್ನು, ಅನರ್ಹರ ಬಗ್ಗೆ ಹಗುರವಾಗಿ ಮಾತನಾಡಬಾರದೆಂದು ಸಿಎಂ ಯಡಿಯೂರಪ್ಪ ಹೇಳಿರುವುದು ನಿಜ. ಆದರೆ, ಯಡಿಯೂರಪ್ಪನವರು ಮಾತನಾಡಿರುವ ಆಡಿಯೋವನ್ನ ತಿರುಚಿ ಬಿಡುಗಡೆ ಮಾಡಲಾಗಿದೆ. ಬಿಜೆಪಿ ಸಭೆಯಲ್ಲಿ ಮೊಬೈಲ್‌ಗಳಿಗೆ ಅವಕಾಶ ಇತ್ತು ಎಂದೂ ಹುಬ್ಬಳ್ಳಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಆಡಿಯೋ ರೆಕಾರ್ಡ್ ಅನ್ನು ಕಟೀಲ್, ಲಕ್ಷ್ಮಣ ಸವದಿ ಇಲ್ಲಾ ಬೊಮ್ಮಾಯಿ ಮಗ ಮಾಡ್ಸಿರಬೇಕು: ಸಿದ್ದರಾಮಯ್ಯ

ಯಡಿಯೂರಪ್ಪ ಮಾತನಾಡಿರುವ ಆಡಿಯೋ ಲೀಕ್‌ ಘಟನೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ತನಿಖೆ ಮಾಡುತ್ತಿದ್ದಾರೆ. ತನಿಖೆಯ ನಂತರ ಯಾರು ಮಾಡಿದ್ದು ಯಾಕೆ ಮಾಡಿದ್ರು ಅನ್ನೋದು ಬಯಲಿಗೆ ಬರಲಿದೆ. ಆಡಿಯೋಗೂ ಹೈಕಮಾಂಡಿಗೂ ಸಂಬಂಧವಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಸಮರ್ಥಿಸಿಕೊಂಡಿದ್ದಾರೆ.

ಆಡಿಯೋ ಲೀಕ್ ಮಾಡಿದ್ಯಾರು?; ಸಿದ್ದು v/s ಕಟೀಲ್ ಟ್ವೀಟ್ ವಾರ್

ಇನ್ನೊಂದೆಡೆ, ನಾನು ಹೈಕಮಾಂಡ್ ಆದೇಶ ಪಾಲಿಸುವ ವ್ಯಕ್ತಿ ಎಂದ ಸವದಿ, ಹೈಕಮಾಂಡ್ ವಿಧಾನಸಭೆಗೆ ಸೂಚಿಸಿದ್ರೆ ವಿಧಾನಸಭೆ. ವಿಧಾನಪರಿಷತ್ಗೆ ಸೂಚಿಸಿದ್ರೆ ವಿಧಾನಪರಿಷತ್ಗೆ ಸ್ಪರ್ಧೆ ಮಾಡುವೆ. ಹೈಕಮಾಂಡ್ ಸೂಚಿಸಿದ ಹಾಗೆ ಕೇಳುವ ವ್ಯಕ್ತಿ ನಾನು ಎಂದೂ ಹುಬ್ಬಳ್ಳಿಯಲ್ಲಿ ರಾಜ್ಯ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ