ಆ್ಯಪ್ನಗರ

ಸಿದ್ಧರಾಮಯ್ಯನವರ ಸಾಧನೆಗಳೇ ಶ್ರೀ ರಕ್ಷೆ: ಸತೀಶ್‌

ಕುಂದಗೋಳ : ಹಿಂದಿನ 5 ವರ್ಷದ ಸಿದ್ದರಾಮಯ್ಯನವರ ಸರಕಾರದ ಸಾಧನೆಗಳೇ ನಮಗೆ ಶ್ರೀರಕ್ಷೆ. ಕೇವಲ ಆಶ್ವಾಸನೆಗೆ ಸೀಮಿತವಾದ ಮೋದಿ ಸರಕಾರದಲ್ಲಿ ಏನೂ ಆಗಿಲ್ಲ. ನಮ್ಮ ಸರಕಾರ ಸಾಕಷ್ಟು ಅಭಿವೃದ್ಧಿಪರ ಕಾರ್ಯಮಾಡಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

Vijaya Karnataka 12 May 2019, 5:00 am
ಕುಂದಗೋಳ : ಹಿಂದಿನ 5 ವರ್ಷದ ಸಿದ್ದರಾಮಯ್ಯನವರ ಸರಕಾರದ ಸಾಧನೆಗಳೇ ನಮಗೆ ಶ್ರೀರಕ್ಷೆ. ಕೇವಲ ಆಶ್ವಾಸನೆಗೆ ಸೀಮಿತವಾದ ಮೋದಿ ಸರಕಾರದಲ್ಲಿ ಏನೂ ಆಗಿಲ್ಲ. ನಮ್ಮ ಸರಕಾರ ಸಾಕಷ್ಟು ಅಭಿವೃದ್ಧಿಪರ ಕಾರ್ಯಮಾಡಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
Vijaya Karnataka Web DRW-11KND2
ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದ ಚಂದ್ರಶೇಖರ ಜುಟ್ಟಲ ಅವರ ನಿವಾಸದಲ್ಲಿ ನಡೆದ ಅಹಿಂದ ವರ್ಗದ ಸಭೆಯಲ್ಲಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು.


ತಾಲೂಕಿನ ಕಮಡೊಳ್ಳಿ ಗ್ರಾಮದ ಚಂದ್ರಶೇಖರ ಜುಟ್ಟಲ ಅವರ ನಿವಾಸದಲ್ಲಿ ಶನಿವಾರ ಅಹಿಂದ ವರ್ಗದ ಸಭೆ ನಡೆಸಿ ಮಾತನಾಡಿದರು.

ಜನಸಾಮಾನ್ಯರೊಂದಿಗೆ ಬೆರೆತು ಕಾರ್ಯನಿರ್ವಹಿಸಿದ ಶಿವಳ್ಳಿ ಅವರ ಮಾಡಿದ ಅಭಿವೃದ್ಧಿ ಸಾಕಷ್ಟಿದೆ. ಅಲ್ಲದೆ ಜೆಡಿಎಸ್‌ ಪಕ್ಷ ದ ನಾಯಕರು ನಮ್ಮೊಂದಿಗಿದ್ದಾರೆ. ಸಿದ್ದರಾಮಯ್ಯನವರಲ್ಲಿ ವಿಶ್ವಾಸವಿರುವ ನಮ್ಮ ನಾಯಕರ ಕಾರ್ಯಗಳಿಂದ ಇಲ್ಲಿ ಕಾಂಗ್ರೆಸ್‌ ಪಕ್ಷ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ ಮೋದಿಯವರ ಮಂತ್ರ ಇಂದು ಯಾವುದೇ ರೀತಿ ಕೆಲಸ ಮಾಡದೇ ದೇಶದ ಆರ್ಥಿಕ ಪರಿಸ್ಥಿತಿ ಕೆಟ್ಟಿದೆ. ಬಿಜೆಪಿಯವರು ಜಾತಿ ಧರ್ಮದ ಮೇಲೆ ಚುನಾವಣೆ ಮಾಡುತ್ತಿದ್ದು, ಕೇವಲ 5 ವರ್ಷದಲ್ಲಿ 82 ಸಾವಿರ ಲಕ್ಷ ಕೋಟಿ ರೂ.ಯಷ್ಟು ಆರ್ಥಿಕ ದಿವಾಳಿ ಎಬ್ಬಿಸಿದ್ದಾರೆ ಎಂದರು.

ಸಭೆಯಲ್ಲಿ ಟಿ. ಈಶ್ವರ, ವೀರಕುಮಾರ ಪಾಟೀಲ, ಚಂದ್ರಶೇಖರ ಜುಟ್ಟಲ, ಹನಮಂತಪ್ಪ ಆನಿ, ಮಹೇಶ ಕನಕಣ್ಣವರ, ಸುರೇಶ ಸವಣೂರ, ಮಲ್ಲಪ್ಪ ದೊಡ್ಡೋಲಿ, ಮಲ್ಲಿಕಾರ್ಜುನಗೌಡ ಪಾಟೀಲ, ಶಂಕರಗೌಡ ಪಾಟೀಲ, ಪುಟ್ಟಪ್ಪ ಸಣ್ಣಪ್ಪನವರ, ಅಬ್ದುಲ್‌ಸಾಬ ಕುಸುಗಲ್‌, ಫಕ್ಕೀರಪ್ಪ ಆನಿ, ಶೇಖರ ಮುಡೆಮ್ಮನವರ, ಗುರು ಚಲವಾದಿ, ಮಲ್ಲೇಶ ಕಾಳೆ, ಕಲಂದರಸಾಬ ದಂಡಿನ ಇದ್ದರು

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ ಜಾರಕಿಹೊಳಿ ಬಿಜೆಪಿಯವರು ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ನಮ್ಮ ಸ್ಥಳೀಯ ನಾಯಕರೆಲ್ಲ ಸೇರಿಕೊಂಡು ಈ ಚುನಾವಣೆಯನ್ನು ಎದುರಿಸುತ್ತಿದ್ದೇವೆ. 20 ಶಾಸಕರು ಮಾರುಕಟ್ಟೆಯಲ್ಲಿ ಸಿಗುವ ವಸ್ತುವೆ? ಅದೆಲ್ಲ ಸಾಧ್ಯವಾಗದು. ರಮೇಶ ಜಾರಕಿಹೊಳಿ ಬಿಜೆಪಿ ಅವರೊಂದಿಗೆ ಇದ್ದರೂ ಇರಬಹುದು ನನಗೆ ಗೊತ್ತಿಲ್ಲ ಎಂದು ಜಾರಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ