ಆ್ಯಪ್ನಗರ

ಅನಂತಕುಮಾರ್ ಹುಬ್ಬಳ್ಳಿ ನಿವಾಸದಲ್ಲಿ ನೀರವ ಮೌನ

ಇಂದಿರಾ ನಗರದಲ್ಲಿರುವ ಅನಂತಕುಮಾರ್ ಅವರ ವಿಭವ ನಿವಾಸ,ತಂದೆ ನಾರಾಯಣ ಶಾಸ್ತ್ರಿಗಳು ಕಟ್ಟಿಸಿದ್ದ ಮನೆ.

Vijaya Karnataka Web 12 Nov 2018, 11:57 am
ಹುಬ್ಬಳ್ಳಿ: ನಗರದಲ್ಲಿರುವ ಅನಂತಕುಮಾರ್ ನಿವಾಸದಲ್ಲಿ ನೀರವ ಮೌನ ಆವರಿಸಿದೆ.
Vijaya Karnataka Web Ananth Kumar


ಇಂದಿರಾ ನಗರದಲ್ಲಿರುವ ಅನಂತಕುಮಾರ್ ಅವರ ವಿಭವ ನಿವಾಸ, ತಂದೆ ನಾರಾಯಣ ಶಾಸ್ತ್ರಿಗಳು ಕಟ್ಟಿಸಿದ್ದ ಮನೆ.

ಇದೇ ಮನೆಯಿಂದ ಅನಂತ್ ರಾಷ್ಟ್ರಮಟ್ಟದ ನಾಯಕರಾಗಿ ಬೆಳೆದಿದ್ದು, ಹುಬ್ಬಳ್ಳಿಗೆ ಬಂದಾಗ ಇಲ್ಲಿಯೇ ವಾಸ್ತವ್ಯ ಹೂಡುತ್ತಿದ್ದರು. ಅವರ ನಿಧನದ ಸುದ್ದಿ ಕೇಳಿ ನೆರೆಹೊರೆಯವರು ತೀವ್ರ ಆಘಾತಗೊಂಡಿದ್ದು, ಅನಂತ್ ಅವರೊಂದಿಗಿನ ಒಡನಾಟವನ್ನು ನೆನೆದು ಕಂಬನಿ ಮಿಡಿದಿದ್ದಾರೆ.

ಈ ಮನೆಯಲ್ಲಿದ್ದ ಅನಂತ್ ಕುಟುಂಬದ ಸದಸ್ಯರು ಬೀಗಹಾಕಿ ಹದಿನೈದು ದಿನಗಳ ಹಿಂದೆ ಬೀಗ ಹಾಕಿ ಬೆಂಗಳೂರಿಗೆ ತೆರಳಿದ್ದಾರೆ.

ಉಪ ಮೇಯರ್ ಆಗಿದ್ದ ತಾಯಿ

ಅನಂತ ಕುಮಾರ್ ತಂದೆ ನಾರಾಯಣ ಮೂರ್ತಿ ರೈಲ್ವೆ ಉದ್ಯೋಗಿಯಾಗಿದ್ದು ಹಲವು ವರ್ಷಗಳ ಕಾಲ ಅವರು ಹುಬ್ಬಳ್ಳಿಯಲ್ಲೇ ವಾಸವಾಗಿದ್ದರು. 1970-80ರ ದಶಕದಲ್ಲಿ ಅನಂತ್ ಅವರ ಜೀವನ ಹುಬ್ಬಳ್ಳಿಯಲ್ಲೇ ಸಾಗಿತ್ತು. ಅವರ ತಾಯಿ ಗಿರಿಜಾ ಶಾಸ್ತ್ರಿ ಸಾಮಾಜಿಕ ಕಾರ್ಯಕರ್ತೆ, ಜತೆಗೆ ಹುಬ್ಬಳ್ಳಿ ಜನಸಂಘದ ಸಕ್ರಿಯ ಸದ್ಯರಾಗಿದ್ದರು. ಸೆಪ್ಟೆಂಬರ್ 3, 1985 ರಿಂದ ಸೆಪ್ಟಂಬರ್ 2, 1986 ರವರೆಗೆ ಹುಬ್ಬಳ್ಳಿ-ಧಾರವಾಡ ಪುರಸಭೆಯ ಎರಡನೇ ಮಹಿಳಾ ಉಪ ಮೇಯರ್ ಆಗಿ ಅವರು ಸೇವೆ ಸಲ್ಲಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ